ಹಾಸನದಲ್ಲಿ ಜೆಡಿಎಸ್- ಬಿಜೆಪಿ ಎರಡೇ ಆಯ್ಕೆ, ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ: ಪ್ರೀತಂಗೌಡ

Public TV
2 Min Read

ಹಾಸನ: ಜಿಲ್ಲೆಯಲ್ಲಿ ಎರಡು ಆಯ್ಕೆ ಇದೆ. ಒಂದು ಜೆಡಿಎಸ್ ಅಥವಾ ಬಿಜೆಪಿ, ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಶಾಸಕ ಪ್ರೀತಂಗೌಡ ವ್ಯಂಗ್ಯವಾಡಿದರು.

ಹಾಸನದಲ್ಲಿ ನಡೆದ ಶಾಸಕ ಎನ್. ಮಹೇಶ್ ಅಭಿಮಾನಿಗಳು ಹಾಗೂ ಬೆಂಬಲಿಗರು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಜೆಡಿಎಸ್‌  ದಲಿತ ವಿರೋಧಿ ಕುಟುಂಬ ಎಂದು ಕುಟುಕಿದರು. ದಲಿತ ಬಂಧುಗಳು ದೊಡ್ಡಗೌಡರ ಮನೆಗೆ ದಲಿತ ಸಮಾಜದ ಬಂಧುಗಳು ಹೋಗಿ ಬಂದ ನಂತರ ಮತ್ತೆ ಸ್ನಾನ ಮಾಡಿ ಬರುವ ಸಂಸ್ಕೃತಿಯನ್ನು ಒಗ್ಗೂಡಿಸಿಕೊಂಡಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಜೆಡಿಎಸ್ ಹಾಗೂ ಬಿಜೆಪಿ ನಡುವೆ ಹಾಸನ ಜಿಲ್ಲೆಯಲ್ಲಿ ರಾಜಕಾರಣ ನಡೆಯುತ್ತಿದೆ. ಜೆಡಿಎಸ್ ಪಕ್ಷದವರು ಯಾವ ರೀತಿ ಅಂತ ಹೇಳಿದರೆ, ಒಬ್ಬ ದಲಿತ ಸಮಾಜದ ಬಂಧು ಅವರ ಮನೆಗೆ ಹೋದರೆ ಇಲ್ಲಿಯತನಕ ಒಳಗೆ ಹೋಗಿರುವ ಒಂದು ನಿದರ್ಶನ ನಮ್ಮ ಕಣ್ಮುಂದೆ ಇಲ್ಲ. ಅಂತಹ ನಾಯಕತ್ವ ಜೆಡಿಎಸ್ ಅವರದ್ದು ಎಂದರು.

ಹಾಸನ ಜಿಲ್ಲೆಯಲ್ಲಿ ದಲಿತ ಸಮಾಜವನ್ನು ಯಾರು ಕೇವಲವಾಗಿ ನೋಡ್ತಾರೆ ಅಂದರೆ ಅದು ಜಾತ್ಯತೀತ ಜನತಾದಳದವರು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮೋದಿಯನ್ನು ಭೇಟಿಯಾಗಿ ರುದ್ರಾಕ್ಷಿ ಮಾಲೆ ನೀಡಿದ ಅನುಪಮ್ ಖೇರ್

ಇದೇ ವೇಳೆ ಕಾಂಗ್ರೆಸ್ ಪಕ್ಷದ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಅಂಬೇಡ್ಕರ್ ಅವರ ಅಂತ್ಯಸಂಸ್ಕಾರ ಮಾಡಲು ದೆಹಲಿಯಲ್ಲಿ 6*3 ಜಾಗ ಕೊಡಲಿಲ್ಲ. ಅದೇ ಅವರ ಗಾಂಧಿ ಕುಟುಂಬಕ್ಕೆ ಒಬ್ಬರ ಅಂತ್ಯ ಸಂಸ್ಕಾರ ಮಾಡಲು ಮೂವತ್ತು ಎಕರೆ, ಐವತ್ತು ಎಕರೆ ಅವರ ತಾತನ ಮನೆ ಆಸ್ತಿ ಅನ್ನುವ ರೀತಿಯಲ್ಲಿ ಘಾಟ್‍ಗಳನ್ನು ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಪತಿ ಜೊತೆಗಿನ ಫೋಟೋ ಹಂಚಿಕೊಂಡ ಐಎಎಸ್ ಟಾಪರ್ ಟೀನಾ ದಾಬಿ

ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದವರು ಕಾಂಗ್ರೆಸ್‍ನವರು. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದವರು ಕಾಂಗ್ರೆಸ್‍ನವರು. ಭಾರತೀಯ ಜನತಾ ಪಾರ್ಟಿ, ದಲಿತ ಸಮಾಜದ ಬಂಧುಗಳನ್ನು ಸಮಾನತೆಯಿಂದ ನೋಡುತ್ತೆ. ಹಾಸನ ಜಿಲ್ಲೆಯಲ್ಲಿ ನಮ್ಮನ್ನೆಲ್ಲ ಕಾಪಾಡುವವರು ಯಾರೂ ಎಂಬ ಪ್ರಶ್ನೆಯಿತ್ತು. ನಿಮ್ಮ ಹಳ್ಳಿಗೆ ಹೋಗಿ ಹೇಳಿ ನರೇಂದ್ರ ಮೋದಿ, ಅಮಿತ್ ಶಾ ಇದ್ದಾರೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *