ಮೂರು ವರ್ಷಗಳಲ್ಲಿ ಅನುಭವ ಮಂಟಪ ನಿರ್ಮಾಣ: ಆರ್‌. ಅಶೋಕ್

By
1 Min Read

ಬೆಂಗಳೂರು: 3 ವರ್ಷಗಳಲ್ಲಿ ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ಆಗಲಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್ ತಿಳಿಸಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಡಾ. ಚಂದ್ರಶೇಖರ್ ಬಿ ಪಾಟೀಲ್ ಪ್ರಶ್ನೆ ಕೇಳಿದರು.

ಮಾಜಿ ಸಿಎಂ ಯಡಿಯೂರಪ್ಪ ಅವರು 2020ರಲ್ಲಿ ಅನುಭವ ಮಂಟಪ ನಿರ್ಮಾಣ ಮಾಡೋದಾಗಿ ಘೋಷಣೆ ಮಾಡಿದ್ದರು. ಈವರೆಗೂ ಕೆಲಸ ಪ್ರಾರಂಭ ಆಗಿಲ್ಲ. ಭೂಸ್ವಾಧೀನ ‌ಪ್ರಕ್ರಿಯೆ ಕೂಡಾ ಆಗಿಲ್ಲ. ಕೂಡಲೇ ಅನುಭವ ಮಂಟಪ ನಿರ್ಮಾಣದ ಕೆಲಸ ಪ್ರಾರಂಭ ಮಾಡಬೇಕು ಎಂದು ಒತ್ತಾಯ ಮಾಡಿದರು. ಇದನ್ನೂ ಓದಿ: ಮಂಗಳೂರು, ಉಡುಪಿ ಬಳಿಕ ಬೆಂಗಳೂರಿಗೂ ವ್ಯಾಪಿಸಿದ ಧರ್ಮ ಸಂಘರ್ಷ

ಇದಕ್ಕೆ ಉತ್ತರ ನೀಡಿದ ಕಂದಾಯ ಸಚಿವ  ಆರ್. ಅಶೋಕ್, ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಪ್ರಕ್ರಿಯೆ ಪ್ರಾರಂಭ ಆಗಿದೆ. ಫೆಬ್ರವರಿ 12, 2022 ರಂದು 560 ಕೋಟಿ ವೆಚ್ಚದ DPRಗೆ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ.‌2022 ರ ಮಾರ್ಚ್‌ 3 ರಂದು ಟೆಂಡರ್‌ಗೆ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ. 3 ವರ್ಷಗಳಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಟೆಂಡರ್‌ನಲ್ಲಿ  ನಿಬಂಧನೆ ಹಾಕಲಾಗಿದೆ ಅಂತ ತಿಳಿಸಿದರು. ಇದನ್ನೂ ಓದಿ: ಹಿಂದೂ ಜಾತ್ರೆಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ನಿರ್ಬಂಧದ ಬ್ಯಾನರ್ ಹಾಕಿದವರು ಹೇಡಿಗಳು: ಖಾದರ್

ಈಗಾಗಲೇ 200 ಕೋಟಿ ಅನುದಾನ ಅನುಭವ ಮಂಟಪದ ನಿರ್ಮಾಣಕ್ಕೆ ಬಿಡುಗಡೆ ಮಾಡಲಾಗಿದೆ. 101 ಎಕರೆ ಜಾಗದಲ್ಲಿ ಅನುಭವ ಮಂಟಪ ನಿರ್ಮಾಣ ಮಾಡಲಾಗುತ್ತದೆ.ಇದು ಯಡಿಯೂರಪ್ಪನವರ ಕನಸ್ಸಿನ ಯೋಜನೆ. ಈಗಾಗಲೇ ಭೂಸ್ವಾಧೀನ ಮಾಡಿಕೊಳ್ಳಲು ಡಿಸಿಗೆ ಸೂಚನೆ ನೀಡಲಾಗಿದೆ. ಭೂಸ್ವಾಧೀನದಲ್ಲಿ ಏನಾದ್ರು ಸಮಸ್ಯೆ ಇದ್ದರೆ ಅದನ್ನ ಪರಿಹಾರ ಮಾಡಿ ಅನುಭವ ಮಂಟಪ ನಿರ್ಮಾಣದ ಕೆಲಸ ಮಾಡುತ್ತೇವೆ ಅಂತ ಸಚಿವರು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *