ಪ್ರಧಾನಿ ಮೇಲಿನ ನಂಬಿಕೆಯಿಂದ 4 ರಾಜ್ಯಗಳಲ್ಲಿ ಬಿಜೆಪಿಗೆ ಗೆಲುವು: ಅಮಿತ್ ಶಾ

By
1 Min Read

ಗಾಂಧಿನಗರ: ಭಾರತವನ್ನು ಸುರಕ್ಷಿತ, ಸಮೃದ್ಧ ಮತ್ತು ಶಕ್ತಿಯುತವಾಗಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ನೀತಿಗಳು ಮತ್ತು ಯೋಜನಗಳ ಫಲವಾಗಿ ಬಿಜೆಪಿಯು 4 ರಾಜ್ಯಗಳಲ್ಲಿ ಗೆಲುವು ಸಾಧಿಸಿದೆ ಎಂದು ಗೃಹಸಚಿವ ಅಮಿತ್ ಶಾ ತಿಳಿಸಿದ್ದಾರೆ.

ಗುಜರಾತ್‌ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶ, ಗೋವಾ, ಮಣಿಪುರ ಮತ್ತು ಉತ್ತರಾಖಂಡದಲ್ಲಿ ಬಿಜೆಪಿಯ ಗೆಲುವು ಸಾಧಿಸಲು ಪ್ರಮುಖ ಕಾರಣ ಪ್ರಧಾನಿ ನಾಯಕತ್ವದಲ್ಲಿ ಜನರು ಇಟ್ಟಿರುವ ನಂಬಿಕೆಯಾಗಿದೆ ಎಂದಿದ್ದಾರೆ.

ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಮುಕ್ತವಾಗಿದೆ. ಈ ಬೃಹತ್ ವಿಜಯಕ್ಕೆ ನರೇಂದ್ರ ಮೋದಿಯ ನಾಯಕತ್ವವೇ ಕಾರಣವಾಗಿದೆ. ಇದೆಲ್ಲವೂ ದೇಶದ ಜನರು ಬಿಜೆಪಿಯ ಮೇಲೆ ಹೊಂದಿರುವ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ ಮೋದಿ ಕೈಗೊಂಡ ಅಭಿಯಾನಕ್ಕೆ ಸಾರ್ವಜನಿಕರಿಂದ ಅನುಮೋದನೆಯ ಮುದ್ರೆಯಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೇರಳದ ಪುರಾಣ ಪ್ರಸಿದ್ಧ  ದೇಗುಲದಲ್ಲಿ ಪೂಜೆ ಸಲ್ಲಿಸಿದ ಹೆಚ್.ಡಿ.ಕುಮಾರಸ್ವಾಮಿ

ಬಡವರು, ರೈತರು ಅಥವಾ ಕಾರ್ಖಾನೆಯ ಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗಗಳ ಆರೋಗ್ಯದ ಬಗ್ಗೆ ಮೋದಿ ಕಾಳಜಿ ವಹಿಸಿದ್ದಾರೆ. ಜೊತೆಗೆ ಆಯುಷ್ಮಾನ್ ಭಾರತ್ ಯೋಜನೆ ದೇಶದ 100 ಕೋಟಿ ಜನರಿಗೆ ರಕ್ಷಣೆ ನೀಡಿದೆ. ಮಕ್ಕಳಿಗೆ ಆರೋಗ್ಯ ತಪಾಸಣೆ ಮತ್ತು ಜನೌಷಧಿ ಕೇಂದ್ರವು ರಿಯಾಯಿತಿ ದರದ ಔಷಧಿಗಳನ್ನು ನೀಡುವುದರ ಜೊತೆಗೆ, ಈ ಯೋಜನೆಗಳು ಜನರಿಗೆ ಉತ್ತಮ ಆರೋಗ್ಯವನ್ನು ಒದಗಿಸುವ ಗುರಿಯನ್ನು ಹೊಂದಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉತ್ತರಾಖಂಡದ ಮೊದಲ ಮಹಿಳಾ ಸ್ಪೀಕರ್ ಆಗಿ ರಿತು ಖಂಡೂರಿ ಆಯ್ಕೆ

Share This Article
Leave a Comment

Leave a Reply

Your email address will not be published. Required fields are marked *