ಧರ್ಮರಾಯ ದೇವಾಲಯ ಆಸ್ತಿ ರಕ್ಷಣೆಗೆ ಸರ್ಕಾರ ಬದ್ಧ: ಸೋಮಣ್ಣ

By
2 Min Read

ಬೆಂಗಳೂರು: ಧರ್ಮರಾಯ ದೇವಾಲಯದ ಜಮೀನು ಒತ್ತುವರಿ ಮಾಡಿಕೊಂಡವರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಅಂತ ಸಚಿವ ಸೋಮಣ್ಣ ಭರವಸೆ ನೀಡಿದ್ದಾರೆ. ಬಿಜೆಪಿ ರವಿಕುಮಾರ್ ಹಾಗೂ ಕಾಂಗ್ರೆಸ್‌ನ ಪಿ.ಆರ್. ರಮೇಶ್ ಪ್ರಶ್ನೋತ್ತರ ಅವಧಿಯಲ್ಲಿ ಪ್ರಶ್ನೆ ಕೇಳಿದರು. ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಪರವಾಗಿ ಸಚಿವ ಸೋಮಣ್ಣ ಉತ್ತರ ನೀಡಿ,ದೇವಾಲಯ ಆಸ್ತಿ ಉಳಿಸೋದು ನಮ್ಮ ಸರ್ಕಾರದ ಬದ್ಧತೆ ಅಂತ ತಿಳಿಸಿದರು.

ಬಿಜೆಪಿ ರವಿಕುಮಾರ್ ಮಾತನಾಡಿ, ಬೆಂಗಳೂರಿನ ಹಲಸೂರು ನೀಲಸಂದ್ರದ ಧರ್ಮರಾಯ ದೇವಾಲಯದ 15 ಎಕರೆ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ. ಜಾಗ ಒತ್ತುವರಿ ಮಾಡಿಕೊಂಡು ಮನೆಗಳ ನಿರ್ಮಾಣ ಮಾಡಿದ್ದಾರೆ. ಈ ಜಾಗ ಶಾಲೆ, ಕಾಲೇಜು ನಿರ್ಮಾಣಕ್ಕೆ ದಾನ ನೀಡಿದ್ದಾರೆ. ಕೂಡಲೇ ಒತ್ತವರಿ ಜಾಗ ತೆರವು ಮಾಡಬೇಕು. ಎಷ್ಟೇ ದೊಡ್ಡವರು ಇದ್ದರು ಕ್ರಮ ತಗೋಬೇಕು ಒತ್ತಾಯ ಮಾಡಿದರು. ಇದನ್ನೂ ಓದಿ: ಬಪ್ಪನಾಡಿನಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ – ಸಾಮರಸ್ಯ ಎತ್ತಿಹಿಡಿದ ಕ್ಷೇತ್ರದ ಆಡಳಿತ ಮಂಡಳಿ

ಕಾಂಗ್ರೆಸ್‌ನ ಪಿ.ಆರ್. ರಮೇಶ್ ಮಾತನಾಡಿ, 800 ಎಕರೆ ಜಾಗ ಧರ್ಮರಾಯ ದೇವಾಲಯಕ್ಕೆ ಇತ್ತು. ಈಗ ಒಂದಿಂಚು ಜಾಗ ದೇವಾಲಯಕ್ಕೆ ಇಲ್ಲದ ಸ್ಥಿತಿ ನಿರ್ಮಾಣ ಆಗಿದೆ. ವ್ಯವಸ್ಥಿತವಾಗಿ ಈ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ. ಎಸಿ ಅವ್ರು ಸಚಿವರು ನಮ್ಮ ಜೇಬಿನಲ್ಲಿ ಇದ್ದಾರೆ ಅಂತಾರೆ.35 ಲಕ್ಷ ಸೆಕ್ಯುರಿಟಿ ಈ ಮನೆಗಳಿಗೆ ಇಟ್ಟಿದ್ದೇವೆ ಅಂತ ಇಲ್ಲಿನ ಮನೆಯವರು ಹೇಳ್ತಾರೆ. 216 ಜನ ಇಲ್ಲಿ ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಒತ್ತುವರಿ ತೆರವು ಮಾಡಬೇಕು ಅಂತ ಒತ್ತಾಯ ಮಾಡಿದರು.

ಸಚಿವೆ ಶಶಿಕಲಾ ಜೊಲ್ಲೆ ಪರವಾಗಿ ಸಚಿವ ಸೋಮಣ್ಣ ಉತ್ತರ ನೀಡಿದರು. ಧರ್ಮರಾಯ ದೇವಾಲಯದ ಜಾಗ ಒತ್ತುವರಿ ಮಾಡಿದವರು ಯಾರು ಉದ್ದಾರ ಆಗಿಲ್ಲ. ಬಿಬಿಎಂಪಿ ಅದಕ್ಕೆ ಕುಂಟುತ್ತಾ ಸಾಗಿದೆ ಅಂತ ಉದಾಹರಣೆ ಕೊಟ್ಟರು.

ಹಲಸೂರುನಲ್ಲಿ ಧರ್ಮರಾಯ ದೇವಾಲಯ 15 ಎಕರೆ 12 ಗುಂಟೆ ಜಾಗ ಇದೆ. ಇದ್ರಲ್ಲಿ 6 ಎಕರೆ ಜಾಗ ಒತ್ತುವರಿ ಆಗಿದೆ. 8 ಎಕರೆ ಖಾಲಿ ಜಾಗ ಹಾಗೇ ಇದೆ. 229 ಜನ ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತುವರಿ ಆಗಿರೋ ಜಾಗ ತೆರವು ಮಾಡೋ ಕೆಲಸ ಸರ್ಕಾರ ಮಾಡುತ್ತೆ. ಯಾರೇ ದೊಡ್ಡವರು ಆದರು ಕ್ರಮ ಗ್ಯಾರಂಟಿ ಅಂತ ತಿಳಿಸಿದರು.

ಸದ್ಯ ಇಲ್ಲಿನ ಜಮೀನು ಕಾಯೋಕೆ 24 ಗಂಟೆ ಸೆಕ್ಯುರಿಟಿ ಹಾಕಲಾಗಿದೆ. ಒಬ್ಬ ಗನ್ ಮ್ಯಾನ್ ಕೂಡಾ ಸ್ಥಳದಲ್ಲಿ ಹಾಕಲಾಗಿದೆ. ದೇವಾಲಯ ಜಮೀನು ಉಳಿಯಬೇಕು. ಇದಕ್ಕೆ ನಮ್ಮ ಸರ್ಕಾರ ಕ್ರಮ ತೆಗೆದುಕೊಳ್ಳುತ್ತೆ ಅಂತ ತಿಳಿಸಿದರು. ಮಿನಿಸ್ಟರ್ ಜೇಬಲ್ಲಿ ಇದ್ದಾರೆ ಅಂತ ಹೇಳಿದ ಎಸಿ ಮೇಲೆ FIR ಹಾಕಿಸ್ತೇನೆ. ಈಗ ಇವೆಲ್ಲ ಮಾತು ನಡೆಯಲ್ಲ ಅಂತ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *