RRR- ಥಿಯೇಟರ್ ಗೆ ‘ಗನ್’ ತಂದ ಅಭಿಮಾನಿ, ಆಗಿದ್ದೇನು?

Public TV
1 Min Read

ರಾಜಮೌಳಿ ನಿರ್ದೇಶನದ ‘ಆರ್.ಆರ್.ಆರ್’ ಸಿನಿಮಾ ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಒಂದು ಕಡೆ ಬಾಕ್ಸ್ ಆಫೀಸ್ ಭರ್ತಿ ಆಗುತ್ತಿದ್ದರೆ, ಮತ್ತೊಂದು ಕಡೆ ಅಭಿಮಾನಿಗಳ ಅತಿರೇಕ ವರ್ತನೆಗಳು ನಡೆಯುತ್ತಿದೆ. ಹೀಗಾಗಿ ಸ್ವತಃ ಆರ್.ಆರ್.ಆರ್ ಚಿತ್ರತಂಡವೇ ತಲೆ ಕೆಡಿಸಿಕೊಂಡು ಕೂತಿದೆ. ಇದನ್ನು ಓದಿ : ಚಂದನವನ ವಿಮರ್ಶಕರ ಪ್ರಶಸ್ತಿ: ರಾಜ್ ಬಿ ಶೆಟ್ಟಿ ಅತ್ಯುತ್ತಮ ನಟ, ಗಾನವಿ ಲಕ್ಷ್ಮಣ್ ನಟಿ, ಉಳಿದ ಪ್ರಶಸ್ತಿ ವಿವರ

ಸಿನಿಮಾದ ಫಸ್ಟ್ ಶೋಗೆ ಬಂದಿದ್ದ ಚಿತ್ತೂರು ಅಭಿಮಾನಿ ಖುಷಿಯಲ್ಲಿ ಸಂಭ್ರಮಿಸುತ್ತಲೇ ಹೃದಯಾಘಾತವಾಗಿ ತೀರಿಕೊಂಡ. ಆನಂತರ ಆಂಧ್ರದ ಇಬ್ಬರು ಅಭಿಮಾನಿಗಳು ಟಿಕೆಟ್ ಸಿಗಲಿಲ್ಲ ಎಂದು ಬೇಸರದಲ್ಲಿ ಬೈಕ್ ಓಡಿಸಿಕೊಂಡು ಹೋಗುವಾಗ ಅಪಘಾತವಾಗಿ ಜೀವ ಕಳೆದುಕೊಂಡರು. ಇಲ್ಲೊಬ್ಬ ಅಭಿಮಾನಿ ಗನ್ ಸಮೇತ ಚಿತ್ರ ನೋಡಲು ಬಂದು, ಆತಂಕ ಸೃಷ್ಟಿ ಮಾಡಿದ್ದಾನೆ. ಇದನ್ನೂ ಓದಿ : ಕಾಂಗ್ರೆಸ್ ಅವಧಿಯಲ್ಲಿ ನಡೆದ ಭಯೋತ್ಪಾದನೆ ತಿಳಿಯಲು ‘ದಿ ಕಾಶ್ಮೀರ್ ಫೈಲ್ಸ್’ ನೋಡಿ: ಅಮಿತ್ ಶಾ

ಈ ಘಟನೆ ನಡೆದಿದ್ದು ಆಂಧ್ರ ಪ್ರದೇಶದ ಈಸ್ಟ್ ಗೋಧಾವರಿ ಜಿಲ್ಲೆಯ ಪೀಟಾಪುರಂ ಎಂಬಲ್ಲಿ. ಈ ಊರಿನ ಅನ್ನಪೂರ್ಣ ಚಿತ್ರಮಂದಿರದಲ್ಲಿ ಆರ್.ಆರ್.ಆರ್ ಪ್ರದರ್ಶನದ ವೇಳೆಗೆ ಬಾಲಾಜಿ ಹೆಸರಿನ ಅಭಿಮಾನಿಯೊಬ್ಬ ಗನ್ ತಂದು, ಕ್ಯಾಮೆರಾದ ಮುಂದೆಯೇ ಫೋಸ್ ಕೊಟ್ಟಿದ್ದ. ಥಿಯೇಟರ್ ಒಳಗೆ ಹೋಗಿ ಪರದೆಯ ಮುಂದೆಯೇ ಗನ್ ಹಿಡಿದುಕೊಂಡು ನಿಂತುಬಿಟ್ಟ. ಅದನ್ನು ಮಾಧ್ಯಮಗಳು ಕೂಡ ಪ್ರಸಾರ ಮಾಡಿದವು. ಕ್ಷಣಾರ್ಥದಲ್ಲಿಯೇ ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಯಿತು. ಇದನ್ನೂ ಓದಿ: ಫ್ಯಾನ್ಸ್ ಜೊತೆ ‘ಜೇಮ್ಸ್’ ವೀಕ್ಷಿಸಿದ ಶಿವಣ್ಣ ದಂಪತಿ – ಏನ್ ಹೇಳಲಿ ನನ್ನ ತಮ್ಮನ ಆ್ಯಕ್ಟಿಂಗ್ ಬಗ್ಗೆ

ಫೋಟೋಗಳು ಮತ್ತು ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಅನ್ನಪೂರ್ಣ ಥಿಯೇಟರ್ ಸರಹದ್ದಿನ ಪೀತಾಪುರಂ ಪೊಲೀಸರು ಸ್ಥಳಕ್ಕೆ ಆಗಮಿಸಿ, ಬಾಲಾಜಿಯನ್ನು ವಶಕ್ಕೆ ಪಡೆದಿದ್ದಾರೆ. ಅವನ ಜತೆಗಿದ್ದ ಗನ್ ಅನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈತನಿಗೆ ಗನ್ ಹೇಗೆ ಬಂದಿತು, ಅದರಲ್ಲಿದ್ದ ಗುಂಡುಗಳು ಎಷ್ಟು ಅಪಾಯಕಾರಿ, ಅವನು ಯಾಕೆ ಗನ್ ಅನ್ನು ಥಿಯೇಟರ್ ಗೆ ತಂದ ಹೀಗೆ ಎಲ್ಲಾ ಆಯಾಮಗಳಲ್ಲೂ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಿದ್ದಾರಂತೆ.

Share This Article
Leave a Comment

Leave a Reply

Your email address will not be published. Required fields are marked *