ಆಲೂಗಡ್ಡೆ, ಟೊಮೆಟೊ ಬೆಲೆ ಪರಿಶೀಲಿಸಲು ನಾನು ರಾಜಕೀಯ ಸೇರಿಲ್ಲ – ಪಾಕ್ ಪ್ರಧಾನಿ

Public TV
1 Min Read

ಇಸ್ಲಾಮಾಬಾದ್: ಆಲೂಗಡ್ಡೆ, ಟೊಮೆಟೊ ಬೆಲೆಗಳನ್ನು ಪರಿಶೀಲಿಸಲು ನಾನು ರಾಜಕೀಯಕ್ಕೆ ಸೇರಲಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕಿಡಿಕಾರಿದ್ದಾರೆ.

ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿದ್ದವು. ಈ ಕುರಿತಂತೆ ಪಂಜಾಬ್ ಪ್ರಾಂತ್ಯದ ಹಫೀಜಾಬಾದ್ ನಗರದಲ್ಲಿ ರಾಜಕೀಯ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, ಕೆಲವು ಶಾಸಕರು ಹಣದಿಂದ ಆತ್ಮಸಾಕ್ಷಿಯನ್ನು ಖರೀದಿಸಿ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ಅಂಶಗಳ ವಿರುದ್ಧ ರಾಷ್ಟ್ರ ನಿಲ್ಲುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾಗೆ ಕೊರೊನಾ

ತಮ್ಮ ಅವಧಿಯಲ್ಲಿ ಪಾಕಿಸ್ತಾನವು ಶ್ರೇಷ್ಠ ದೇಶವಾಗಿದೆ. ತಮ್ಮ ಸರ್ಕಾರ ಘೋಷಿಸುತ್ತಿದ್ದಂತೆಯೇ ಶೀಘ್ರದಲ್ಲೇ ಅದರ ಫಲಿತಾಂಶಗಳು ದೊರೆಯಲಿದೆ. 25 ವರ್ಷಗಳ ಹಿಂದೆ ದೇಶದ ಯುವಕರ ಹಿತದೃಷ್ಟಿಯಿಂದ ನಾನು ರಾಜಕೀಯಕ್ಕೆ ಸೇರಲು ನಿರ್ಧರಿಸಿದೆ. ಜೀವನದಲ್ಲಿ ಒಬ್ಬ ವ್ಯಕ್ತಿ ಕಾಣುವ ಎಲ್ಲ ಕನಸನ್ನು ನಾನು ಹೊಂದಿದ್ದೇನೆ. ಆದರೆ ಅದರಿಂದ ನನಗೆ ಯಾವುದೇ ವೈಯಕ್ತಿಕ ಲಾಭವಿಲ್ಲ ಎಂದು ತಿಳಿಸಿದ್ದಾರೆ.

tomato

ಆಲೂಗಡ್ಡೆ ಮತ್ತು ಟೊಮೆಟೊ ಬೆಲೆಗಳನ್ನು ತಿಳಿಯಲು ನಾನು ರಾಜಕೀಯಕ್ಕೆ ಸೇರಲಿಲ್ಲ. ದೇಶದ ಯುವಜನತೆಗಾಗಿ ನಾನು ರಾಜಕೀಯಕ್ಕೆ ಸೇರಿಕೊಂಡೆ. ನಾವು ದೇಶದ ಮಹಾನ್ ವ್ಯಕ್ತಿಯಾಗಬೇಕಾದರೆ, ಸತ್ಯವನ್ನು ಬೆಂಬಲಿಸಬೇಕು. ನಾನು ಕಳೆದ 25 ವರ್ಷಗಳಿಂದ ಇದನ್ನೇ ಹೇಳುತ್ತಿದ್ದೇನೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕ್ಷಿಪಣಿ ಬಗ್ಗೆ ಭಾರತಕ್ಕೆ ಪ್ರತ್ಯುತ್ತರ ನೀಡೋ ಬದಲು ಪಾಕಿಸ್ತಾನ ಸಂಯಮ ಬಯಸುತ್ತೆ: ಇಮ್ರಾನ್ ಖಾನ್

Share This Article
Leave a Comment

Leave a Reply

Your email address will not be published. Required fields are marked *