ಐಪಿಎಲ್‍ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿ

By
1 Min Read

ಮುಂಬೈ: ಐಪಿಎಲ್ ಇತಿಹಾಸದಲ್ಲಿ ಬ್ಯಾಟ್ಸ್‌ಮ್ಯಾನ್‌ಗಳ ದರ್ಬಾರ್ ಮುಂದೆ ಬೌಲರ್‌ಗಳು ಶೈನ್ ಆಗಿದ್ದಾರೆ. ಈವರೆಗೆ ಒಟ್ಟು 17 ಬೌಲರ್‌ಗಳು ಐಪಿಎಲ್ ಇತಿಹಾಸದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದಾರೆ.

ಐಪಿಎಲ್‍ನಲ್ಲಿ ಬೌಲರ್‌ಗಿಂತ ಹೆಚ್ಚು ಬ್ಯಾಟ್ಸ್‌ಮ್ಯಾನ್‌ಗಳು ಘರ್ಜಿಸುತ್ತಾರೆ. ಅದರಲ್ಲೂ ಕೆಲವೊಮ್ಮೆ ಬೌಲರ್‌ಗಳು ಕೂಡ ತಮ್ಮ ಅದ್ಭುತ ಬೌಲಿಂಗ್ ನಿರ್ವಹಣೆ ಮೂಲಕ ನೋಡುಗರನ್ನು ಅಚ್ಚರಿ ಮೂಡಿಸಿದ್ದಾರೆ. ಜೊತೆಗೆ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಸಂಭ್ರಮಿಸಿದ್ದಾರೆ. ಈವರೆಗಿನ 14 ಆವೃತ್ತಿಗಳಲ್ಲಿ ಒಟ್ಟು 17 ಬೌಲರ್‌ಗಳು ಹ್ಯಾಟ್ರಿಕ್ ವಿಕೆಟ್ ಪಡೆದಿದ್ದು, ಈ ಪೈಕಿ ಅಮಿತ್ ಮಿಶ್ರ 3 ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದಾರೆ. ಇದನ್ನೂ ಓದಿ: Women’s World Cup: ಮಹತ್ವದ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಗೆಲುವಿನ ನಗೆ ಬೀರಿದ ಟೀಂ ಇಂಡಿಯಾ

ಅಮಿತ್ ಮಿಶ್ರಾ ಬಳಿಕ ಯುವರಾಜ್ ಸಿಂಗ್ 2 ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದರೆ, ಇನ್ನುಳಿದ 15 ಬೌಲರ್‌ಗಳು ತಲಾ ಒಂದೊಂದು ಬಾರಿ ಹ್ಯಾಟ್ರಿಕ್ ವಿಕೆಟ್ ಕಿತ್ತು ಐಪಿಎಲ್‍ನಲ್ಲಿ ತಮ್ಮ ಬೌಲಿಂಗ್ ಕರಾಮತ್ತನ್ನು ಪ್ರದರ್ಶಿಸಿದ್ದಾರೆ. ಇದನ್ನೂ ಓದಿ: ಧೋನಿಯ ನಂಬಿಕಸ್ಥ ಬೌಲರ್, 2014ರ ಪರ್ಪಲ್ ಕ್ಯಾಪ್ ವಿನ್ನರ್ – ಇದೀಗ ನೆಟ್ ಬೌಲರ್!

ಈವರೆಗೆ 14 ಆವೃತ್ತಿ ಐಪಿಎಲ್ ನಡೆದಿದ್ದು, ಇದೀಗ 15ನೇ ಆವೃತ್ತಿ ಐಪಿಎಲ್‍ಗಾಗಿ 10 ತಂಡಗಳು ಸಿದ್ಧತೆಯಲ್ಲಿ ತೊಡಗಿಕೊಂಡಿವೆ. 15ನೇ ಆವೃತ್ತಿ ಐಪಿಎಲ್ ಮಾರ್ಚ್ 26 ರಂದು ಆರಂಭವಾಗುತ್ತಿದ್ದು, ಮುಂಬೈ ಮತ್ತು ಪುಣೆಯಲ್ಲಿ ಒಟ್ಟು 70 ಲೀಗ್ ಮತ್ತು 4 ಪ್ಲೇ ಆಫ್ ಪಂದ್ಯಗಳು ನಡೆಯಲಿದೆ. ಒಟ್ಟು 65 ದಿನಗಳ ಕಾಲ ಟೂರ್ನಿ ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *