ದೇಹಾಕಾರದಲ್ಲಿ ನನಗೂ ಸಮಸ್ಯೆ ಇವೆ, ಬಾಡಿ ಶೇಮಿಂಗ್ ಬಗ್ಗೆ ಶಾಂಕಿಗ್ ಸುದ್ದಿ ಕೊಟ್ಟ ವೈಷ್ಣವಿ

Public TV
2 Min Read

ತ್ತೀಚಿನ ದಿನಗಳಲ್ಲಿ ತಮಗಾದ ಬಾಡಿ ಶೇಮಿಂಗ್ ಬಗ್ಗೆ ಹಲವಾರು ನಟಿಯರು ಬಹಿರಂಗವಾಗಿ ಹೇಳಿಕೆ ಕೊಡುತ್ತಿದ್ದಾರೆ. ತಮಗೆ ಯಾವೆಲ್ಲ ರೀತಿಯಲ್ಲಿ ಬಾಡಿ ಶೇಮಿಂಗ್ ಆಯಿತು ಎನ್ನುವುದನ್ನು ಸವಿವರವಾಗಿ ಹೇಳಿಕೊಳ್ಳುತ್ತಿದ್ದಾರೆ. ಈಗ ತಮಗೂ ಆದಂತಹ ಕಹಿ ಅನುಭವವನ್ನು ಕನ್ನಡ ಕಿರುತೆರೆಯ ಖ್ಯಾತ ನಟಿ ಮತ್ತು ನಿರೂಪಕಿ ವೈಷ್ಣವಿ ಗೌಡ ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ವಿಜಯ್ ಕಿರಗಂದೂರು ತವರಿಗೆ ಭೇಟಿ ನೀಡಿ ಹಿರಿಯರ ಆಶೀರ್ವಾದ ಪಡೆದ ಕೆಜಿಎಫ್ ಟೀಂ

ಸದ್ಯ ವೈಷ್ಣವಿ ಗೌಡ ಅವರನ್ನು ನೋಡಿದರೆ, ಅವರಿಗೆ ಡುಮ್ಮಿ ಅನ್ನುವುದಕ್ಕೆ ಸಾಧ್ಯನಾ ಎಂದು ಸಾವಿರ ಬಾರಿ ಯೋಚಿಸುವಷ್ಟು ಸಣ್ಣಗಿದ್ದಾರೆ. ಆದರೆ, ಅವರನ್ನು ಹಲವು ವರ್ಷಗಳ ಹಿಂದೆ ‘ಡುಮ್ಮಿ ಡುಮ್ಮಿ’ ಎಂದು ರೇಗಿಸುತ್ತಿದ್ದರಂತೆ. ‘ನಾನು ಹೈಸ್ಕೂಲ್ ದಿನಗಳಲ್ಲಿದ್ದಾಗ ಅಪ್ಪ ಅಮ್ಮನೇ ಎಲ್ಲ ಕೆಲಸವನ್ನು ಮಾಡುತ್ತಿದ್ದರು. ಕುಳಿತುಕೊಂಡು ತಿನ್ನುವುದಷ್ಟೇ ನನ್ನ ಕೆಲಸವಾಗಿತ್ತು. ಹಾಗಾಗಿ ದಪ್ಪ ಆಗಿದ್ದೆ. ಎಲ್ಲರೂ ನನ್ನನ್ನು ಡುಮ್ಮಿ ಎಂದು ರೇಗಿಸುತ್ತಿದ್ದರು. ನನ್ನ ಹೈಟ್ ಕಡಿಮೆ ಇದ್ದ ಕಾರಣಕ್ಕೆ ನಾನು ಡುಮ್ಮಿಯ ರೀತಿಯಲ್ಲೇ ಕಾಣಿಸುತ್ತಿದ್ದೆ. ಜನರು ಹಾಗೆ ರೇಗಿಸಿದಾಗ ಕೋಪ ಬರುತ್ತಿತ್ತು’ ಎಂದು ಹೇಳಿಕೊಂಡಿದ್ದಾರೆ ವೈಷ್ಣವಿ. ಇದನ್ನೂ ಓದಿ: ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2

ಅಲ್ಲದೇ ಈಗಲೂ ಅವರ ದೇಹಾಕಾರದಲ್ಲಿ ಕೆಲ ಸಮಸ್ಯೆಗಳು ಇವೆಯಂತೆ. ಅದನ್ನು ದಾಟಿಕೊಳ್ಳುವ ಪ್ರಯತ್ನವನ್ನು ಅವರು ಈಗಲೂ ಮಾಡುತ್ತಿದ್ದಾರಂತೆ. ‘ನಾನು ಈಗ ಸಣ್ಣಗಿದ್ದೇನೆ. ಆದರೂ, ನನ್ನ ದೇಹಾಕಾರದಲ್ಲಿ ಕೆಲ ನ್ಯೂನ್ಯತೆಗಳು ಇವೆ. ಅವುಗಳನ್ನು ಈಗಲೂ ನಾನು ಸರಿ ಪಡಿಸಿಕೊಳ್ಳುತ್ತಲೇ ಇರುತ್ತೇನೆ. ಯಾವುದೂ ಫರ್ ಫೆಕ್ಟ್ ಅಲ್ಲ. ನಿರಂತರವಾಗಿ ನಮ್ಮ ಸೌಂದರ್ಯವನ್ನು ನಾವು ಕಾಪಾಡಿಕೊಳ್ಳುತ್ತಲೇ ಇರಬೇಕು. ಜನರು ಅದಕ್ಕೆ ಅವಮಾನ ಮಾಡುವ ರೀತಿಯಲ್ಲಿ ಮಾತನಾಡಬಾರದು’ ಎನ್ನುತ್ತಾರೆ ವೈಷ್ಣವಿ.

ನಟಿ ವೈಷ್ಣವಿ ಈ ಕುರಿತು ಇಷ್ಟೊಂದು ಮಾತನಾಡುವುದಕ್ಕೂ ಕಾರಣವಿದೆ. ಈಗ ಅವರು ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ ಹೆಸರಿನ ಈ ಸಿನಿಮಾದಲ್ಲಿ ತೊನ್ನು (ವಿಟಿಲಿಗೋ) ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಯೊಬ್ಬನ ಕಥೆಯನ್ನು ಹೇಳಲಾಗುತ್ತಿದೆಯಂತೆ. ಈ ಚಿತ್ರಕ್ಕೆ ವೈಷ್ಣವಿ ನಾಯಕಿ. ಸಿನಿಮಾದ ಕಥಾ ಸಾರಾಂಶವನ್ನು ಹೇಳುತ್ತಾ, ತಮಗೂ ಆಗಿದ್ದ ಬಾಡಿ ಶೇಮಿಂಗ್ ಬಗ್ಗೆ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *