ಇಂದು ಕೊನೆಗೂ ಮದುವೆಯಾದ ರಣಬೀರ್ ಮತ್ತು ಆಲಿಯಾ ಭಟ್

Public TV
1 Min Read

ಬಾಲಿವುಡ್ ನ ಖ್ಯಾತ ಸ್ಟಾರ್ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಕೊನೆಗೂ ಮದುವೆಯಾಗಿದ್ದಾರೆ. ಮೂರು ವರ್ಷಗಳಿಂದ ಇವರ ಮದುವೆ ಸುದ್ದಿ ಬಿಟೌನ್ ನಲ್ಲಿ ಸದ್ದು ಮಾಡುತ್ತಲೇ ಇತ್ತು. ಕೊನೆಗೂ ಇವತ್ತು ಮಧ್ಯಾಹ್ನ ಹಸೆಮಣೆ ಏರುವ ಮೂಲಕ ಸುದ್ದಿಯನ್ನು ನಿಜವಾಗಿಸಿದ್ದಾರೆ. ಈ ಜೋಡಿಯ ಮದುವೆಯ ಸುದ್ದಿ ಹೊರಬೀಳುತ್ತಿದ್ದಂತೆಯೇ ದಿನಾಂಕವನ್ನು ಮುಂದೂಡಲಾಗಿದೆ ಎಂದು ಹೇಳಲಾಗಿತ್ತು. ಆದರೆ, ನಿಗಧಿಯಾದ ದಿನಾಂಕದಲ್ಲಿಯೇ ರಣಬೀರ್ ಮತ್ತು ಆಲಿಯಾ ವೈಹಿವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಆಲಿಯಾ ಮತ್ತು ರಣಬೀರ್ ವಿವಾಹಕ್ಕಾಗಿ ಮುಂಬೈನ ಬಾಂದ್ರಾದಲ್ಲಿರುವ ಕಪೂರ್ ಕುಟುಂಬದ ವಾಸ್ತು ನಿವಾಸ ಮದುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ಅಲ್ಲಿಯೇ ವಿವಾಹ ಮಹೋತ್ಸವ ನಡೆದಿದೆ. ಇಂದು ಮಧ್ಯಾಹ್ನ ಈ ಜೋಡಿಯು ಇಬ್ಬರೂ ಹಿರಿಯರ ಸಮ್ಮುಖದಲ್ಲಿ ಪಂಜಾಬಿ ಸಂಪ್ರದಾಯದಂತೆ ‘ರಲಿಯಾ’ ವಿವಾಹ ಜರುಗಿದೆ. ಇದನ್ನೂ ಓದಿ: ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2

ranbir alia

ಮದುವೆ ಮಹೋತ್ಸವಕ್ಕೆ ಕಡಿಮೆ ಸಂಖ್ಯೆಯ ಅತಿಥಿಗಳಿಗೆ ಆಹ್ವಾನ ನೀಡಿದ್ದು, ಕರಣ್ ಜೋಹಾರ್, ಆಕಾಶ್ ಅಂಬಾನಿ, ಶ್ಲೋಕಾ ಅಂಬಾನಿ, ಸೈಫ್ ಅಲಿಖಾನ್, ಕರೀನಾ ಕಪೂರ್, ಶಾಹೀನ್ ಭಟ್, ನೀತೂ ಕಪೂರ್ ಸೇರಿದಂತೆ ಹಲವಾರು ತಾರೆಯರು ಭಾಗಿಯಾಗಿದ್ದರು. ಅಲ್ಲದೇ, ರಣಬೀರ್ ಮತ್ತು ಆಲಿಯಾ ಸ್ನೇಹಿತರು ಕೂಡ ಪಾಲ್ಗೊಂಡಿದ್ದರು. ಇದನ್ನೂ ಓದಿ : ಕೆಜಿಎಫ್ 2 ಜೊತೆ ನೋಡಬಹುದು ಹೊಂಬಾಳೆ ಫಿಲ್ಮ್ಸ್ ನ ಮತ್ತೆರಡು ಸಿನಿಮಾ ಟೀಸರ್

ಈವರೆಗೂ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿಲ್ಲ. ಒಂದು ಫೋಟೋ ಅಥವಾ ವಿಡಿಯೋ ಕೂಡ ಯಾರಿಗೂ ಸಿಕ್ಕಿಲ್ಲ. ಅಷ್ಟರ ಮಟ್ಟಿಗೆ ಗೌಪ್ಯತೆ ಕಾಪಾಡಿಕೊಂಡು ಮದುವೆ ಆಗಿದೆ ಈ ಜೋಡಿ. ಆದರೆ, ಮದುವೆಗೆ ಯಾರೆಲ್ಲ ಹೋಗಿದ್ದಾರೆ ಎನ್ನುವ ಸುದ್ದಿಯಂತೂ ಸಿಕ್ಕಿದೆ. ಇದನ್ನೂ ಓದಿ : ವಿಜಯ್ ಕಿರಗಂದೂರು ತವರಿಗೆ ಭೇಟಿ ನೀಡಿ ಹಿರಿಯರ ಆಶೀರ್ವಾದ ಪಡೆದ ಕೆಜಿಎಫ್ ಟೀಂ

ಕೆಲವೇ ದಿನಗಳಲ್ಲೇ ಸ್ಟಾರ್ ಹೋಟೆಲ್ ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು, ಅಲ್ಲಿ ಬಾಲಿವುಡ್ ಮತ್ತು ದಕ್ಷಿಣದ ಅನೇಕ ತಾರೆಯರಿಗೆ ಆಹ್ವಾನ ನೀಡಲಾಗಿದೆ. ಆರ್.ಆರ್.ಆರ್ ಚಿತ್ರತಂಡ ಕೂಡ ಭಾಗವಹಿಸಲಿದೆ.

Share This Article
Leave a Comment

Leave a Reply

Your email address will not be published. Required fields are marked *