ಕ್ರಿಕೆಟ್ ಜಗತ್ತಿನ ದಂತಕಥೆ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಬಾಲಿವುಡ್ ರಂಗಕ್ಕೆ ಎಂಟ್ರಿ ಕೊಡಲಿದ್ದಾರಂತೆ. ಈಗಾಗಲೇ ಸೋಷಿಯಲ್ ಮೀಡಿಯಾದ ಸೆನ್ಸೆಷನಲ್ ಸ್ಟಾರ್ ಆಗಿರೋ ಸಾರಾ ನಟನೆಯತ್ತ ಮುಖ ಮಾಡಲಿದ್ದಾರೆ ಎಂಬ ಸುದ್ದಿ ಬಿಟೌನ್ನಲ್ಲಿನ ಭಾರೀ ಸದ್ದು ಮಾಡ್ತಿದೆ.

ಈಗಾಗಲೇ ಸಾಕಷ್ಟು ಜನಪ್ರಿಯ ಬಟ್ಟೆ ಬ್ರ್ಯಾಂಡ್ಗಳಿಗೆ ಸಾರಾ ರಾಯಭಾರಿಯಾಗಿದ್ದಾರೆ. ಈ ಮೂಲಕ ಸಾರಾ ಸಿನಿಪ್ರಿಯರ ಗಮನ ಸೆಳೆದಿದ್ದಾರೆ. ಚಿತ್ರರಂಗಕ್ಕೆ ಎಂಟ್ರಿ ಕೊಡೋದಕ್ಕೆ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಜತೆಗೆ ನಟನೆಯ ತರಬೇತಿ ಕೂಡ ಪಡೆಯುತ್ತಿದ್ದಾರೆ. ಸಾರಾ ಪ್ರತಿ ಹೆಜ್ಜೆಯಲ್ಲೂ ಸಚಿನ್ ದಂಪತಿ ಬೆಂಬಲ ಇದ್ದೆ ಇರುತ್ತದೆ. ಹಾಗಾಗಿ ಸಾರಾ ಕನಸಿಗೆ ಬೆಂಬಲ ಸೂಚಿಸಿದ್ದಾರಂತೆ. ಇದನ್ನೂ ಓದಿ: ದಕ್ಷಿಣದ ಸಿನಿಮಾ ನೋಡಲ್ಲ: ವಿವಾದಕ್ಕೆ ಕಾರಣವಾದ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ
View this post on Instagram
ಬಾಲಿವುಡ್ ಸ್ಟಾರ್ ಕಿಡ್ಗಳ ಮಕ್ಕಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವುದು ಹೊಸ ವಿಚಾರವೇನಲ್ಲ ಆದರೆ ಕ್ರಿಕೆಟ್ ತಾರೆಯ ಮಗಳಾಗಿರುವ ಸಾರಾ ತೆಂಡೂಲ್ಕರ್, ಬಾಲಿವುಡ್ ಎಂಟ್ರಿಯ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಇನ್ನು ಅದ್ಯಾವ ಸ್ಟಾರ್ ಜತೆ ನಾಯಕಿಯಾಗಿ ಸಾರಾ ಕಾಣಿಸಿಕೊಳ್ಳುತ್ತಾರೆ ಎಂಬುದರ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಕೆರಳಿಸಿದೆ.

 
			
 
		 
		 
                                
                              
		