ಕಾಲಿವುಡ್ನ ಸೂಪರ್ಸ್ಟಾರ್ ದಳಪತಿ ವಿಜಯ್ ನಟನೆಯ `ಬೀಸ್ಟ್’ ಇದೇ ಏಪ್ರಿಲ್ 13ಕ್ಕೆ ತೆರೆಯಲ್ಲಿ ಅಬ್ಬರಿಸಲು ಸಿದ್ದವಾಗಿದೆ. ಈಗಾಗಲೇ ಚಿತ್ರದ ಟ್ರೇಲರ್ ಮೂಲಕ ಸಿಕ್ಕಾಪಟ್ಟೆ ಹೈಪ್ ಕ್ರಿಯೆಟ್ ಮಾಡಿದೆ. ರಿಲೀಸ್ಗೂ ಮುಂಚೆನೇ ಒಂದಲ್ಲ ಒಂದು ವಿಚಾರವಾಗಿ ಸೌಂಡ್ ಮಾಡ್ತಿರೋ `ಬೀಸ್ಟ್’ ಇದೀ ಮತ್ತೊಂದು ಕಾರಣಕ್ಕಾಗಿ ಸುದ್ದಿ ಆಗಿದೆ. ಈಗ `ಬೀಸ್ಟ್’ ಚಿತ್ರಕ್ಕೆ ಹೊಸ ಸಂಕಷ್ಟವೊಂದು ಎದುರಾಗಿದ್ದು, ಕುವೈತ್ನಲ್ಲಿ ವಿಜಯ್ ನಟನೆಯ `ಬೀಸ್ಟ್’ ಚಿತ್ರದ ರಿಲೀಸ್ ಅನ್ನು ಬ್ಯಾನ್ ಮಾಡಲಾಗಿದೆ.
ಇತ್ತೀಚಿಗಷ್ಟೇ `ಬೀಸ್ಟ್’ ಚಿತ್ರದ ಟ್ರೇಲರ್ ರಿಲೀಸ್ ಆಗಿತ್ತು. ಕಥೆಯ ಕುರಿತು ಚಿತ್ರತಂಡ ಒಂದಿಷ್ಟು ಹಿಂಟ್ ಬಿಟ್ಟುಕೊಟ್ಟಿತ್ತು. ಭಯೋತ್ಪಾದಕರು ಮಾಲ್ ಒಂದನ್ನು ಹೈಜಾಕ್ ಮಾಡುತ್ತಾರೆ. ನಾಯಕ ಮಾಲ್ ಒಳಗಡೆಯಿರುತ್ತಾನೆ. ಹೇಗೆ ಅಲ್ಲಿನ ಜನರನ್ನು ರಕ್ಷಿಸುತ್ತಾನೆ ಅನ್ನುವುದು ಚಿತ್ರದ ತಿರುಳು. ಇದೇ ವಿಚಾರವಾಗಿ ಕುವೈತ್ `ಬೀಸ್ಟ್’ ಸಿನಿಮಾವನ್ನು ಬ್ಯಾನ್ ಮಾಡಿದೆ.



