ತೆರೆ ಮೇಲೆ ಮತ್ತೆ ಒಂದಾಗಲಿದ್ದಾರಂತೆ ಸಮಂತಾ-ನಾಗಚೈತನ್ಯ ಜೋಡಿ!

Public TV
2 Min Read

ಕ್ಷಿಣ ಭಾರತದ ಸ್ಟಾರ್ ಜೋಡಿಗಳಲ್ಲಿ ಸಮಂತಾ ಮತ್ತು ನಾಗಚೈತನ್ಯ ಜೋಡಿ ಕೂಡ ಒಂದಾಗಿತ್ತು. ಆದರೆ ವೈಯಕ್ತಿಕ ಕಾರಣದಿಂದ ಈ ಸ್ಟಾರ್ ಜೋಡಿ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿತ್ತು. ಈಗ ನಾ ಒಂದು ತೀರ ನೀನೊಂದು ತೀರಾ ಎಂದು ತಮ್ಮಷ್ಟಕ್ಕೆ ತಾವು ಜೀವನ ಸಾಗಿಸುತ್ತಿರುವ ಈ ಸ್ಟಾರ್ ಜೋಡಿಯ ವೈಯಕ್ತಿಕ ಜೀವನದ ಕಥೆ ಹೀಗಾದ್ರೆ, ಇತ್ತ ವೃತ್ತಿ ಜೀವನದಲ್ಲಿ ಇಬ್ಬರೂ ಮುಂಚೂಣಿಯಲ್ಲಿದ್ದಾರೆ. ಅಭಿಮಾನಿಗಳ ವಲಯದಲ್ಲಿ ಹೊಸದೊಂದು ವಿಚಾರ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ.

ವೈಯಕ್ತಿಕ ಜೀವನದಲ್ಲಿ ಸ್ಯಾಮ್ ಮತ್ತು ಚೈ ಬೇರೆಯಾಗಿದ್ದರೂ, ಆನ್ ಸ್ಕ್ರೀನ್‌ನಲ್ಲಿ ಮತ್ತೆ ಒಂದಾಗುತ್ತಾರೆ ಅನ್ನುವ ಸುದ್ದಿ ಸಂಚಲನ ಸೃಷ್ಠಿಸಿದೆ. ಡಿವೋರ್ಸ್ ನಂತರ ಇಬ್ಬರೂ ವಿಭಿನ್ನ ಪಾತ್ರಗಳ ಮೂಲಕ ಮೋಡಿ ಮಾಡ್ತಿದ್ದಾರೆ. `ದಿ ಫ್ಯಾಮಿಲಿಮೆನ್ ೨’ ಮತ್ತು `ಪುಷ್ಪ’ ದಲ್ಲಿ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ ಮೇಲಂತೂ ಸ್ಯಾಮ್ ಕೆರಿಯರ್ ಬೇರೆ ಲೆವೆಲ್‌ಗೆ ಹೋಗಿದೆ.

ನಾಗಚೈತನ್ಯ ನಟನೆಯ `ಲವ್‌ಸ್ಟೋರಿ’ ಚಿತ್ರ ಹಿಟ್ ಆದಮೇಲಂತೂ ಸೌತ್ ಮತ್ತು ಬಾಲಿವುಡ್‌ನಲ್ಲಿ ಬೇಡಿಕೆ ಹೆಚ್ಚಾಗಿದೆ. ಸದ್ಯ ಆಮೀರ್ ಖಾನ್ ಜೊತೆ ನಟಿಸಿರೋ `ಲಾಲ್ ಸಿಂಗ್ ಛಡ್ಡಾ’ ರಿಲೀಸ್‌ಗೆ ವೈಟ್ ಮಾಡುತ್ತಿದ್ದಾರೆ. ವರದಿಗಳ ಪ್ರಕಾರ, ಸ್ಯಾಮ್ ಮತ್ತು ಚೈ ಮತ್ತೆ ಒಟ್ಟಿಗೆ ಬಣ್ಣ ಹಚ್ಚಲಿದ್ದಾರೆ ಅನ್ನೋ ಗುಸು ಗುಸು ಟಿಟೌನ್ ಗಲ್ಲಿಗಳಲ್ಲಿ ಸೌಂಡ್ ಮಾಡುತ್ತಿದೆ.

ನಂದಿನಿ ರೆಡ್ಡಿ ನಿರ್ದೇಶನದ `ಓ ಬೇಬಿ’ ಚಿತ್ರ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಈ ಚಿತ್ರದಲ್ಲಿ ಸಮಂತಾ ಮತ್ತು ನಾಗಚೈತನ್ಯ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಆ ಸಂದರ್ಭದಲ್ಲೇ ನಂದಿನಿ ರೆಡ್ಡಿ, ನ್ಯೂ ಸ್ಕ್ರೀಪ್ಟ್‌ ಬಗ್ಗೆ ಹೇಳಿಕೊಂಡಿದ್ದರಂತೆ, ಕಟೆಂಟ್ ಕೇಳಿ ಅಂದು ಸ್ಯಾಮ್ ಮತ್ತು ಚೈ ಗ್ರೀನ್ ಸಿಗ್ನಲ್ ಕೊಟ್ಟಿದ್ರಂತೆ. ಈ ಹೊಸ ಪ್ರಾಜೆಕ್ಟ್‌ಗಾಗಿ ಮತ್ತೆ ತೆರೆಯ ಮೇಲೆ ಒಂದಾಗಿಸಲು ನಂದಿನಿ ರೆಡ್ಡಿ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ಓದಿ: ಮೇ 11ಕ್ಕೆ ನಟಿ ಮಮತಾ ರಾವುತ್ ಮದುವೆ : ಡಾಕ್ಟರ್ ಜತೆ ಸಪ್ತಪದಿ ತುಳಿಯಲಿರುವ ನಟಿ

ಸದ್ಯ ಸದ್ದು ಮಾಡ್ತಿರೋ ಹೊಸ ಪ್ರಾಜೆಕ್ಟ್ ವಿಚಾರ ಇನ್ನು ಅಧಿಕೃತ ಘೋಷಣೆಯಾಗಿಲ್ಲ. ಎಲ್ಲದಕ್ಕೂ ಸದ್ಯದಲ್ಲೇ ಉತ್ತರ ಸಿಗೋ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಮುನಿಸು ಮರೆತು ತೆರೆಯ ಮೇಲಾದರೂ ಒಂದಾಗತ್ತಾರಾ ಕಾದು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *