ಸಚಿವ ಆರ್.ಅಶೋಕ್ ವಿರುದ್ಧ ಅಶ್ವಥ್ ನಾರಾಯಣ್ ಪರೋಕ್ಷ ಅಸಮಾಧಾನ

By
1 Min Read

ಬೆಂಗಳೂರು: ನಾವಿಬ್ಬರು ಒಂದೇ ಪಕ್ಷದಲ್ಲಿರುವವರು, ಸಹೋದರರ ರೀತಿ ಇರಬೇಕು ಎಂದು ಸಚಿವ ಅಶ್ವಥ್ ನಾರಾಯಣ್ ಹೇಳಿದ್ದಾರೆ.

ರಾಮನಗರ ಜಿಲ್ಲೆಯ ತಹಶೀಲ್ದಾರ್ ವರ್ಗಾವಣೆಗೆ ಸಂಬಂಧಪಟ್ಟಂತೆ ಸಚಿವರಿಬ್ಬರ ನಡುವೆ ಮನಸ್ತಾಪವಾಗಿದೆ ಎಂಬ ವಿಚಾರವಾಗಿ ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ರಾಮನಗರ, ಮಾಗಡಿಯಲ್ಲಿ ಪೋಸ್ಟಿಂಗ್ ವಿಚಾರದಲ್ಲಿ ಕೋರಿಕೆಯಾಗಿತ್ತು. ಅಶೋಕ್ ಅವರು ಇದನ್ನು ಪರಿಗಣಿಸಿ ನೋಡುತ್ತೇವೆ ಅಂತ ಹೇಳಿದ್ದಾರೆ. ಅದು ಅವರ ಇಲಾಖೆಗೆ ಬಿಟ್ಟಿದ್ದು, ಮಾಡುತ್ತೇವೆ ಎಂದು ಹೇಳಿದ್ದಾರೆ ನೋಡೋಣ ಎಂದು ತಿಳಿಸಿದ್ದಾರೆ.

ಆಯಾಯಾ ಇಲಾಖೆಗಳು ಇತಿಮಿತಿಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ. ನಮಗೆ ಈ ರೀತಿ ಬದಲಾವಣೆಗಳು ಆಗಬೇಕೆಂಬ ಒತ್ತಾಯ, ಬೇಡಿಕೆಗಳು ಇರುತ್ತದೆ. ಹಾಗಾಗಿ ಆ ಒತ್ತಾಯಗಳಿಗೆ ಸಂಬಂಧಪಟ್ಟ ಇಲಾಖಾ ಸಚಿವರಿಗೆ ತಿಳಿಸುತ್ತೇವೆ. ಅವರು ಪರಿಸ್ಥಿತಿಗೆ ಅನುಗುಣವಾಗಿ ಸಹಾಯ ಮಾಡುತ್ತಾರೆ, ಇಲ್ಲ ಅಂದರೆ ಇಲ್ಲ ಅಂತ ಹೇಳುತ್ತಾರೆ. ಅವರು ಅವರ ಇಲಾಖೆಗಳ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ನಮ್ಮದು ಒತ್ತಾಯ ಇರುತ್ತದೆ ಅಷ್ಟೇ. ನಮ್ಮ ಒತ್ತಾಯವನ್ನೇ ಪರಿಗಣಿಸಬೇಕು ಅಂತ ಇರುವುದಿಲ್ಲ. ಅದು ಅವರಿಗೆ ಬಿಟ್ಟಿದ್ದು ಎಂದಿದ್ದಾರೆ. ಇದನ್ನೂ ಓದಿ: ತಹಶೀಲ್ದಾರ್ ವರ್ಗಾವಣೆ ವಿಚಾರಕ್ಕೆ ಕಿತ್ತಾಟ- ಏಯ್ ಹೋಯ್ ಎಂದು ಅಶೋಕ್, ಅಶ್ವತ್ಥನಾರಾಯಣ್ ಮಾತಿನ ಚಕಮಕಿ..!

ನಾವಿಬ್ಬರು ಒಂದೇ ಪಕ್ಷದಲ್ಲಿರುವವರು, ಸಹೋದರರ ರೀತಿ ಇರಬೇಕು, ಪ್ರೀತಿ ಇರಬೇಕು, ಮನಸ್ತಾಪಗಳು ಬರುತ್ತದೆ. ಆದರೆ ಅದನ್ನು ಅಲ್ಲಿಯೇ ಬಿಟ್ಟು ಬಿಡಬೇಕು. ನಾವೆಲ್ಲರು ಬಂದಿರುವುದು ಜನರ ಪರವಾಗಿ, ಬದಲಾಗಿ ನಮ್ಮ ಪ್ರತಿಷ್ಠೆಗಳನ್ನು ಹೆಚ್ಚಿಸಿಕೊಳ್ಳುತ್ತಾ ಹೋದರೆ ಯಾವುದೇ ಒಳ್ಳೆಯ ಉದ್ದೇಶಗಳಿಗೆ ಪೂರಕವಾಗಿರುವುಲ್ಲ. ನಮ್ಮ ಪ್ರತಿಷ್ಠೆಗಳನ್ನು ಬಿಡಲೇಬೇಕಾಗುತ್ತದೆ. ನಾವು ಒಟ್ಟಿಗೆ ಕೆಲಸ ಮಾಡಬೇಕು ಮತ್ತು ಒಗ್ಗಟ್ಟಿನಿಂದ ಇರಬೇಕಾಗುತ್ತದೆ. ಒಂದು ಪಕ್ಷದಲ್ಲಿ ಇರುವವರು ಪರಸ್ಪರ ಪ್ರೀತಿ, ಗೌರವದಿಂದ ಇರಬೇಕು. ವ್ಯತ್ಯಾಸಗಳು ಬರುತ್ತವೆ, ಹೋಗುತ್ತವೆ. ಆದರೆ ಅದನ್ನೇ ಹೆಚ್ಚಾಗಿ ಒತ್ತು ಕೊಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯ ಫ್ಯಾಮಿಲಿ ಪಾಲಿಟಿಕ್ಸ್‌ಗೆ ಬೀಳುತ್ತಾ ಬ್ರೇಕ್..?

Share This Article
Leave a Comment

Leave a Reply

Your email address will not be published. Required fields are marked *