ಹಿಜಬ್ ಧರಿಸಿದ ಉಪ್ಪಿ – ಫೋಟೋ ವೈರಲ್

Public TV
1 Min Read

ಚಂದನವನದಲ್ಲಿ ತನ್ನ ವಿಭಿನ್ನ ನಟನೆ ಮತ್ತು ನಿರ್ದೇಶನದ ಮೂಲಕ ಇಡೀ ಕನ್ನಡಿಗರನ್ನು ಬೆರಗು ಮಾಡಿರುವವರು ನಟ ರಿಯಲ್ ಸ್ಟಾರ್ ಉಪೇಂದ್ರ. ಹೊಸ ರೀತಿಯ ಗೆಟಪ್ ಹಾಕಿಕೊಂಡಿದ್ದ ಫೋಟೋವನ್ನು ಶೇರ್ ಮಾಡಿರುವ ಉಪ್ಪಿ, ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಹುಡುಗಿ ವೇಷದಲ್ಲಿ ಕಾಣಿಸಿಕೊಂಡ ಉಪ್ಪಿಗೆ ಅಭಿಮಾನಿಗಳು ಕ್ಲೀನ್ ಬೌಲ್ಡ್ ಆಗಿದ್ದಾರೆ.

ವಿಭಿನ್ನ ನಿರ್ದೇಶನದ ಮೂಲಕ ಮತ್ತು ವಿಭಿನ್ನವಾಗಿ ಟೈಟಲ್ ನೀಡುವ ಮೂಲಕ ಕನ್ನಡಿಗರಿಗೆ ಹುಳ ಬಿಡುವ ಸ್ಟಾರ್ ನಿರ್ದೇಶಕರಲ್ಲಿ ಉಪ್ಪಿ ಆಗ್ರರು. ತನ್ನ ಪಾತ್ರಕ್ಕಾಗಿ ಯಾವುದೇ ರೀತಿಯ ಗೆಟಪ್ ಹಾಕಲು ಈ ನಟ ಯಾವಾಗಲೂ ಸಿದ್ಧವಾಗಿರುತ್ತಾನೆ. ಯಾವುದೇ ಮುಜುಗರವಿಲ್ಲದೆ ಪಾತ್ರಕ್ಕೆ ನ್ಯಾಯವೊದಗಿಸಲು ಈ ನಟ ರೆಡಿ ಇರುತ್ತಾರೆ. ಅದೇ ರೀತಿ ತಮ್ಮ ಪಾತ್ರಕ್ಕಾಗಿ ಈ ನಟ ಹೊಸ ರೀತಿಯ ಗೆಟಪ್ ಹಾಕಿದ್ದು, ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಈ ಫೋಟೋವನ್ನು ಉಪ್ಪಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:  ಕದ್ದುಮುಚ್ಚಿ ಮದುವೆ ಆಗಿಲ್ಲ, ಬಾಡಿಗೆ ತಾಯಿ ಸುಳ್ಳು : ನಯನತಾರಾ 

ಈ ಫೋಟೋ ನೋಡಿದ ಅಭಿಮಾನಿಗಳು, ತುಂಬು ಲಕ್ಷಣವಾದ ಕಲಾವಿದ. ಚಿತ್ರರಂಗದಲ್ಲಿ ಹೆಣ್ಣಿನ ಪಾತ್ರವನ್ನು ಮೈಗೂಡಿಸಿಕೊಂಡು ಮೈ ಮನ, ಚಳಿಬಿಟ್ಟು ನಟಿಸಲು ಕೆಲವೇ ನಟರಿಗೆ ಮಾತ್ರ ಸಾಧ್ಯ. ಅಂತಹ ನಟರ ಸಾಲಿಗೆ ಡಾ. ಉಪೇಂದ್ರರೇ ಸಾಟಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸರ್ ದಯವಿಟ್ಟು ನಿಮ್ ಡೈರೆಕ್ಷನ್ ಅಲ್ಲಿ ಫಿಲಂ ಮಾಡಿ ಸರ್ ಎಂದು ಕೋರಿಕೊಂಡಿದ್ದಾರೆ. ಪವರ್ ಆಫ್ ಹಿಜಬ್ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *