ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧ ಬಿಜೆಪಿಯ ಹಿಡನ್ ಅಜೆಂಡಾ: ಸತೀಶ್ ಜಾರಕಿಹೊಳಿ

Public TV
1 Min Read

ಬೆಳಗಾವಿ: ಹಿಂದೂ ಉತ್ಸವ, ಜಾತ್ರೆಗಳಿಗೆ ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧ ಹೇರಿರುವುದು ಬಿಜೆಪಿ ಅವರ ಹಿಡನ್ ಅಜೆಂಡಾದಲ್ಲಿ ಒಂದಾಗಿದೆ. ಬಿಜೆಪಿಯ ಹಿಜೆಂಡ್ ಅಜೆಂಡಾವನ್ನೆಲ್ಲಾ ಈಗ ಒಂದೊಂದೇ ಜಾರಿ ಮಾಡಲು ಪ್ರಯತ್ನ ಮಾಡ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆರೋಪಿಸಿದರು.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾನೂನು ಇರಬಹುದು, ಒಂದೆಡೆ ಸಕ್ಯೂಲರ್ ಇರಬಹುದು. ಸಾವಿರಾರು ವರ್ಷಗಳಿಂದ ಒಂದು ಸಂಪ್ರದಾಯ ಬಂದಿದೆ. ಹಿಂದೂ ಹಾಗೂ ಮುಸ್ಲಿಂರು ಒಟ್ಟಾಗಿ ಕೆಲಸ ಮಾಡುತ್ತಾರೆ, ವ್ಯಾಪಾರ ಮಾಡುತ್ತಾರೆ. ಇನ್ನೂ ಈ ಹಿಂದೆ ಬಿಜೆಪಿಯವರು 7ವರ್ಷಗಳಲ್ಲಿ ಸಾಕಷ್ಟು ಕಾನೂನು ತಂದರು. ಆರು ತಿಂಗಳವರೆಗೆ ಅದನ್ನು ವ್ಯಾಕ್ಯುಮ್ ಇಡ್ತಾರೆ. ಆಮೇಲೆ ಯಥಾಸ್ಥಿತಿ ಇರುತ್ತದೆ ಎಂದು ವಾಗ್ದಾಳಿ ನಡೆಸಿದರು.‌

ದೇಶದಲ್ಲಿ ಏನೂ ಬದಲಾವಣೆ ಮಾಡಲು ಸಾಧ್ಯವಿಲ್ಲ. ಈ ದೇಶದಲ್ಲಿ ಎಲ್ಲರೂ ಒಗ್ಗೂಡಿ ಇದ್ದಾರೆ. ಇಷ್ಟೆಲ್ಲಾ ಜಾತಿ, ಧರ್ಮ ಕೂಡಿ ಇರುವಂತಹ ವ್ಯವಸ್ಥೆ ಇದಾಗಿದೆ. ಬಿಜೆಪಿ ಅವರು ಏನೇ ಹೇಳಿದರೂ ಬದಲಾವಣೆ ಮಾಡಲಾಗಲ್ಲ. ಎಲ್ಲಾ ಯಥಾಸ್ಥಿತಿಯಾಗಿ ನಡೆಯುತ್ತೆ ಅಷ್ಟೇ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಜಮೀರ್ ಮುಂದೊಂದು ದಿನ ನೀವು ಆರ್‌ಎಸ್‍ಎಸ್‍ ಒಪ್ಪಿಕೊಳ್ಳಬೇಕಾಗುತ್ತೆ: ಸ್ಪೀಕರ್ ಮಾತಿನ ತಿವಿತ

ಎರಡು ತಿಂಗಳಲ್ಲಿ ಶಿವಮೊಗ್ಗ ಘಟನೆಯಾತ್ತು. ಹಿಜಬ್ ಆಯ್ತು, ಕೇಸರಿ ಶಾಲು ಆಯ್ತು, ಈಗ ಧಾರ್ಮಿಕ ಕೇಂದ್ರಗಳ ಸುತ್ತಮುತ್ತ ಮುಸ್ಲಿಮರು ವ್ಯಾಪಾರ ಮಾಡಬಾರದು ಎಂದು ಹೊಸದು ಮಾಡ್ತಿದ್ದಾರೆ. ಇದನ್ನೆಲ್ಲಾ ಅಷ್ಟು ಸುಲಭವಾಗಿ ಮಾಡಲು ಸಾಧ್ಯವಿಲ್ಲ. ಅವರೇನೇ ಹೇಳಿದರೂ ಜನ ಒಪ್ಪಲ್ಲ. ಎಲ್ಲರೂ ಕೂಡಿಯೇ ಇರುತ್ತಾರೆ. ಅವರ ಸಂಬಂಧಗಳು ಇರ್ತಾವೆ, ವ್ಯಾಪಾರದಲ್ಲಿ ಮುಸ್ಲಿಂ ಹಿಂದೂ ಅನ್ನೊದು ಸಂಬಂಧ ಬರಲ್ಲ ಎಂದು ಹೇಳಿದರು.

ದಿ ಕಾಶ್ಮೀರಿ ಫೈಲ್ಸ್ ಸಿನಿಮಾ ಬಿಜೆಪಿಯವರ ಒಂದು ಪಾರ್ಟ್. ಕರ್ನಾಟಕ ಚುನಾವಣೆ ಸಮೀಪಿಸುತ್ತಿದ್ದಂತೆ ಇನ್ನೂ ಸಾಕಷ್ಟು ಘಟನೆಗಳು ನಡೆಯುತ್ತದೆ. ಅದಕ್ಕೆ ನಾವು ಅದಕ್ಕೆ ಸಿದ್ಧರಾಗಿರಬೇಕು. ಏನಾದರೂ ಇಂದು ಸಮಸ್ಯೆ ಮಾಡಿಯೇ ಮಾಡುತ್ತಾರೆ. ಅದಕ್ಕೆ ನಾವು ಸಿದ್ಧರಾಗಿರಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಹಿಜಬ್ ಬದಲು ದುಪಟ್ಟಾ ಹಾಕಲು ಅವಕಾಶ ಕೊಡಿ ಎಂದು ಶಲ್ಯ ಹಿಂದೆ, ಮುಂದೆ ಮಾಡಿ ತೋರಿಸಿದ ಸಿದ್ದು

Share This Article
Leave a Comment

Leave a Reply

Your email address will not be published. Required fields are marked *