ಬರಲಿವೆ ಪುನೀತ್ ನಟನೆಯ ‘ಯುವರತ್ನ’ ಸಿನಿಮಾದ ಅನ್ ಕಟ್ ಸೀನ್ಸ್ : ನಿರ್ದೇಶಕ ಸಂತೋಷ್ ಆನಂದ್

By
1 Min Read

ಪುನೀತ್ ರಾಜ್ ಕುಮಾರ್ ನಟನೆಯ ‘ಯುವರತ್ನ’ ಸಿನಿಮಾ ಕಳೆದ ವರ್ಷ ಬಾಕ್ಸ್ ಆಫೀಸಿನಲ್ಲಿ ಹೇಳಿಕೊಳ್ಳುವಂತೆ ದುಡ್ಡು ತಂದು ಕೊಡದೇ ಇದ್ದರೂ, ಆ ಸಿನಿಮಾದ ಆಶಯದಿಂದಾಗಿ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಸರಕಾರಿ ಕಾಲೇಜುಗಳ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನಿಟ್ಟುಕೊಂಡು ಮಾಡಿರುವ ಚಿತ್ರದಲ್ಲಿ ಸಮಾಜದ ಕಾಳಜಿ ಎದ್ದು ಕಾಣುತ್ತಿತ್ತು. ಹೀಗಾಗಿ ಯುವರತ್ನ ಸಿನಿಮಾ ಪುನೀತ್ ಅಭಿಮಾನಿಗಳಿಗೆ ಇಷ್ಟವಾಗಿತ್ತು. ಇದನ್ನೂ ಓದಿ : ತಮಿಳಲ್ಲ, ಬಾಲಿವುಡ್ ಗೆ ಹಾರಿದ ರಜನಿಕಾಂತ್ ಪುತ್ರಿ ಐಶ್ವರ್ಯಾ

ಡಾ.ರಾಜ್ ಕುಮಾರ್ ಈ ಹಿಂದೆ ಕಾಲೇಜು ವಿದ್ಯಾರ್ಥಿಗಳಿಗೆ ಸಪ್ಲೈ ಆಗುತ್ತಿದ್ದ ಡ್ರಗ್ಸ್ ಕುರಿತಾದ ಚಿತ್ರವೊಂದನ್ನು ಮಾಡಿದ್ದರು. ಯುವರತ್ನ ಸಿನಿಮಾದಲ್ಲೂ ಅಂತಹ ದೃಶ್ಯಗಳಿದ್ದವು. ಆ ಎರಡೂ ಸಿನಿಮಾಗಳನ್ನು ಅಭಿಮಾನಿಗಳು ಹೋಲಿಕೆ ಮಾಡಿದ್ದರು. ಆ ಸಿನಿಮಾ ಕೆಲವು ದೃಶ್ಯಗಳನ್ನು ತೆರೆಗೆ ತಂದಿರಲಿಲ್ಲ ನಿರ್ದೇಶಕರು. ಈಗ ಆ ದೃಶ್ಯಗಳನ್ನು ತರುವ ಆಲೋಚನೆ ಮಾಡಿದ್ದಾರೆ. ಇದನ್ನೂ ಓದಿ : ಎಳನೀರಿನಲ್ಲಿ ಮದ್ಯ ಹಾಕಿ ಕೊಟ್ಟಿದ್ದೇ ಈ ನಟಿ ಸಾವಿಗೆ ಕಾರಣವಾಯ್ತಾ?

ಪುನೀತ್ ಅಭಿಮಾನಿಯೊಬ್ಬ ಟ್ವಿಟರ್ ಮೂಲಕ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರಿಗೆ ‘ಸಂತು ಅಣ್ಣ ನಿಮ್ಮಿಂದ ನಾವು ಇನ್ನೇನು ಕೇಳೋಕೆ ಆಗಲ್ಲ. ಆದರೆ, ಯುವರತ್ನ ಚಿತ್ರದ ಡಿಲಿಟೆಡ್ ಸೀನ್ಸ್ ಹಾಗೂ ಬಿಜಿಎಂ ಮಾತ್ರ ಕೇಳ್ತೀವಿ. ದಯವಿಟ್ಟು ಬಿಡಿ ಅಣ್ಣ’ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ : ಮಿಲ್ಕಿ ಬ್ಯೂಟಿಗೆ ಬಿಕಿನಿನೂ ಒಪ್ಪತ್ತೆ ಅಂದ್ರು ಫ್ಯಾನ್ಸ್ : ಖುಷ್ ಅಂದ ತಮನ್ನಾ

ಚಂದು ಎಂಬ ಅಭಿಮಾನಿಯ ಈ ಕೋರಿಕೆಗೆ ಪ್ರತಿಕ್ರಿಯೆ ನೀಡಿರುವ ಸಂತೋಷ್ ಆನಂದ್ ರಾಮ್ “ಈಗಲೇ ಎಲ್ಲವನ್ನೂ ರಿಲೀಸ್ ಮಾಡುವುದಕ್ಕೆ ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಖಂಡಿತಾ ಎಲ್ಲವನ್ನೂ ಅಭಿಮಾನಿಗಳಿಗೆ ಕೊಡುತ್ತೇವೆ. ನಮ್ ಪವರ್ ಸ್ಟಾರ್ ಯಾವತ್ತಿಗೂ ತೆರೆಯ ಮೇಲೆ ಇರಬೇಕು’ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ ಯುವರತ್ನ ಸಿನಿಮಾದ ಅನ್ ಕಟ್ ದೃಶ್ಯಗಳನ್ನು ನೋಡುವಂತಹ ಭಾಗ್ಯವನ್ನು ಅವರು ಅಭಿಮಾನಿಗಳಿಗೆ ಕಲ್ಪಿಸಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *