ಚಿಕ್ಕಮಗಳೂರು: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತರಹ ಮೈ ಕೊಡವಿ ನಿಲ್ಲಿ ಬಸವರಾಜ್ ಬೊಮ್ಮಾಯಿ ಅವರೇ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಹನುಮ ಜಯಂತಿ ದಿನದಂದು ಹುಬ್ಬಳ್ಳಿಯಲ್ಲಿ ನಡೆದ ಗಲಾಟೆ ಪ್ರಕರಣ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್‍ನಲ್ಲಿ ಗಲಭೆಕೋರರ ಮನೆ, ಅಂಗಡಿಯನ್ನು ಧ್ವಂಸಗೊಳಿಸಿದಂತೆ ಕರ್ನಾಟಕದಲ್ಲಿ ಕೂಡ ಗಲಭೆಕೋರರ ಮನೆಗಳನ್ನು ಕಿತ್ತು ಬಿಸಾಕಿ ಎಂದು ನಾನು ಗೃಹ ಸಚಿವರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ಅಕ್ರಮ ಮನೆಗಳು, ಅಕ್ರಮ ಬಡಾವಣೆಗಳನ್ನು ಕಿತ್ತು ಬಿಸಾಕಿ, ಅವರ ಸೊಕ್ಕು ಹಾಗೂ ಅಹಂಕಾರವನ್ನು ಅಡಗಿಸಿ. ಅವರ ದೇಶದ್ರೋಹಿ ಕೃತ್ಯವನ್ನು ಮಟ್ಟ ಹಾಕಿ. ಒಂದು ಬಾರಿ ಯೋಗಿ ಆದಿತ್ಯನಾಥ್ ಅವರಂತೆ ಮೈ ಕೊಡವಿ ನಿಲ್ಲಿ ಬಸವರಾಜ್ ಬೊಮ್ಮಾಯಿ ಅವರೇ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಹಿಂಸಾಚಾರ ಪೂರ್ವನಿಯೋಜಿತ ಸಂಚು: ಬಿರುಗಾಳಿ ಎಬ್ಬಿಸಿದ ವಾಟ್ಸಪ್ ಆಡಿಯೋ
ಅಮಾಯಕರು ಅಂತ ಮುಸ್ಲಿಂ ಕಿಡಿಗೇಡಿಗಳ ಪರವಾಗಿ ನೀವು ನಿಲ್ಲುತ್ತಿರುವುದು ನಿಮಗೆ ಕ್ಷೋಭೆ ತರುವುದಿಲ್ಲ. ಸಿಸಿಟಿ ದೃಶ್ಯವನ್ನು ಸರಿಯಾಗಿ ಪರಿಶೀಲಿಸಿ ಇಲ್ಲಿ ಯಾರು ಅಮಾಕರಲ್ಲ, ಎಲ್ಲರೂ ಗುಂಡಾಗಳೇ. ಪೊಲೀಸರು ಸರಿಯಾಗಿ ತನಿಖೆ ನಡೆಸಿದ್ದಾರೆ. ಸರ್ಕಾರ ಸರಿಯಾದ ಕ್ರಮ ಕೈಗೊಂಡಿದೆ. ಈ ಘಟನೆಗೆ ಅಲ್ಲಿನ ಕಾಂಗ್ರೆಸ್ ಶಾಸಕ ಅಬ್ಬಯ್ಯ ಅವರು ಹೊಣೆಗಾರರಾಗಿದ್ದು, ಮುಂದಿನ ಚುನಾವಣೆಯಲ್ಲಿ ಮುಸ್ಲಿಮರ ಓಟ್‍ಗಾಗಿ ಇರುವ ಈ ಘಟನೆಗೆ ಕುಮ್ಮತ್ತು ನೀಡಿದ್ದಾರೆ. ಇದರ ಹಿಂದೆ ಎಂಐಎಂ ಇದೆ ಎಂದು ನಿಶ್ಚಿತವಾಗಿ ನಾನು ಹೇಳುತ್ತೇನೆ. ಬುದ್ದಿಜೀವಿಗಳು ಮುಸ್ಲಿಮರಿಂದ ಗಲಾಟೆಯಾಯಿತು ಎಂದರೆ ಸುಮ್ಮನೆ ಇರುತ್ತಾರೆ. ಅದೇ ಮುಸ್ಲಿಮರಿಗೆ ತೊಂದರೆಯಾಯಿತು ಎಂದ ಕ್ಷಣ ಬಾಯಿಬಿಡುತ್ತಾರೆ. ಬಾಯಿ ಮುಚ್ಚಿಕೊಂಡಿರುವ ಬುದ್ಧಿ ಜೀವಿಗಳು ಮುಸ್ಲಿಂ ಕ್ರಿಶ್ಚಿಯನ್‍ರ ಎಜೆಂಟ್‍ಗಳಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಾಜಕೀಯ ಎಂದರೆ ಏನು ಎಂಬುವುದು ನನಗೆ ಗೊತ್ತಿಲ್ಲ. ಆದರೆ ಮುಸ್ಲಿಂ ಸಮಾಜ ಹತಾಶರಾಗಿದ್ದಾರೆ. ಹಿಜಬ್, ಹಲಾಲ್ ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ಅಪಹಾಸ್ಯಕ್ಕೆ ಒಳಗಾಗುತ್ತಿದ್ದಾರೆ. ಈ ಹಿನ್ನೆಲೆ ಸಂಘರ್ಷದ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ದೇವಸ್ಥಾನವನ್ನು ಭಗ್ನ ಮಾಡಿದ್ದರೂ, ಹಿಂದೂ ಸಮಾಜ ಕೆರಳದೇ ಶಾಂತ ರೀತಿಯಲ್ಲಿದೆ. ಹೀಗಾಗಿ ಮೌಲಿಗಳು ಇಂತರವನ್ನು ಹದ್ದುಬಸ್ತಿನಲ್ಲಿ ಇಡಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಕ್ಕಾ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿ ಪೋಸ್ಟ್ – ಹುಬ್ಬಳ್ಳಿಯಲ್ಲಿ ಮುಸ್ಲಿಂ ಪುಂಡರಿಂದ ದಾಂಧಲೆ
ಹುಬ್ಬಳ್ಳಿಯಲ್ಲಿ ನಡೆದ ಘಟನೆ ಪೂರ್ವನಿಯೋಜಿತವಾಗಿದ್ದು, ಮುಸ್ಲಿಮರ ಕೆಪಿಸಿಸಿ ಕಾರ್ಯಧ್ಯಕ್ಷರು ಅಮಾಕರನ್ನು ಬಂಧಿಸುತ್ತಿದ್ದಾರೆ ಅಂತ ಹೇಳುತ್ತಿದ್ದಾರೆ. ಕಾಂಗ್ರೆಸ್‍ನವರು, ಕುಮಾರಸ್ವಾಮಿ ಅವರು ಅಮಾಕರನ್ನು ಬಂಧಿಸುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಮೊದಲಿನಿಂದಲೂ ಇವರ ನಿಲುವು ಹಿಂದೂ ವಿರೋಧವಾಗಿಯೇ ಇದೆ ಮತ್ತು ಮಸ್ಲಿಮರ ಪರವಾಗಿಯೇ ಇದೆ. ಮುಸ್ಲಿಮರ ಓಟ್‍ಗೋಸ್ಕರ ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ ಎಂಬುವುದಕ್ಕೆ ಇದೊಂದೇ ಸಾಕ್ಷಿ. ಹನುಮ ಜಯಂತಿ ದಿನವೇ ಹುನುಮಂತನ ದೇವಾಲಯವನ್ನೇ ಒಡೆದು ಹಾಕಿದ್ದಾರೆ. ಇದು ಅಮಾಕರು ಮಾಡುವ ಕೆಲಸನಾ? ಜನರ ರಕ್ಷಣೆ ಮಾಡುವ ಪೊಲೀಸ್ ಇಲಾಖೆಯ ಅಧಿಕಾರಗಳ ಮೇಲೆ ಹಲ್ಲೆ ನಡೆಸಿದ್ದು ಅಮಾಕರು ಮಾಡುವ ಕೆಲಸನಾ? ಹೋಮ ಹವನ ಮಾಡುವಂತಹ ನೀವು ಪೊಲೀಸ್ ಸ್ಟೇಷನ್ ಮೇಲೆ ದೇವಸ್ಥಾನದ ಮೇಲೆ ಕಲ್ಲು ತೋರಿದವರನ್ನು ಅಮಾಯಕರು ಎನ್ನುತ್ತೀರಾ ನಿಮಗೆ ನಾಚಿಕೆ ಆಗಲ್ವಾ? ಮುಸ್ಲಿಮರ ಪರ ನಿಂತು ಕಾಂಗ್ರೆಸ್ ನೆಲಕಚ್ಚಿದೆ ಎಂದು ಹರಿಹಾಯ್ದಿದ್ದಾರೆ.