ರಣಬೀರ್ ನನ್ನ ದೊಡ್ಡ ವಿಮರ್ಶಕ ಎಂದು ಹೇಳಿ ನಾಚಿ ನೀರಾದ ಆಲಿಯಾ

Public TV
2 Min Read

ಬಾಲಿವುಡ್ ಸ್ವೀಟೆಸ್ಟ್ ಕಾಪಲ್ ಎಂದರೆ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್. ಇವರಿಬ್ಬರು ಕಳೆದ ಸುಮಾರು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದು, ಈ ಕುರಿತು ಮುಕ್ತವಾಗಿ ಕೇಳಿಕೊಂಡಿದ್ದಾರೆ. ಇವರಿಬ್ಬರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಎಂದಿಗೂ ಹಿಂಜರಿಯುವುದಿಲ್ಲ. ಆಲಿಯಾ ತನ್ನ ಹಲವಾರು ಸಂದರ್ಶನಗಳಲ್ಲಿ ಯಾವಾಗಲೂ ರಣಬೀರ್ ಬಗ್ಗೆ ಪ್ರಸ್ತಾಪಿಸುತ್ತಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಆಲಿಯಾ, ನನ್ನ ‘ದೊಡ್ಡ ವಿಮರ್ಶಕ’ ರಣಬೀರ್ ಎಂದು ಹೇಳಿ ನಾಚಿ ನೀರಾಗಿದ್ದಾರೆ.

ಆಲಿಯಾ ಸಂದರ್ಶನವೊಂದರಲ್ಲಿ ಮಾತನಾಡ ಬೇಕಾದರೆ, ನಾನು ನಂಬುವ ಜನರು ನನ್ನೊಂದಿಗೆ ಹೆಚ್ಚು ಪ್ರಾಮಾಣಿಕವಾಗಿದ್ದಾರೆ. ಅವರ ಅಭಿಪ್ರಾಯವು ನನಗೆ ಹೆಚ್ಚು ಮುಖ್ಯವಾಗಿದೆ. ನನ್ನ ತಪ್ಪಿದ್ದರೂ ಅದನ್ನು ತಪ್ಪು ಎಂದು ಹೇಳುವ ಜನರು ಬೆರಳೆಣಿಕೆಯಷ್ಟು ಇದ್ದಾರೆ. ಅವರು ನನ್ನ ತಪ್ಪನ್ನು ತಪ್ಪು ಎಂದೇ ನೇರವಾಗಿ ಹೇಳುತ್ತಾರೆ. ಅವರು ನನಗಾಗಿ ಶುಗರ್ ಕೋಟ್ ಮಾಡಬೇಕಾಗಿಲ್ಲ. ಅಂತಹವರಲ್ಲಿ ರಣಬೀರ್ ಕಪೂರ್, ಅಯಾನ್ ಮುಖರ್ಜಿ, ಕರಣ್ ಜೋಹರ್, ಸಂಜಯ್ ಲೀಲಾ ಬನ್ಸಾಲಿ ಸರ್ ಇದ್ದಾರೆ. ಇವರು ಎಂದೂ ಶುಗರ್ ಕೋಟ್ ಹಾಕಿಕೊಂಡು ನನ್ನ ಜೊತೆ ಮಾತನಾಡುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಿಯಲ್ ಸ್ಟಾರ್ ಉಪೇಂದ್ರ ಅಂದರೆ ಸುಮ್ನೇನಾ? ಟಾಲಿವುಡ್ ಸೂಪರ್ ಸ್ಟಾರ್ ಗೆ ಅಣ್ಣನಾದ ಉಪ್ಪಿ

ಅದರಲ್ಲಿಯೂ ರಣಬೀರ್ ಯಾವಾಗಲೂ ನನಗೆ ತಪ್ಪನ್ನು ನೇರವಾಗಿ ಹೇಳುತ್ತಾರೆ. ಅವರು ನನ್ನ ಉತ್ತಮ ವಿಮರ್ಶಕನಾಗಿರುತ್ತಾರೆ. ತಪ್ಪು ಮಾಡಿದರೆ, ಒಂದು ವೇಳೆ ಅವರಿಗೆ ಏನಾದರೂ ಇಷ್ಟವಿಲ್ಲವಾದರೆ ನೇರವಾಗಿ ಹೇಳುತ್ತಾರೆ. ನನ್ನ ತಂಗಿ ಶಾಹೀನ್ ಕೂಡ ನೇರವಾಗಿ ಹೇಳುತ್ತಾಳೆ. ನಾನು ನಂಬುವ ಕೆಲವು ಸ್ನೇಹಿತರು ನನ್ನ ಬಗ್ಗೆ ಯಾವುದೇ ರೀತಿ ಹೇಳಿದರೂ ನಾನು ಅದನ್ನು ಗೌರವಿಸುತ್ತೇನೆ, ನಂಬುತ್ತೇನೆ. ಏಕೆಂದರೆ ಅವರು ನನಗೆ ಪ್ರಾಮಾಣಿಕರಾಗಿರುತ್ತಾರೆ ಎಂದಿದ್ದಾರೆ.

ಆಲಿಯಾ ಮತ್ತು ರಣಬೀರ್ ಏಪ್ರಿಲ್ ತಿಂಗಳಲ್ಲೇ ಮದುವೆಯಾಗುತ್ತಾರೆ ಎಂಬ ಸುದ್ದಿ ಬಿ’ಟೌನ್‍ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಆದರೆ ದಿನಾಂಕ ಇನ್ನೂ ಫೋಷಣೆಯಾಗಿಲ್ಲ. ಇವರ ಮದುವೆ ಕಪೂರ್ ಫ್ಯಾಮಿಲಿಯ RK ಹೌಸ್‍ನಲ್ಲಿ ಎಂಬುದು ಖಚಿತವಾಗಿದ್ದು, ಈ ಜೋಡಿ ಅಧಿಕೃತವಾಗಿ ತಿಳಿಸಬೇಕು. ಇದನ್ನೂ ಓದಿ: RK ಹೌಸ್‌ನಲ್ಲಿ ರಣಬೀರ್-ಆಲಿಯಾ ಮದುವೆ : ಆ ಸ್ಥಳದ ಹಿಂದಿದೆ ಇಂಟ್ರಸ್ಟಿಂಗ್ ಕಹಾನಿ

ಈ ಜೋಡಿ ‘ಬ್ರಹ್ಮಾಸ್ತ್ರ’ ಸಿನಿಮಾ ರಿಲೀಸ್‍ಗಾಗಿ ಕಾಯುತ್ತಿದ್ದು, ಅಭಿಮಾನಿಗಳು ಅವರನ್ನು ದೊಡ್ಡಪರದೆ ಮೇಲೆ ನೋಡಲು ಕಾಯುತ್ತಿದ್ದಾರೆ. ಈ ಸಿನಿಮಾವನ್ನು ಅಯನ್ ಮುಖರ್ಜಿ ನಿರ್ದೇಶಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *