ಮುಂಬೈ: ದೇಶದಲ್ಲಿ ಭಾರಿ ಸುದ್ದಿ ಮಾಡುತ್ತಿರುವ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ನಟ ಅನುಪಮ್ ಖೇರ್ ಮತ್ತು ಜೋಕರ್ ಪಾತ್ರದಲ್ಲಿ ಜನಮನ್ನಣೆ ಗಳಿಸಿಕೊಂಡಿದ್ದ ಹೀತ್ ಲೆಡ್ಜರ್ಸ್ ಪಾತ್ರವನ್ನು ಎಂದಿಗೂ ವಿಶ್ವ ಮರೆಯುವುದಿಲ್ಲ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜೋಕರ್ ಪಾತ್ರದಲ್ಲಿ ಹೀತ್ ಲೆಡ್ಜರ್ಸ್ ಮನೋಜ್ಞವಾಗಿ ನಟಿಸಿ ಅಭಿಮಾನಿಗಳ ಮನಗೆದ್ದಿದ್ದಾರೆ. ಅದೇ ರೀತಿ ಇದೀಗ ಬಾಲಿವುಡ್‍ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದಲ್ಲಿ ಪುಷ್ಕರ್ ನಾಥ್ ಪಂಡಿತ್ ಪಾತ್ರವನ್ನು ಅನುಪಮ್ ಖೇರ್ ನಿರ್ವಹಿಸಿದ್ದು, ಅವರ ಅದ್ಭುತವಾದ ನಟನೆ ಕಂಡು ಚಿತ್ರ ಪ್ರೇಮಿಗಳು ಶಹಭಾಷ್ ಎಂದಿದ್ದಾರೆ. ಅಲ್ಲದೇ ಈ ಎರಡು ಪಾತ್ರಗಳು ಅಭಿಮಾನ ಕಾರಣದಿಂದಾಗಿ ಮತ್ತೆ ಮತ್ತೆ ಕಾಡಲಿದೆ ಎಂಬ ಅಭಿಪ್ರಾಯವನ್ನು ನೋಡುಗರು ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ: ಅಬ್ಬಬ್ಬಾ..! 60 ಕೋಟಿ ಬಾಚಿದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ : ಬಾಕ್ಸ್ ಆಫೀಸ್ ಚಿಂದಿ ಚಿತ್ರಾನ್ನ
ಸಾಮಾಜಿಕ ಜಾಲತಾಣದಲ್ಲಿ ಹೀತ್ ಲೆಡ್ಜರ್ಸ್ ಮತ್ತು ಅನುಪಮ್ ಖೇರ್ ನಿರ್ವಹಿಸಿದ ಪಾತ್ರಗಳ ಫೋಟೋಗಳು ಹರಿದಾಡುತ್ತಿದ್ದಂತೆಯೇ ಈ ಬಗ್ಗೆ ಅನುಪಮ್ ಕೇರ್ ಟ್ವೀಟ್ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಈ ಎರಡು ಪಾತ್ರಗಳನ್ನು ಹೋಲಿಕೆ ಮಾಡಿ ಉತ್ತಮ ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳು. ಇಂತಹ ಉತ್ತಮ ಪ್ರತಿಕ್ರಿಯೆಗೆ ಬಂದಿರುವುದು ಸಂತೋಷವಾಗಿದೆ’ ಎಂದು ಅವರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬಾಲಿವುಡ್ ಪಾಪ ತೊಳೆದ ದಿ ಕಾಶ್ಮೀರ್ ಫೈಲ್ಸ್: ಕಂಗನಾ ರಣಾವತ್
Anonymous compliments are the best because you know they aren’t trying to gain anything out of it!! Thank you my anonymous friend for making this. I am delighted to see it!! ????????????#TheKashmirFiles @vivekagnihotri pic.twitter.com/dp9quVRGQb
— Anupam Kher (@AnupamPKher) March 15, 2022
ʼದಿ ಕಾಶ್ಮೀರ್ ಫೈಲ್ಸ್ʼ ಸಿನಿಮಾದಲ್ಲಿ ಏನಿದೆ:
ನಿರ್ದೇಶಕ ವಿವೇಕ್ ಅಗ್ನಿಹೋತ್ರಿ 1990ರಲ್ಲಿ ನಡೆದ ಕಾಶ್ಮೀರಿ ಪಂಡಿತರ ನರಮೇಧದ ಕುರಿತು ಸಿನಿಮಾ ಮಾಡಿದ್ದಾರೆ. ಅದನ್ನು ‘ದಿ ಕಾಶ್ಮೀರ್ ಫೈಲ್ಸ್’ ಹೆಸರಿನಲ್ಲಿ ಬಿಡುಗಡೆ ಮಾಡಿದ್ದಾರೆ. ಸಿನಿಮಾದ ಶೀರ್ಷಿಕೆಯೇ ಪ್ರಚುರಪಡಿಸುವಂತೆ ನರಮೇಧದ ಹಿಂದಿರುವ ಇತಿಹಾಸವನ್ನು ಬಿಚ್ಚಿಡುವಂತಹ ಫೈಲ್ಸ್ ಇದಾಗಿದೆ. ಈ ಫೈಲ್ ನ ಪುಟಪುಟದಲ್ಲೂ ರಕ್ತಸಿಕ್ತ ಅಧ್ಯಾಯಗಳಿವೆ. ಬರೆದ ಶಾಹಿ ಕೂಡ ಕೆಂಪಾಗಿದೆ. ಇಂತಹ ಹತ್ಯಾಕಾಂಡವನ್ನು ಸಿನಿಮಿಯ ರೂಪದಲ್ಲಿ ತರದೇ, ನಡೆದ ಘಟನೆಯನ್ನು ಹಸಿಹಸಿಯಾಗಿಯೇ ತರುವ ಪ್ರಯತ್ನ ಈ ಸಿನಿಮಾದಲ್ಲಿ ಆಗಿದೆ.