ರಷ್ಯಾದೊಂದಿಗೆ ಸಂಬಂಧ – 11 ರಾಜಕೀಯ ಪಕ್ಷಗಳನ್ನು ಅಮಾನತುಗೊಳಿಸಿದ ಉಕ್ರೇನ್

Public TV
1 Min Read

ಕೀವ್: ಉಕ್ರೇನ್‌ನ ರಾಷ್ಟ್ರೀಯ ಭದ್ರತೆ ಹಾಗೂ ರಕ್ಷಣಾ ಮಂಡಳಿ ರಷ್ಯಾದ ಪರವಾಗಿದ್ದ 11 ರಾಜಕೀಯ ಪಕ್ಷಗಳನ್ನು ಅಮಾನತುಗೊಳಿಸಿದೆ. ಇದೀಗ ಉಕ್ರೇನ್‌ನಲ್ಲಿ ಸಮರ ಕಾನೂನು ಜಾರಿಗೊಳಿಸಲಾಗಿದೆ.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತನ್ನ ದೇಶದ ಮೇಲೆ ಯುದ್ಧ ಸಾರಿರುವ ರಷ್ಯಾದೊಂದಿಗೆ ಸಂಬಂಧ ಹೊಂದಿದ್ದ 11 ರಾಜಕೀಯ ಪಕ್ಷಗಳನ್ನು ಅಮಾನತುಗೊಳಿಸಿದ್ದಾರೆ. 4.41 ಕೋಟಿ ಜನಸಂಖ್ಯೆ ಇರುವ ಉಕ್ರೇನ್‌ನಲ್ಲಿ 450 ಸಂಸತ್ ಸ್ಥಾನಗಳಲ್ಲಿ 44 ಸ್ಥಾನಗಳನ್ನು ರಷ್ಯಾಗೆ ಬೆಂಬಲ ನೀಡುತ್ತಿದ್ದ ರಾಜಕೀಯ ಪಕ್ಷದವರೇ ಪಡೆದುಕೊಂಡಿದ್ದರು. ಇದನ್ನೂ ಓದಿ: ಪಾಕಿಸ್ತಾನದ ಸೇನಾ ನೆಲೆಯಲ್ಲಿ ಭಾರೀ ಸ್ಫೋಟ 

ಭಾನುವಾರ ವೀಡಿಯೋ ಸಂದೇಶವನ್ನು ಕಳುಹಿಸಿದ ಉಕ್ರೇನ್ ಅಧ್ಯಕ್ಷ ರಷ್ಯಾ ಉಕ್ರೇನ್ ಮೇಲೆ ದೊಡ್ಡ ಮಟ್ಟದ ಯುದ್ಧವನ್ನೇ ನಡೆಸಿದೆ. ಈ ಯುದ್ಧಕ್ಕೆ ನಮ್ಮ ದೇಶದ ಒಳಗಡೆಯೇ ಕೆಲವು ರಾಜಕೀಯ ಪಕ್ಷಗಳು ಬೆಂಬಲವನ್ನು ನೀಡಿರುವುದು ಗಮನಕ್ಕೆ ಬಂದಿದೆ. ರಷ್ಯಾದೊಂದಿಗೆ ಸಂಬಂಧವನ್ನು ಹೊಂದಿರುವ ರಾಜಕೀಯ ಪಕ್ಷಗಳನ್ನು ಸಮರ ಕಾನೂನಿನ ಅವಧಿಗೆ ಅಮಾನತುಗೊಳಿಸಲಾಗುವುದು ಎಂದಿದ್ದಾರೆ.ಇದನ್ನೂ ಓದಿ: 98ರ ಹರೆಯದಲ್ಲೂ ರಷ್ಯಾ ವಿರುದ್ಧ ಹೋರಾಡಲು ಮುಂದಾದ ವೃದ್ಧೆ

 

Share This Article
Leave a Comment

Leave a Reply

Your email address will not be published. Required fields are marked *