ಆರ್.ಆರ್.ಆರ್ ಬೈಕಾಟ್ : ಕನ್ನಡ ಪರ ಹೋರಾಟಗಾರರಿಗೇ ಜವಾಬ್ದಾರಿ ಕೊಟ್ಟ ರಾಜಮೌಳಿ ಟೀಮ್

By
2 Min Read

ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾ ಕನ್ನಡದಲ್ಲಿ ಡಬ್ ಆಗಿದ್ದರೂ, ಅದು ಕರ್ನಾಟಕದಲ್ಲಿ ಪ್ರದರ್ಶನ ಕಾಣುತ್ತಿಲ್ಲ. ಒಂದೇ ಒಂದು ಥಿಯೇಟರ್ ಕೂಡ ಕನ್ನಡ ಡಬ್ಬಿಂಗ್ ಚಿತ್ರಕ್ಕೆ ಕೊಟ್ಟಿಲ್ಲವೆಂದು ಎರಡು ದಿನಗಳಿಂದ ‘ಬೈಕಾಟ್ ಆರ್.ಆರ್.ಆರ್’ ಹೋರಾಟ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಕನ್ನಡ ಪರ ಕೆಲ ಹೋರಾಟಗಾರರು ಮತ್ತು ಸತತವಾಗಿ ಡಬ್ಬಿಂಗ್ ಪರ ಒಲವು ತೋರಿರುವ ಕನ್ನಡಿಗರ ‘ಆರ್.ಆರ್.ಆರ್’ ಸಿನಿಮಾ ಕನ್ನಡದಲ್ಲೇ ಬೇಕು ಎಂದು ಕ್ಯಾಂಪೇನ್ ಶುರು ಮಾಡಿದ್ದರು. ಇದನ್ನೂ ಓದಿ : ಅನಿಲ್ ಕಪೂರ್ ಈ ಫೋಟೋ ಹಾಕಬಾರದಿತ್ತು: ಕಿವಿ ಹಿಂಡಿದ ಅಭಿಮಾನಿಗಳು

ಸೋಷಿಯಲ್ ಮೀಡಿಯಾದಲ್ಲಿ ಈ ಹೋರಾಟ ಕಾವು ಪಡೆದುಕೊಂಡಿತ್ತು. ಕನ್ನಡದಲ್ಲೇ ಆರ್.ಆರ್.ಆರ್ ನೋಡುತ್ತೇವೆ. ಬೇರೆ ಭಾಷೆಯಲ್ಲಿರುವ ಚಿತ್ರವನ್ನು ತಿರಸ್ಕರಿಸುತ್ತೇವೆ ಎಂದು ಅನೇಕ ಕನ್ನಡಿಗರು ಪೋಸ್ಟ್ ಮಾಡಿದ್ದರು. ಈ ಕಾವು ಮತ್ತಷ್ಟು ಜೋರಾಗುತ್ತಿದ್ದಂತೆಯೇ ಕರ್ನಾಟಕದಲ್ಲಿ ವಿತರಣಾ ಹಕ್ಕು ಪಡೆದಿರುವ ಕೆ.ವಿ.ಎನ್ ಸಂಸ್ಥೆಯು ತುಂಬಾ ಜಾಣ್ಮೆಯ ಉತ್ತರವನ್ನು ಕೊಟ್ಟಿದೆ. ಆರ್.ಆರ್.ಆರ್ ಸಿನಿಮಾವನ್ನು ಕನ್ನಡದಲ್ಲಿ ನೋಡಲು ನೀವೇ ನಮಗೆ ಸಹಾಯ ಮಾಡಬೇಕು ಎಂದು ಕನ್ನಡ ಪರ ಹೋರಾಟಗಾರರಿಗೆ ಈ ಜವಾಬ್ದಾರಿ ಹೊರೆಸಿದೆ. ಇದನ್ನೂ ಓದಿ : ರಾಜಕೀಯ ದಾಳವಾದ ಪುನೀತ್ ನಟನೆಯ ‘ಜೇಮ್ಸ್’ ಚಿತ್ರ

ಈ ಕುರಿತು ಡಬ್ಬಿಂಗ್ ಪರ ಹೋರಾಟಗಾರರಿಗೆ ಅದು ಸುದೀರ್ಘವಾಗಿ ಪತ್ರ ಬರೆದು, “ಆರ್.ಆರ್.ಆರ್ ನಾಯಕ ನಟರಾದ ರಾಮ್ ಚರಣ್ ಮತ್ತು ಜ್ಯೂ.ಎನ್.ಟಿ.ಆರ್ ಕನ್ನಡ ಕಲಿಯಲು ವಿಶೇಷ ಪ್ರಯತ್ನಗಳನ್ನು ಮಾಡಿ, ಮೊದಲ ಬಾರಿಗೆ ತಮ್ಮದೇ ಧ್ವನಿಯಲ್ಲಿ ಡಬ್ ಮಾಡಿದ್ದಾರೆ. ನೀವು ಕನ್ನಡ ಭಾಷೆಯಲ್ಲಿ ಈ ಮಹೋನ್ನತ ದೃಶ್ಯಕಾವ್ಯವನ್ನು ನೋಡಲು ಇಷ್ಟಪಡುತ್ತೀರಿ ಎಂದು ನಾವು ಭಾವಿಸಿದ್ದೇವೆ. ಆದ್ದರಿಂದ ಆರ್.ಆರ್.ಆರ್ ಸಿನಿಮಾವನ್ನು ಕನ್ನಡದ ಅವತರಣಿಕೆಯನ್ನು ಪ್ರದರ್ಶಿಸಲು ಹಿಂದೇಟು ಹಾಕುತ್ತಿರುವ ಥಿಯೇಟರ್ ಮಾಲೀಕರ ಮನವೊಲಿಸುವ ಕಾರ್ಯ ನಡೆಯುತ್ತಿದೆ. ಕನ್ನಡದ ಅವತರಣಿಕೆಯನ್ನು ಹೆಚ್ಚಿನ ಸ್ಕ್ರೀನ್ ಗಳಲ್ಲಿ ಬಿಡುಗಡೆ ಮಾಡಲು ಎಲ್ಲಾ ಪ್ರಯತ್ನಗಳನ್ನೂ ನಾವು ಸತತವಾಗಿ ಮಾಡುತ್ತಿದ್ದೇವೆ. ಈ ಬಗ್ಗೆ ನಾಳೆಯೊಳಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ. ಕನ್ನಡ ಅವತರಣಿಕೆಯನ್ನು ವೀಕ್ಷಿಸುವ ಮೂಲಕ ಹಾಗೂ ರಾಜ್ಯದಾದ್ಯಂತ ಹೆಚ್ಚಿನ ಪರದೆಗಳಲ್ಲಿ ಕನ್ನಡದ ಆವೃತ್ತಿಯನ್ನೇ ಬಿಡುಗಡೆ ಮಾಡುವುದಕ್ಕೆ ನಮಗೆ ನೀವು ಸಹಾಯ ಮಾಡುತ್ತೀರಿ, ನಮ್ಮನ್ನು ಬೆಂಬಲಿಸುತ್ತೀರಿ ಎಂದು ಭಾವಿಸುತ್ತೇವೆ’’ ಕನ್ನಡದ ಸಿನಿಮಾವನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮದೇ ಎಂದು ಕೈ ತೊಳೆದುಕೊಂಡಿದೆ. ಇದನ್ನೂ ಓದಿ : ಸ್ವಂತ ಜಮೀನು ಮಾರಿ ಆಸ್ಪತ್ರೆ ಕಟ್ಟಿಸಲು ಮುಂದಾದ ಹಿರಿಯ ನಟಿ ಲೀಲಾವತಿ: ಬಹುಪರಾಕ್ ಹೇಳಿದ ಕನ್ನಡ ಜನತೆ

 

 

ಇನ್ನೆರಡು ದಿನ ಕಳೆದರೆ ಆರ್.ಆರ್. ಆರ್ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಮಾರ್ಚ್ 25ಕ್ಕೆ ಹತ್ತು ಸಾವಿರಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಈ ಸಿನಿಮಾ ತೆರೆ ಕಾಣುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *