15% ಜನರಿಗಾಗಿ 85% ನಾಗರಿಕರ ಮೂಲಭೂತ ಹಕ್ಕು ಉಲ್ಲಂಘನೆ – ಹಲಾಲ್ ಉತ್ಪನ್ನ ನಿಷೇಧಿಸುವಂತೆ ಸುಪ್ರೀಂನಲ್ಲಿ ಅರ್ಜಿ

Public TV
1 Min Read

ನವದೆಹಲಿ: ದೇಶಾದ್ಯಂತ ಹಲಾಲ್ ಉತ್ಪನ್ನಗಳನ್ನು ನಿಷೇಧಿಸುವಂತೆ ಕೋರಿ ಸುಪ್ರೀಂಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಕೆಯಾಗಿದೆ.

ವಕೀಲ ವಿಭೋರ್ ಆನಂದ ಎನ್ನುವವರು ಹಲಾಲ್ ಉತ್ಪನ್ನ ಹಾಗೂ ಹಲಾಲ್ ಮಾರಾಟ ಮಾಡುವುದು ಸಂವಿಧಾನದ 14 ಹಾಗೂ 21ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಪಿಐಎಲ್‍ನಲ್ಲಿ ಮನವಿ ಮಾಡಿದ್ದಾರೆ.

ದೇಶದಲ್ಲಿ ಹಲಾಲ್ ಉತ್ಪನ್ನಗಳನ್ನು ಬಳಸುವ 15% ಜನಸಂಖ್ಯೆಯ ಸಲುವಾಗಿ 85% ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಪ್ರತಿಪಾದಿಸಿರುವ ಅವರು, ಹಲಾಲ್ ಉತ್ಪನ್ನಗಳು ಮತ್ತು ಹಲಾಲ್ ಪ್ರಮಾಣೀಕರಣವನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಅರ್ಜಿಯಲ್ಲಿ ಕೋರಿದ್ದಾರೆ.

ಅರ್ಜಿಯಲ್ಲಿ ಏನಿದೆ?:
ದೇಶದಲ್ಲಿ 1974ರಲ್ಲಿ ಹಲಾಲ್ ಪ್ರಮಾಣೀಕರಣ ವ್ಯವಸ್ಥೆ ಆರಂಭವಾಯಿತು. ಮೊದಲಿಗೆ ಇದು ಮಾಂಸದ ಉತ್ಪನ್ನಗಳಿಗೆ ಸೀಮಿತವಾಗಿತ್ತು. ಈಗ ಫಾರ್ಮಾಸ್ಯುಟಿಕಲ್ಸ್, ಕಾಸ್ಮೆಟಿಕ್ಸ್, ಆರೋಗ್ಯ ಉತ್ಪನ್ನಗಳು, ಟಾಯ್ಲೆಟರಿ, ವೈದ್ಯಕೀಯ ಉಪಕರಣಗಳಿಗೂ ಹಲಾಲ್ ಪ್ರಮಾಣೀಕರಣ ನೀಡಲಾಗುತ್ತಿದೆ.

ಹಲಾಲ್ ಸ್ನೇಹಿಪ್ರವಾಸೋದ್ಯಮ, ಮೆಡಿಕಲ್ ಟೂರಿಸಂ, ಉಗ್ರಾಣ ಪ್ರಮಾಣೀಕರಣ, ಹಲಾಲ್ ರೆಸ್ಟೋರೆಂಟ್‍ಗಳು, ಹಲಾಲ್ ಟ್ರೇನಿಂಗ್ ಇತ್ಯಾದಿಗಳು ಕೂಡ ಆರಂಭವಾಗಿದೆ. ಇಷ್ಟೇ ಅಲ್ಲದೇ ಸರಕು ಸಾಗಣೆ, ಮಾಧ್ಯಮ, ಬ್ರ್ಯಾಂಡಿಂಗ್ ಹಾಗೂ ಮಾರ್ಕೆಟಿಂಗ್ ಕ್ಷೇತ್ರಕ್ಕೂ ಹಲಾಲ್ ಕಾಲಿಟ್ಟಿದೆ.

meat ban

ಇಸ್ಲಾಮಿನ ಪ್ರಕಾರ ಹಲಾಲ್ ಎಂಬ ಪದವು ಅನುಮತಿಸಲಾದ ಅಥವಾ ಕಾನೂನುಬದ್ಧವಾಗಿದೆ ಎಂದರ್ಥವಾಗಿದೆ. ಭಾರತ ಜಾತ್ಯತೀತ ರಾಷ್ಟ್ರವಾಗಿದೆ. ಇದು ಸಂವಿಧಾನದಲ್ಲೂ ಉಲ್ಲೇಖವಾಗಿದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬರ ಮೇಲೂ ಒಂದು ಧರ್ಮದ ನಂಬಿಕೆಯನ್ನು ಹೇರಿಕೆ ಮಾಡುವುದು ಸರಿಯಲ್ಲ. ಇದರಿಂದಾಗಿ ದೇಶಾದ್ಯಂತ ಹಲಾಲ್ ಉತ್ಪನ್ನಗಳನ್ನು ಹಾಗೂ ಹಲಾಲ್ ಪ್ರಮಾಣೀಕರಣವನ್ನು ನಿಷೇಧಿಸಬೇಕು. ಇದನ್ನೂ ಓದಿ: ಇಂದು ರಾತ್ರಿ ಬೈಯಪ್ಪನಹಳ್ಳಿ, ಎಂ.ಜಿ ರಸ್ತೆ ಮೆಟ್ರೋ ರೈಲು ಸ್ಥಗಿತ

ಕೆಎಫ್‍ಸಿ, ನೆಸ್ಲೆ, ಬ್ರಿಟಾನಿಯಾ ಹಾಗೂ ಇತರೆ ಕಂಪನಿಗಳಿಗೆ ಹಲಾಲ್ ಪ್ರಮಾಣೀಕೃತ ಆಹಾರಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಸೂಚಿಸಬೇಕು. ಆಹಾರೋತ್ಪನ್ನಗಳಿಗೆ ಪ್ರಮಾಣೀಕರಣ ನೀಡಲೆಂದೇ ಸರ್ಕಾರ ಆಹಾರ ಸುರಕ್ಷತೆ ಪ್ರಾಧಿಕಾರ (ಎಫ್‍ಎಸ್‍ಎಸ್‍ಎಐ) ಇರುವಾಗ ಅನಧಿಕೃತ ಹಲಾಲ್ ಪ್ರಮಾಣೀಕರಣ ವ್ಯವಸ್ಥೆ ಏಕಿರಬೇಕು ಎಂದು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಇದನ್ನೂ ಓದಿ: ಮುಸ್ಲಿಮ್‌ ಬಾಹುಳ್ಯ ಜಾಗದಲ್ಲಿ ಅಣ್ಣಮ್ಮ ದೇವಿ ಮೆರವಣಿಗೆ – ದಾರಿ ಬದಲಾವಣೆ ಮಾಡುವಂತೆ ಮನವಿ

Share This Article
Leave a Comment

Leave a Reply

Your email address will not be published. Required fields are marked *