ಕೇರಳದಲ್ಲಿ ಮತ್ತೆ ಬಿರುಗಾಳಿ ಎಬ್ಬಿಸಿದ ಲವ್‌ ಮ್ಯಾರೇಜ್‌ ಕೇಸ್‌

Public TV
1 Min Read

ತಿರುವನಂತಪುರಂ: ಕೇರಳದ ಕೋಜಿಕ್ಕೋಡ್‍ನಲ್ಲೊಂದು ನಡೆದ ಲವ್ ಮ್ಯಾರೇಜ್ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಡಿವೈಎಫ್‍ಐ ನಾಯಕ ಷಿಜಿನ್, ಅನ್ಯ ಧರ್ಮದ ಜ್ಯೋತ್ಸ್ನಾ ಮೇರಿ ಜೋಸೆಫ್‍ರನ್ನು ಪ್ರೀತಿಸಿ ಮದುವೆ ಆಗಿರುವುದು ವಿವಾದಕ್ಕೆ ಕಾರಣವಾಗಿದೆ.

ಜ್ಯೋತ್ಸ್ನಾ ಮೇರಿ ಜೋಸೆಫ್ ಪೋಷಕರು ಇದು ಲವ್ ಜಿಹಾದ್ ಎಂದು ಆರೋಪಿಸಿ, ಮಿಸ್ಸಿಂಗ್ ಕೇಸ್ ದಾಖಲಿಸಿದ್ದಾರೆ. ಕೋರ್ಟ್‍ನಲ್ಲಿ ಹೇಬಿಯಸ್ ಕಾರ್ಪಸ್ ಕೂಡ ದಾಖಲಿಸಿದ್ರು. ಆದರೆ ಇದು ಕೋರ್ಟ್‍ನಲ್ಲಿ ವಜಾಗೊಂಡಿತ್ತು. ಈ ಪ್ರಕರಣ ಸುಖಾಂತ್ಯಕಂಡಿತ್ತು ಎನ್ನುವಾಗ ಈ ವಿವಾದಕ್ಕೆ ಈಗ ಸಿಪಿಎಂ ಮಾಜಿ ಶಾಸಕ ಜಾರ್ಜ್ ಎಂ. ಥಾಮಸ್ ತುಪ್ಪ ಸುರಿದಿದ್ದಾರೆ. ಲವ್ ಜಿಹಾದ್ ಎನ್ನುವುದು ನಿಜ. ಎಸ್‍ಡಿಪಿಐ, ಜಮಾತ್ ಎ ಇಸ್ಲಾಮಿಯಂತಹ ಸಂಸ್ಥೆಗಳು ಉನ್ನತ ಶಿಕ್ಷಣ ಮಾಡಿದ ಇತರೆ ಧರ್ಮೀಯ ಯುವತಿಯರನ್ನು ಟ್ರ್ಯಾಪ್ ಮಾಡುವಂತೆ ಪ್ರೋತ್ಸಾಹ ನೀಡುತ್ತಾರೆ. ಈ ಮೂಲಕ ಲವ್ ಜಿಹಾದ್‍ಗೆ ಉತ್ತೇಜನ ನೀಡುತ್ತಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಲಡ್ಡು ತಿನ್ನಿಸುವ ಮೂಲಕ ವೈವಾಹಿಕ ವಿವಾದ ಕೊನೆಗೊಳಿಸಿದ 70ರ ಹರೆಯ ದಂಪತಿ

ಷಿಜಿನ್ ಮದುವೆ ವಿಚಾರವನ್ನು ಮೊದಲು ಪಕ್ಷದ ಮುಂದೆ ಇಡಬೇಕಿತ್ತು ಎಂದು ಅಸಮಾಧಾನ ಹೊರಹಾಕಿದ್ದು, ಷಿಜಿನ್ ಕೋಮು ಸೌಹಾರ್ದತೆಗೆ ಭಂಗ ಉಂಟು ಮಾಡಿದ ಕಾರಣ ಪಕ್ಷವು ಕ್ರಮಕ್ಕೆ ಮುಂದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಇದು ಲವ್ ಜಿಹಾದ್ ಅಲ್ಲ ಎಂದು ಷಿಜಿನ್-ಜ್ಯೋತ್ಸ್ಯಾ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಮಹಿಳೆಯರಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದ ಬಜರಂಗ ಮುನಿ ಅರೆಸ್ಟ್‌

Share This Article
Leave a Comment

Leave a Reply

Your email address will not be published. Required fields are marked *