ತಡರಾತ್ರಿ ಕಾರು ಅಪಘಾತ- ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ

Public TV
1 Min Read

ಬೆಂಗಳೂರು: ತಡರಾತ್ರಿ ಸಿಲಿಕಾನ್ ಸಿಟಿಯಲ್ಲಿ ಕೂದಲೆಳೆ ಅಂತರದಲ್ಲೇ ಭಾರೀ ಅನಾಹುತವೊಂದು ತಪ್ಪಿದೆ.

ದೇವೇಗೌಡ ಪೆಟ್ರೋಲ್ ಸಮೀಪ ಕಾರು ಡಿವೈಡರ್‍ಗೆ ಡಿಕ್ಕಿ ಆಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆ ಬಳಿಕ ಸ್ಥಳದಲ್ಲೇ ಕಾರನ್ನು ಬಿಟ್ಟು ಚಾಲಕ ಎಸ್ಕೇಪ್ ಆಗಿದ್ದಾನೆ. ಈ ಕಾರು ಹೈಕೋರ್ಟ್ ವಕೀಲರೊಬ್ಬರಿಗೆ ಸೇರಿದ್ದು ಎಂದು ತಿಳಿದುಬಂದಿದೆ.  ಇದನ್ನೂ ಓದಿ: ತೈವಾನ್ ಸೀಬೆ ಬೆಳೆದು ಲಕ್ಷಾದೀಶನಾದ ಕೋಲಾರದ ರೈತ

ಸ್ಥಳಕ್ಕೆ ಬನಶಂಕರಿ ಸಂಚಾರಿ ಪೊಲೀಸರು ಹಾಗೂ ಹೊಯ್ಸಳದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಅಪಘಾತಕ್ಕೆ ಅತಿವೇಗದ ಚಾಲನೆಯೇ ಕಾರಣ ಎಂದು ತಿಳಿದುಬಂದಿದೆ. ಅಪಘಾತದ ಬಳಿಕ ಸ್ಥಳದಿಂದ ಕಾರನ್ನು ತರುವಂತೆ ಚಾಲಕ ತನ್ನ ಸ್ನೇಹಿತರನ್ನು ಕಳಿಸಿದ್ದನಂತೆ.

Share This Article
Leave a Comment

Leave a Reply

Your email address will not be published. Required fields are marked *