ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2’ ಸಿನಿಮಾ ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸಿನ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿದೆ. ಬಿಡುಗಡೆಯಾದ ಒಂದೇ ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿ ಶರವೇಗದಲ್ಲಿ ಮುನ್ನುಗ್ಗುತ್ತಿದೆ. ಕೇವಲ ಗಲ್ಲಾಪೆಟ್ಟಿಗೆ ಮಾತ್ರವಲ್ಲ, ವಿಮರ್ಶಕರು ಕೂಡ ಸಿನಿಮಾವನ್ನು ಕೊಂಡಾಡಿದ್ದಾರೆ. ಆದರೆ, ಬಾಲಿವುಡ್ ನಟ ಮಾತ್ರ ಈ ಚಿತ್ರಕ್ಕೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾನೆ. ಇದನ್ನೂ ಓದಿ : ಕನ್ನಡದಲ್ಲೇ ಕೆಜಿಎಫ್ ನೋಡಿ ಫಿದಾ ಆದ ತಲೈವಾ
ಕನ್ನಡದ ಸಿನಿಮಾವೊಂದು ವಿಶ್ವ ಮಟ್ಟದಲ್ಲಿ ಎದೆಸೆಟೆದು ನಿಂತಾಗ, ಕೆಲವರಿಗೆ ಅದನ್ನು ತಡೆಯುವುದಕ್ಕೆ ಆಗುತ್ತಿಲ್ಲ. ಬಿಟೌನ್‍ನ ಅದೆಷ್ಟೋ ಕಲಾವಿದರು ಮತ್ತು ತಂತ್ರಜ್ಞರು ಕೆಜಿಎಫ್ ಸಿನಿಮಾದ ಮುಂದೆ ಮಂಡಿಯೂರಿ ಕೂತಿದ್ದಾರೆ. ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಒಂದರ ಮೇಲೊಂದು ಟ್ವಿಟ್ ಮಾಡಿ ಚಿತ್ರವನ್ನು ಹಾಡಿ ಹೊಗಳುತ್ತಿದ್ದಾರೆ. ಆದರೆ ಬಾಲಿವುಡ್ ನಟ ಮಾತ್ರ ‘ಕೆಜಿಎಫ್ 2 ಡಿಜಾಸ್ಟರ್ ಸಿನಿಮಾ’ ಎಂದು ಟ್ವೀಟ್ ಮಾಡಿದ್ದಾನೆ. ಇದನ್ನೂ ಓದಿ: ಕೆಜಿಎಫ್ 2 : ಯಾವ ರಾಜ್ಯದಲ್ಲಿ ಎಷ್ಟು ಕಲೆಕ್ಷನ್? ಪಕ್ಕಾ ಲೆಕ್ಕ
ಈ ನಟ ಹೀಗೆ ಬರೆಯುವುದು ಮೊದಲೇನೂ ಅಲ್ಲ. ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಚಿತ್ರಕ್ಕೂ ಕೂಡ ನೆಗೆಟಿವ್ ಕಾಮೆಂಟ್ ಮಾಡಿದ್ದ. ಇದೊಂದು ಕಳಪೆ ಚಿತ್ರ ಎಂದು ಹೇಳಿದ್ದು, ನಟರ ಬಗ್ಗೆಯೂ ಲೇವಡಿ ಮಾಡಿದ್ದ. ಈಗ ಕೆಜಿಎಫ್ ಸಿನಿಮಾದ ಬಗ್ಗೆಯೂ ಹಾಗೆಯೇ ಕಳಪೆಯಾಗಿಯೇ ಬರೆದಿದ್ದಾನೆ. ‘ಕೆಜಿಎಫ್ 2 ಸಿನಿಮಾ ಮೂರು ಗಂಟೆಯ ಟಾರ್ಚರ್’ ಎಂದು ಕಾಮೆಂಟ್ ಬರೆದಿದ್ದಾನೆ. ಈ ನಡೆಗೆ ಸಿನಿಮಾ ನೋಡಿದ ಪ್ರೇಕ್ಷಕರಿಗೆ ಆ ನಟನಿಗೆ ‘ಥುಪಕ್’ ಅಂತ ಉಗಿದಿದ್ದಾರೆ. ಇದನ್ನೂ ಓದಿ: `ಕೆಜಿಎಫ್ 2’ಗಾಗಿ ಲಂಡನ್‌ನಿಂದ ಬೆಂಗಳೂರಿಗೆ ಬಂದ ಅಭಿಮಾನಿ!
ಅಷ್ಟಕ್ಕೂ ಕಾಮೆಂಟ್ ಮಾಡಿದ ನಟ ಬೇರೆ ಯಾರೂ ಇಲ್ಲ. ಈ ಹಿಂದೆ ‘ದೇಶದ್ರೋಹಿ’ ಎಂಬ ಸಿನಿಮಾವನ್ನು ನಿರ್ಮಾಣ ಮಾಡಿ, ನಟಿಸಿದ ಮಹಾನುಭಾವ ಕಮಲ್ ಆರ್.ಖಾನ್. ಇವನೊಬ್ಬ ಸ್ವಯಂ ಘೋಷಿತ ವಿಮರ್ಶಕ. ಬಾಯಿಗೆ ಬಂದಂತೆ ಬರೆದು, ಕೊನೆಗೆ ಜನರ ಕಡೆಯಿಂದ ಉಗಿಸಿಕೊಳ್ಳುವ ಮಹಾನ್ ನಟ. ನೆಗೆಟಿವ್ ಆಗಿ ಪೋಸ್ಟ್ ಮಾಡುವುದು, ಆ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುವುದೇ ಇವನ ಉದ್ಯೋಗವಾಗಿದೆ. ಯಾರೂ ಸೀರಿಯಸ್ ಆಗಿ ತಗೆದುಕೊಳ್ಳದೇ ಇರುವ ಕಾರಣಕ್ಕಾಗಿ ಸಿನಿಮಾಗಳ ಬಗ್ಗೆ, ವ್ಯಕ್ತಿಗಳ ಬಗ್ಗೆ ಹೀಗೆ ತಲೆಕೆಟ್ಟವರಂತೆ ಬರೆಯುತ್ತಲೇ ಇರುತ್ತಾನೆ. ಇದನ್ನೂ ಓದಿ : ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಮದುವೆ ಆದ್ರಾ? ಹುಡುಗ ಯಾರು?
ಕಮಲ್ ಈವರೆಗೂ ಏನೆಲ್ಲ ಬರೆದಿದ್ದಾನೋ ಅದನ್ನು ಓದಿಕೊಂಡು ಜನರು ಸುಮ್ಮನಿದ್ದರು. ಕೆಜಿಎಫ್ 2 ತಂಟೆಗೆ ಬರುತ್ತಿದ್ದಂತೆಯೇ ಹಿಗ್ಗಾಮುಗ್ಗ ಜಾಡಿಸಿದ್ದಾರೆ ಸಿನಿ ಪ್ರಿಯರು. ಕಮಲ್ ಮತ್ತೆ ಕಾಮೆಂಟ್ ಮಾಡದಂತೆ ಅವನನ್ನು ತರಾಟೆಗೆ ತಗೆದುಕೊಂಡಿದ್ದಾರೆ.