ವಿಮಾನಗಳ ಟೇಕ್ ಆಫ್ ವೇಗಕ್ಕೆ ಸಮನಾಗಿ 350 ಕಿಮೀ ವೇಗದಲ್ಲಿ ಬುಲೆಟ್ ರೈಲು ಪ್ರಾಯೋಗಿಕ ಪರೀಕ್ಷೆ

Public TV
1 Min Read

ಗಾಂಧಿನಗರ: ಗಂಟೆಗೆ 350 ಕಿಲೋಮೀಟರ್ ವೇಗದಲ್ಲಿ ಬುಲೆಟ್ ರೈಲು ಪ್ರಾಯೋಗಿಕ ಪರೀಕ್ಷೆಗೆ ಸೂರತ್‍ನಲ್ಲಿ ಸಿದ್ಧತೆ ನಡೆಸಲಾಗುತ್ತಿದ್ದು, ಇದು ವಿಮಾನಗಳ ಟೇಕ್ ಆಫ್ ವೇಗಕ್ಕೆ ಸಮನಾಗಿರುತ್ತದೆ ಎಂದು ವರದಿಯಾಗಿದೆ.

2026ರಲ್ಲಿ ಗುಜರಾತ್‍ನ ಬಿಲಿಮೋರಾ ಮತ್ತು ಸೂರತ್ ನಡುವೆ ಗಂಟೆಗೆ 350 ಕಿಮೀ ವೇಗದಲ್ಲಿ ಬುಲೆಟ್ ರೈಲಿನ ಮೊದಲ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಮೊದಲು ಬಿಲಿಮೋರಾ ಮತ್ತು ಸೂರತ್ ನಡುವೆ ಪ್ರಾಯೋಗಿಕ ಪರೀಕ್ಷೆ ನಂತರ ಇತರ ಭಾಗಗಳಲ್ಲಿ ಪ್ರಾಯೋಗಿಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದನ್ನೂ ಓದಿ: 10 ಕೋಟಿ ಭಾರತೀಯ ಬಳಕೆದಾರರಿಗೆ ಯುಪಿಐ ಸೇವೆ ನೀಡಲಿದೆ ವಾಟ್ಸಪ್

ಇದು ಪ್ರಯಾಣಿಕರಿಗೆ ಗೇಮ್ ಚೇಂಜರ್ ಆಗಿರುತ್ತದೆ ಮತ್ತು ವಿಮಾನ ಪ್ರಯಾಣಕ್ಕೆ ಪೈಪೋಟಿ ನೀಡುವ ಸಾಮರ್ಥ್ಯ ಹೊಂದಿದೆ. ಬುಲೆಟ್ ರೈಲುಗಳು ಕಡಿಮೆ ಚೆಕ್ ಇನ್ ಸಮಯದಲ್ಲಿ ಹೆಚ್ಚು ಸ್ಥಳಗಳ ಸಂಪರ್ಕ ಸಾಧಿಸಲು ಪ್ಲಾನ್ ರೂಪಿಸಲಾಗಿದೆ. ಪ್ರಸ್ತುತ ಗಂಟೆಗೆ 350 ಕಿಮೀ ವೇಗದಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆದರೂ ಈ ವೇಗದಲ್ಲಿ ರೈಲುಗಳು ಸಂಚರಿಸುವುದಿಲ್ಲ. ಕಾರ್ಯಾಚರಣೆಯ ವೇಗ ಗಂಟೆಗೆ 320 ಕಿಮೀ ಆಗಿರುತ್ತದೆ. ಬುಲೆಟ್ ರೈಲು ಸ್ಲ್ಯಾಬ್ ಟ್ರ್ಯಾಕ್ ಸಿಸ್ಟಮ್ ಎಂಬ ವಿಶೇಷ ಟ್ರ್ಯಾಕ್‍ಗಳಲ್ಲಿ ಚಲಿಸುತ್ತವೆ. ಜಪಾನ್ ತಂತ್ರಜ್ಞಾನದ ನೆರವಿನಿಂದ ಇದನ್ನು ರೂಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸಲಿಂಗಿಗಳ ಮದುವೆ ಮಾನ್ಯತೆ ಮನವಿ ತಿರಸ್ಕರಿಸಿದ ಹೈಕೋರ್ಟ್

ಈಗಾಗಲೇ ಬುಲೆಟ್ ರೈಲು ಹಳಿಗಾಗಿ ಗುಜರಾತ್‍ನಲ್ಲಿ ಸ್ಥಳಗಳನ್ನು ಖರೀದಿಸಿರುವ ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (NHSRCL) ತಿಂಗಳಲ್ಲಿ ಬಿಲಿಮೋರಾ ಮತ್ತು ಸೂರತ್ ನಡುವೆ 200 ರಿಂದ 250 ಪಿಲ್ಲರ್‌ಗಳ ರಚನೆಗೆ ಪ್ಲಾನ್ ಹಾಕಿದೆ. ಈಗಾಗಲೇ 237 ಕಿಮೀ ಬುಲೆಟ್ ರೈಲು ಹಳಿ ತಯಾರಾಗಿದ್ದು, ಇನ್ನುಳಿದ 115 ಕಿಮೀ ಕಾಮಗಾರಿ ನಡೆಯುತ್ತಿದೆ. ಬುಲೆಟ್ ರೈಲು ಪ್ರಯಾಣಕ್ಕೆ ಸಿದ್ಧವಾದರೆ 2 ಗಂಟೆ 58 ನಿಮಿಷಗಳ ಅಂತರದಲ್ಲಿ ಅಹಮದಾಬಾದ್‍ನಿಂದ ಮುಂಬೈಗೆ ಸಂಚರಿಸಬಹುದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *