ರಾಜಕೀಯ ದಾಳವಾದ ಪುನೀತ್ ನಟನೆಯ ‘ಜೇಮ್ಸ್’ ಚಿತ್ರ

By
1 Min Read

ನರಂಜನೆ ಮತ್ತು ಸಮಾಜಮುಖಿ ಚಿಂತನೆಗಳತ್ತ ತೊಡಗಿಸಿಕೊಳ್ಳಬೇಕಿದ್ದ ಸಿನಿಮಾಗಳನ್ನು ರಾಜಕೀಯಗೊಳಿಸುತ್ತಿದ್ದಾರೆ. ಹಾಗಾಗಿ ‘ಜೇಮ್ಸ್’ ಚಿತ್ರಕ್ಕೆ ನಿಜವಾಗಿಯೂ ಆಗುತ್ತಿರುವ ಅನ್ಯಾಯದ ಬಗ್ಗೆ ಪುನೀತ್ ಅಭಿಮಾನಿಗಳು ಗೊಂದಲದಲ್ಲಿದ್ದಾರೆ.

ಒಂದು ಕಡೆ ಮಾಜಿ ಸಿ.ಎಂ ಸಿದ್ಧರಾಮಯ್ಯ ಅವರನ್ನು  ಜೇಮ್ಸ್ ಸಿನಿಮಾ ನಿರ್ಮಾಪಕರು ಭೇಟಿ ಮಾಡಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಜತೆಗೆ ಜೇಮ್ಸ್ ಸಿನಿಮಾವನ್ನು ಥಿಯೇಟರ್ ನಿಂದ ತೆಗೆದುಹಾಕಲು ಬಿಜೆಪಿ ಸಂಚು ನಡೆಸಿದೆ ಎಂದು ಸ್ವತಃ ಸಿದ್ಧರಾಮಯ್ಯನವರೇ ವಿಧಾನಸೌಧದಲ್ಲಿ ಮಾತನಾಡಿದ್ದಾರೆ. ಇಂದು ಕಲಬುರಗಿಯಲ್ಲಿ ಕೆ.ಪಿ.ಸಿ.ಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ‘ಜೇಮ್ಸ್’ ಸಿನಿಮಾದ ಬಗ್ಗೆ ಮಾತನಾಡಿ, ‘ಕನ್ನಡದ ಸಿನಿಮಾವೊಂದನ್ನು ಥಿಯೇಟರ್ ನಿಂದ ತಗೆಯುವುದನ್ನು ಸಹಿಸಲಾರೆ. ಪುನೀತ್ ಅವರ ಕೊನೆಯ ಸಿನಿಮಾವಿದು. ಥಿಯೇಟರ್ ಮಾಲೀಕರೇ ನನಗೆ ಕಾಲ್ ಮಾಡಿ, ಥಿಯೇಟರ್ ನಿಂದ ಜೇಮ್ಸ್ ಸಿನಿಮಾ ತೆಗೆಯುವಂತೆ ಒತ್ತಡ ಹೇರುತ್ತಿದ್ದಾರೆ ಎಂದಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ : ಸ್ವಂತ ಜಮೀನು ಮಾರಿ ಆಸ್ಪತ್ರೆ ಕಟ್ಟಿಸಲು ಮುಂದಾದ ಹಿರಿಯ ನಟಿ ಲೀಲಾವತಿ: ಬಹುಪರಾಕ್ ಹೇಳಿದ ಕನ್ನಡ ಜನತೆ

ಈ ನಡುವೆ ಬೈಕಾಟ್ ‘ಆರ್.ಆರ್.ಆರ್’ ಎನ್ನುವ ಕ್ಯಾಂಪೇನ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ನಡೆದಿದೆ. ಈ ಹೋರಾಟಕ್ಕೆ ‘ಜೇಮ್ಸ್’ ಸಿನಿಮಾವನ್ನೂ ಅವರು ಬಳಸಿಕೊಳ್ಳುತ್ತಿದ್ದಾರೆ. ಆರ್.ಆರ್.ಆರ್ ಕನ್ನಡಕ್ಕೆ ಡಬ್ ಆಗಿದ್ದರೂ, ಹೆಚ್ಚಿನ ಸಂಖ್ಯೆಯ ಚಿತ್ರಮಂದಿರಗಳಲ್ಲಿ ತೆಲುಗು ಭಾಷೆಯ ಸಿನಿಮಾ ರಿಲೀಸ್ ಆಗುತ್ತಿದೆ. ಅದರಲ್ಲೂ ಕನ್ನಡ ಜೇಮ್ಸ್ ಚಿತ್ರಕ್ಕೆ ಥಿಯೇಟರ್ ಸಿಗದಂತೆ ನೋಡಿಕೊಳ್ಳಲಾಗುತ್ತಿದೆ.  ಇದು ಅನ್ಯಭಾಷಾ ಹೇರಿಕೆ ಎಂಬಂತೆ ಬಿಂಬಿಸಲಾಗುತ್ತಿದೆ. ಹಾಗಾಗಿ ಪುನೀತ್ ಅಭಿಮಾನಿ ಗೊಂದಲಕ್ಕೆ ಬಿದ್ದಿದ್ದಾನೆ. ಇದನ್ನೂ ಓದಿ : ಇಡೀ ಥಿಯೇಟರ್ ನಲ್ಲಿ ಒಬ್ಬರೇ ಕೂತು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ವೀಕ್ಷಿಸಿದ ಡೈಮಂಡ್ ರವಿ

ಈ ನಡುವೆ ಜೇಮ್ಸ್ ಸಿನಿಮಾದ ನಿರ್ದೇಶಕರು ಮತ್ತು ನಿರ್ಮಾಪಕರು ವಿಡಿಯೋ ಮೂಲಕ ತಮ್ಮ ಚಿತ್ರಕ್ಕೆ ಆಗುತ್ತಿರುವ ಅನ್ಯಾವನ್ನೂ ಜನರ ಮುಂದೆ ಹಂಚಿಕೊಂಡಿದ್ದಾರೆ. ಥಿಯೇಟರ್‍ ನಿಂದ ತಮ್ಮ ಸಿನಿಮಾವನ್ನು ತಗೆಯುತ್ತಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಅಲ್ಲಿಗೆ ಜೇಮ್ಸ್ ಸಿನಿಮಾ ಫುಟ್ಬಾಲ್ ರೀತಿಯಲ್ಲಿ ಬಳಕೆ ಆಗುತ್ತಿರುವುದಂತೂ ಸತ್ಯ.

Share This Article
Leave a Comment

Leave a Reply

Your email address will not be published. Required fields are marked *