ವಾಜಪೇಯಿಯಂತೇ ಮೋದಿ ಹೇಳಿಕೆ ನೀಡ್ತಾರೆ, ಆದರೆ..: ಶಶಿ ತರೂರ್

Public TV
1 Min Read

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕೆಲವೊಮ್ಮೆ ಅಟಲ್ ಬಿಹಾರಿ ವಾಜಪೇಯಿ ಅವರ ರೀತಿಯೇ ಮಾತನಾಡುವ ಮೂಲಕ ಕೆಲವು ಲಕ್ಷಣಗಳನ್ನು ಪ್ರದರ್ಶಿಸುತ್ತಾರೆ. ಆದರೆ ಅವರು ಮಾತನ್ನು ಕಾರ್ಯರೂಪಕ್ಕೆ ತರುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಟೀಕಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಹಾಗೂ ವಾಜಪೇಯಿ ಅವರಿಗೆ ಇರುವ ವ್ಯತ್ಯಾಸವೆಂದರೆ ಮೋದಿ ಅವರು ವಾಜಪೇಯಿ ಅವರು ಹೇಳಿದ ಮಾತನ್ನು ಕಾರ್ಯರೂಪಕ್ಕೆ ತರಲ್ಲ. ಅವರು ಸಾರ್ವಜನಿಕರಿಗೆ ನೀಡಿದ ಭರವಸೆಯನ್ನು ಈಡೇರಿಸುವ ಮೂಲಕ ದೇಶಕ್ಕೆ ಉತ್ತಮ ಸೇವೆಯನ್ನು ಸಲ್ಲಿಸಬಹುದು ಎಂದು ಸಲಹೆ ನೀಡಿದರು.

ಕೆಲವೊಮ್ಮೆ ಮೋದಿ ಅವರು ತಮ್ಮ ಭಾಷಣದಲ್ಲಿ ಸರಿಯಾದ ವಿಷಯಗಳನ್ನು ಹೇಳುವ ಮೂಲಕ ತಮ್ಮೊಳಗಿನ ವಾಜಪೇಯಿ ಅವರನ್ನು ಕಾರ್ಯಗತಗೊಳಿಸುತ್ತಾರೆ. ಆದರೆ ಅವುಗಳನ್ನು ನೆರವೇರಿಸುವುದಿಲ್ಲ ಎಂದ ಅವರು, ಕಾಶ್ಮೀರಕ್ಕೆ ಪ್ರಧಾನಿ ಮೋದಿಯವರ ಭೇಟಿಯನ್ನು ನೆನಪಿಸಿಕೊಂಡರು. ಅಲ್ಲಿ ಅವರು ಭಯೋತ್ಪಾದನೆಯನ್ನು ದೂರವಿಡಲು ಯುವಕರನ್ನು ಒತ್ತಾಯಿಸುವ ಹಾಗೂ ಪ್ರವಾಸೋದ್ಯಮವನ್ನು ಉತ್ತೇಜಿಸುವ ಬಗ್ಗೆ ಮಾತನಾಡಿದ್ದರು.

ಪ್ರತಿಪಕ್ಷಗಳ ಸಲಹೆಯನ್ನು ಸಂಸತ್ತಿನಲ್ಲಿ ತೆಗೆದುಕೊಳ್ಳದ ಕಾರಣ ಸಂಸತ್ತನ್ನು ಸರ್ಕಾರದ ಸೂಚನಾ ಫಲಕಕ್ಕೆ ಇಳಿಸಲಾಗಿದೆ ಎಂದು ಸಂಸತ್ತಿನ ವ್ಯವಸ್ಥೆಯನ್ನು ಟೀಕಿಸಿದರು. ಪ್ರಧಾನಿ ಮೋದಿ ಅವರು ಏನೇ ಮಾಡಿದರೂ ಅವರಿಗೆ ಬಹುಮತವಿದೆ. ಯಾವುದೇ ಸದಸ್ಯರು ಅವರಿಗೆ ಸವಾಲು ಹಾಕಲು ಧೈರ್ಯ ಮಾಡಿದರೆ, ಆ ಸದಸ್ಯನನ್ನೇ ಹೊರಹಾಕಬಹುದು ಎಂದು ಕಿಡಿಕಾರಿದರು. ಇದನ್ನೂ ಓದಿ: ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಏಕಕಾಲದಲ್ಲಿ ಎಸಿಬಿ ದಾಳಿ

ಭಾನುವಾರ ಜೈಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಶಿ ತರೂರ್, ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಂಡ ಚೈತನ್ಯ ಹಾಗೂ ಕ್ರಿಯಾಶೀಲತೆಯ ವ್ಯಕ್ತಿಯಾಗಿದ್ದಾರೆ. ವಿಶೇಷವಾಗಿ ರಾಜಕೀಯವಾಗಿ ಪ್ರಭಾವಶಾಲಿ ಕೆಲವು ಕೆಲಸಗಳನ್ನು ಮಾಡಿದ್ದಾರೆ ಎಂದು ಶ್ಲಾಘಿಸಿದ್ದರು. ಇದನ್ನೂ ಓದಿ: ಹಿರಿಯ ವಕೀಲರು ಕಾಂಗ್ರೆಸ್ ಸಂಸ್ಕೃತಿಯ ವ್ಯಕ್ತಿಯಲ್ಲ: ಕಪಿಲ್ ಸಿಬಲ್ ವಿರುದ್ಧ ಗೆಹ್ಲೋಟ್ ಕಿಡಿ

Share This Article
Leave a Comment

Leave a Reply

Your email address will not be published. Required fields are marked *