ಕೋಮುದ್ವೇಷ ಕಕ್ಕುವುದು, ನನ್ನ ಹೆಸರು ಎಳೆದು ತರುವುದು ಸಿಟಿ ರವಿಗೆ ಮಾನಸಿಕ ರೋಗವಾಗಿದೆ: ಸಿದ್ದರಾಮಯ್ಯ

Public TV
2 Min Read

ಬೆಂಗಳೂರು: ನಗರದಲ್ಲಿ ನಡೆದ ಯುವಕನ ಕೊಲೆ ಬಗ್ಗೆ ಸಿಟಿ ರವಿ ಮಾತನಾಡಿರುವ ವೀಡಿಯೋ ತುಣಕನ್ನು ಹಂಚಿಕೊಂಡಿರುವ ಸಿದ್ದರಾಮಯ್ಯ, ಸರಣಿ ಟ್ವೀಟ್ ಮೂಲಕ ಸಿಟಿ ರವಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?: ಬೈಕ್ ಡಿಕ್ಕಿಗೆ ಸಂಬಂಧಿಸಿದ ಗಲಾಟೆಯಲ್ಲಿ ನಡೆದ ಕೊಲೆಯಲ್ಲೂ ಭಾಷೆ, ಧರ್ಮ ಎಳೆದು ತಂದು ಸಮಾಜಕ್ಕೆ ಬೆಂಕಿ ಹಚ್ಚುವ ಸಿಟಿ ರವಿಯರವಂತಹ ಕೋಮು ತಂಟೆಕೋರರ ವಿರುದ್ಧ ಪೊಲೀಸರು ಮೊದಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮತ್ತೆ ಶಾಕ್‌ ಕೊಟ್ಟ ಕೋವಿಡ್-‌ ಇಂಗ್ಲೆಂಡ್‌ನಲ್ಲಿ ʻXEʼ ಹೊಸ ರೂಪಾಂತರಿ ಪತ್ತೆ

ಗೋರಿಪಾಳ್ಯದ ಕೊಲೆ ಪ್ರಕರಣದ ಬಗ್ಗೆ ಈಗಾಗಲೇ ಪೊಲೀಸ್ ಮಹಾನಿರ್ದೇಶಕರು ಹೇಳಿಕೆ ನೀಡಿ, ಇದು ವೈಯಕ್ತಿಕ ಘರ್ಷಣೆಯಿಂದ ನಡೆದ ಹತ್ಯೆ, ಭಾಷೆ ವಿಚಾರಕ್ಕೆ ಅಲ್ಲ ಎಂದು ಹೇಳಿದ್ದಾರೆ. ಕೋಮುದ್ವೇಷ ಕಕ್ಕುವುದು ಮತ್ತು ಎಲ್ಲದಕ್ಕೂ ನನ್ನ ಹೆಸರು ಎಳೆದು ತರುವುದು ಸಿಟಿ ರವಿ ಅವರಿಗೆ ಮಾನಸಿಕ ರೋಗವಾಗಿ ಬಿಟ್ಟಿದೆ ಎಂದು ಕಿಡಿಕಾರಿದ್ದಾರೆ.  ಇದನ್ನೂ ಓದಿ: ದೇಶದಲ್ಲಿ ಇಬ್ಬಗೆಯ ರಾಜಕೀಯ: ಪ್ರತಿ ಪಕ್ಷಗಳ ವಿರುದ್ಧ ಮೋದಿ ಕಿಡಿ

ಮೇಕೆದಾಟು ಕುಡಿಯುವ ನೀರಿನ ಯೋಜನೆ ವಿಷಯದಲ್ಲಿ ಮೌನವಾಗಿದ್ದು ತಮಿಳುನಾಡಿಗೆ ನೆರವಾಗುವ, ಕನ್ನಡ ಭಾಷೆಯನ್ನು ಹತ್ತಿಕ್ಕಿ ಹಿಂದಿ ಭಾಷೆ ಹೇರುವ ಕೇಂದ್ರ ಸರ್ಕಾರದ ದಮನಕಾರಿ ನಿಲುವನ್ನು ಬೆಂಬಲಿಸುವ ಸಿಟಿ ರವಿ ಅವರ ಒಂದು ಕಾಲು ಹೇಗೂ ರಾಜ್ಯದ ಹೊರಗಿದೆ, ಇನ್ನೊಂದು ಕಾಲನ್ನೂ ಎತ್ತಿ ಹೊರಗೆ ಹೋದರೆ ರಾಜ್ಯಕ್ಕೆ ಕ್ಷೇಮವಾಗಿರುತ್ತದೆ ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದರು.

ಸಿಟಿ ರವಿ ಹೇಳಿದ್ದೇನು?: ಚಂದ್ರು ಹತ್ಯೆ ಆಗಿರೋದು ನಿಜ. ಕನ್ನಡ ಮಾತಾಡಿದ ಅಂತ ಹತ್ಯೆ ಆಯ್ತು ಅಂತ ಕೆಲವರು ಹೇಳುತ್ತಿದ್ದಾರೆ. ಪೊಲೀಸರು ಎರಡೂ ರೀತಿಯ ವರದಿ ಕೊಡುತ್ತಿದ್ದಾರೆ. ಹತ್ಯೆ ಆಗಿರೋದು ನಿಜ. ಹತ್ಯೆ ಮಾಡಿರೋದು ಮುಸಲ್ಮಾನರು ಅದೂ ನಿಜ. ಸತ್ತಿರೋನು ಹಿಂದೂ ಅದೂ ನಿಜ ಎಂದು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *