ಸಲಿಂಗಿಗಳ ಸರಸಕ್ಕೆ ಕ್ಯಾಮೆರಾ ಇಟ್ಟ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ: ಭಾರತದ ಮೊದಲ ಲೆಸ್ಬಿಯನ್ ಸಿನಿಮಾ

By
2 Min Read

ಮ್ಮದೇ ಓಟಿಟಿಗಾಗಿ ಪ್ರಾಯಸ್ಥರು ನೋಡುವಂತಹ ಸಿನಿಮಾಗಳನ್ನು ಮಾಡುತ್ತಿದ್ದಾರೆ ಬಾಲಿವುಡ್ ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ. ಈ ಹಿಂದೆ ಅವರು ಜಿ.ಎಸ್.ಟಿ, ನೆಕೆಡ್, ಮೇರಿ ಬೇಟಿ ಸನ್ನಿ ಲಿಯೋನ್ ಬನ್ ಚಾತಿ ಹೈ ಸೇರಿದಂತೆ ಹಲವು ವಯಸ್ಕರ ಚಿತ್ರಗಳನ್ನು ಮಾಡಿರುವ ವರ್ಮಾ, ಇದೀಗ ಭಾರತೀಯ ಸಿನಿಮಾ ರಂಗದ ಮೊದಲ ಲೆಸ್ಬಿಯನ್ ಸಿನಿಮಾ ಮಾಡಿದ್ದಾರೆ. ಅದಕ್ಕೆ ಅವರು ‘ಡೇಂಜರ್’ ಎಂದು ಹೆಸರಿಟ್ಟಿದ್ದಾರೆ. ಆ ಸಿನಿಮಾದ 2 ಟ್ರೇಲರ್ ಅನ್ನು ಇಂದು ಸಂಜೆ 7 ಗಂಟೆಗೆ ಮಾಡುವುದಾಗಿ ತಿಳಿಸಿದ್ದಾರೆ.

ರಾಮ್ ಗೋಪಾಲ್ ವರ್ಮಾ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗಿಂತ ಬೇಡದೇ ಇರುವ ಕಾರಣಕ್ಕಾಗಿ ಹೆಚ್ಚು ಸುದ್ದಿ ಆಗುತ್ತಿದ್ದಾರೆ. ತಮ್ಮ ನಿರ್ದೇಶನದಲ್ಲಿ ಬರುತ್ತಿರುವ ಇತ್ತೀಚಿನ ಚಿತ್ರಗಳ ನಾಯಕಿಯರ ಜತೆ ಪಬ್ ನಲ್ಲಿ ಮೋಜು ಮಸ್ತಿ ಮಾಡುವುದು, ಮಾಡೆಲ್ ಗಳ ಜತೆ ನಿತ್ಯವೂ ಪಾರ್ಟಿಯಲ್ಲಿ ತೊಡಗುವುದು ಹವ್ಯಾಸ ಮಾಡಿಕೊಂಡಿದ್ದಾರೆ. ಅವುಗಳನ್ನು ಸಾಕ್ಷಿ ಸಮೇತ ಎನ್ನುವಂತೆ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಾರೆ. ಹಾಗೆಯೇ ವಿವಾದವನ್ನೂ ಮೈಮೇಲೆ ಎಳೆದುಕೊಳ್ಳುತ್ತಾರೆ. ಇದನ್ನೂ ಓದಿ : ಅಜಿತ್ ನಟನೆ ಬ್ಲಾಕ್ ಬಸ್ಟರ್ ‘ವಲಿಮೈ’ಸಿನಿಮಾ ಒಟಿಟಿಗೆ ಎಂಟ್ರಿ

ರಾಮ್ ಗೋಪಾಲ್ ವರ್ಮಾ ಅವರ ಓಟಿಟಿಕೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಹೆಚ್ಚಾಗಿ ವಯಸ್ಕರರೇ ನೋಡುವಂತಹ ಚಿತ್ರಗಳನ್ನು ಇವರು ಮಾಡುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಬ್ ಸ್ಕ್ರೈಬ್ ಆಗಿದ್ದಾರೆ. ಹೀಗಾಗಿ ಎರಡು ತಿಂಗಳಿಗೆ ಒಂದರಂತೆ ಇಂತಹ ಕಂಟೆಂಟ್ ಅನ್ನು ಅಲ್ಲಿ ತುಂಬುತ್ತಲೇ ಇರುತ್ತಾರೆ ರಾಮ್ ಗೋಪಾಲ್ ವರ್ಮಾ.

ಈ ಬಾರಿ ಅವರು ಆಯ್ಕೆ ಮಾಡಿಕೊಂಡಿರುವ ಕಥಾವಸ್ತು, ಸಲಿಂಗಿಗಳದ್ದು. ಇಬ್ಬರು ಸಲಿಂಗಿ ಹುಡುಗಿಯರ ಕಥೆಯನ್ನು ತಮ್ಮದೇ ಆದ ಶೈಲಿಯಲ್ಲಿ ಹೇಳಿದ್ದಾರಂತೆ ರಾಮ್ ಗೋಪಾಲ್ ವರ್ಮಾ. ಆ ಸಿನಿಮಾದ ಒಂದಷ್ಟು ಝಲಕ್ ತೋರಿಸುವುದಕ್ಕಾಗಿಯೇ ಅವರು 2ನೇ ಟ್ರೇಲರ್ ರಿಲೀಸ್ ಮಾಡುತ್ತಿದ್ದಾರೆ. ಹಾಗಂತ ಟ್ವಿಟರ್ ನಲ್ಲಿ ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಕನ್ನಡದ ಹುಡುಗನ ಚಿತ್ರಕ್ಕೆ ಹನ್ಸಿಕಾ ಮೊಟ್ವಾನಿ ಹೀರೋಯಿನ್

ಇದೊಂದು ಕ್ರೈಂ ಮತ್ತು ಆಕ್ಷನ್ ಸಿನಿಮಾವಾಗಿದ್ದು, ಡೇಂಜರಸ್ ಹೆಸರಿನಲ್ಲಿ ಮೂಡಿ ಬರುತ್ತಿದೆ. ಈ ಸಿನಿಮಾದಲ್ಲಿ ಅಪ್ಸರಾ ರಾಣಿ ಮತ್ತು ನೈನಾ ಗಂಗೂಲಿ ನಟಿಸಿದ್ದಾರೆ. ಈಗಾಗಲೇ ರಿಲೀಸ್ ಮಾಡಿರುವ ಪೋಸ್ಟರ್ ಗಳು ಇಬ್ಬರು ಹುಡುಗಿಯರ ನಡುವಿನ ಸಲಿಂಗಕಾಮವನ್ನು ಭಾವೋದ್ರಿಕ್ತಗೊಳಿಸುವ ರೀತಿಯಲ್ಲಿ ಡಿಸೈನ್ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *