ಐದು ವರ್ಷಗಳಲ್ಲಿ ಅಲ್ಯೂಮಿನಿಯಂ ಏಣಿಗೆ ವಿದ್ಯುತ್ ಸ್ಪರ್ಶದಿಂದ 42 ಕಾರ್ಮಿಕರ ಬಲಿ!

Public TV
3 Min Read

ಮಡಿಕೇರಿ: ಕಾಫಿನಾಡು, ಸಾಂಬಾರ ಪದಾರ್ಥಗಳ ನೆಲೆಬೀಡು ಕೊಡಗು. ಇಲ್ಲಿ ಸಿಗುವ ಸಾಂಬಾರಿನ ಪದಾರ್ಥಗಳ ಪೈಕಿ ಪೆಪ್ಪರ್ ದೇಶ-ವಿದೇಶಗಳಲ್ಲೂ ಫೇಮಸ್. ಆದ್ರೆ ದುರಂತ ಅಂದ್ರೆ ಅದೇ ಪೆಪ್ಪರ್ ಕಲ್ಟಿವೇಶನ್ ಹಾಗೂ ಪ್ರೊಡಕ್ಷನ್ ಪ್ರೊಸೀಜರ್ ಕಾರ್ಮಿಕರ ಜೀವಗಳನ್ನೇ ಬಲಿ ಪಡೀತಿದೆ. ಪೆಪ್ಪರ್ ಕೊಯ್ಲು ಮಾಡೋ ಕಾರ್ಮಿಕ ತನ್ನ ಪ್ರಾಣವನ್ನೇ ಒತ್ತೆ ಇಟ್ಟು ಕೆಲಸ ಮಾಡೋ ಪರಿಸ್ಥಿತಿ ಇದೀಗ ಕೊಡಗಿನಲ್ಲಿ ನಿರ್ಮಾಣವಾಗಿದೆ. ಆಶ್ವರ್ಯ ಆದ್ರೂ ಇದು ಸತ್ಯ. ಪೆಪ್ಪರ್ ಕೊಯ್ಲಿಗೆ ಬಳಸೋ ಅಲ್ಯೂಮಿನಿಯಂ ಲ್ಯಾಡರ್, ಅಂದ್ರೆ ಏಣಿಗಳು ಕಾರ್ಮಿಕರ ಜೀವಗಳನ್ನು ಬಲಿ ಪಡೀತಿವೆ.

ಹೇಳಿ ಕೇಳಿ ಕೊಡಗು ಜಿಲ್ಲೆ ಕಾಳುಮೆಣಸು ಪ್ರೊಡಕ್ಷನ್‍ನಲ್ಲಿ ದೇಶ ವಿದೇಶಗಳಲ್ಲೂ ಫೇಮಸ್. ಕೊಡಗಿನಲ್ಲಿ ಸಿಗೋ ಗುಣಮಟ್ಟದ ಪೆಪ್ಪರ್ ಬೇರೆಲ್ಲೂ ಸಿಗಲ್ಲ. ಆದ್ರೆ ಅಂತಹ ಪೆಪ್ಪರ್ ನಿಮ್ಮ ಅಡಿಗೆ ಮನೆ ಸೇರೋದ್ರೊಳಗೆ ಅದೆಷ್ಟೋ ಅಮಾಯಕ ಜೀವಗಳನ್ನ ಬಲೀ ಪಡೀತಿದೆ. ಆಶ್ಚರ್ಯ ಆದ್ರೂ ಇದು ಸತ್ಯ. ಕೊಡಗಿನ ಪೆಪ್ಪರ್ ಪ್ಲಾಂಟೇಶನ್‍ನಲ್ಲಿ ಹೊಟ್ಟೆ ಪಾಡಿಗೆ ದುಡಿಯೋ ಕಾರ್ಮಿಕರು ಪೆಪ್ಪರ್ ಕೊಯ್ಲಿಗೆ ಬಳಸೋ ಅಲ್ಯೂಮಿನಿಯಂ ಏಣಿಗಳಿಂದ ತಮ್ಮ ಪ್ರಾಣವನ್ನೇ ಒತ್ತೆ ಇಡ್ತಿದ್ದಾರೆ. ಇದನ್ನೂ ಓದಿ: ಸೋನಂ ಕಪೂರ್ ಮಾವನಿಗೆ 27 ಕೋಟಿ ರೂ. ವಂಚಿಸಿದ ಸೈಬರ್ ಕ್ರಿಮಿನಲ್ಸ್! 

ಪೆಪ್ಪರ್ ಪ್ಲಾಂಟೇಷನ್ ಒಳಗೆ ಹಾದು ಹೋಗಿರೋ ಕರೆಂಟ್ ವೈರ್‍ಗಳು ಕಾರ್ಮಿಕರು ಬಳಸೋ ಅಲ್ಯೂಮೀನಿಯಂ ಲ್ಯಾಡರ್‍ಗೆ ತಾಗಿ ಅವರ ಪ್ರಾಣವನ್ನು ತೆಗೆಯುತ್ತಿವೆ. ಅದನ್ನು ಖುದ್ದು ತೋಟದ ಮಾಲೀಕರೂ ಸಹ ಒಪೆÇ್ಕತೀದ್ದಾರೆ. ಆದರೆ ಇದಕ್ಕೆ ಆಲ್ಟರ್ ನೇಟಿವ್ ಆಗಿರೋ ನಾನ್ ಕಂಡಕ್ಟರ್ ಏಣಿಗಳನ್ನು ಹೆಚ್ಚು ಹಣ ಆಗುತ್ತೆ ಎನ್ನುವ ಕಾರಣ ಕೊಟ್ಟು ಒಳಸ್ತಿಲ್ಲ.

ಕಳೆದ ಐದು ವರ್ಷದಲ್ಲಿ ಒರೋಬ್ಬರಿ 42ಕ್ಕೂ ಅಧಿಕ ಕಾರ್ಮಿಕರು ಅಲ್ಯೂಮಿನಿಯಂ ಲ್ಯಾಡರ್ ಬಳಸಿ ಪೆಪ್ಪರ್ ಕೊಯ್ಲು ಮಾಡುವಾಗ ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನು ಸೀರಿಯಸ್ ಆಗಿ ತಗೊಂಡಿರೋ ಕೊಡಗು ಜಿಲ್ಲಾಧಿಕಾರಿ ಸತೀಶ್, ಅಲ್ಯೂಮೀನಿಯಂ ಲ್ಯಾಡರ್ ಬದಲಿಗೆ ಫೈಬರ್ ಲ್ಯಾಡರ್ ಬಳಸಿ ಎಂದು ಜಿಲ್ಲೆಯ ತೋಟದ ಮಾಲೀಕರಲ್ಲಿ ಮನವಿ ಮಾಡಿದ್ದಾರೆ.

ಕಳೆದ ಎರಡು ವರ್ಷದಲ್ಲಿ ಮೃತಪಟ್ಟವರ ಸಂಖ್ಯೆ ನೋಡುವುದಾರೆ 2021 ರಲ್ಲಿ 2 ಕಾರ್ಮಿಕರು ಮೃತಪಟ್ಟಿದ್ರೆ. 2021-22ನೇ ಸಾಲಿನಲ್ಲಿ 5 ಜನರು ಮೃತ ಪಟ್ಟಿದ್ದಾರೆ. ಇಂದರಿಂದ ಎಚ್ಚೆತ್ತುಕೊಂಡಿರುವ ಪಶ್ಚಿಮಘಟ್ಟದ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ರವಿ ಕುಶಾಲಪ್ಪ ಕೊಡಗು ಜಿಲ್ಲೆ ಮಾತ್ರವಲ್ಲ ಕಾಫಿಬೆಳೆಗಳನ್ನು ಹೆಚ್ಚಾಗಿ ಬೆಳೆಸುವ ಜಿಲ್ಲೆಗಳಲ್ಲಿ ಅಲ್ಯೂಮಿನಿಯಂ ಲ್ಯಾಡರ್ ಬದಲಿಗೆ ಫೈಬರ್ ಲ್ಯಾಡರ್ ಬಳಸಿದ್ದಾರೆ. ಅದರಲ್ಲಿ ಯಾವ ಕಾರ್ಮಿಕ ಕೂಡ ತನ್ನ ಪ್ರಾಣ ಒತ್ತೆ ಇಟ್ಟು ಕೆಲಸ ಮಾಡ್ಬೇಕಾಗಿಲ್ಲ. ಈ ನಿಟ್ಟಿನಲ್ಲಿ ಜಾಗೃತಿಗೆ ಸರ್ಕಾರ ಮುಂದಾಗಬೇಕಿದೆ ರೈತರು ದಯವಿಟ್ಟು ಫೈಬರ್ ಹಾಗೂ ಬಿದಿರಿನ ಏಣಿಗಳನ್ನು ಬಳಸಿ ಕಾರ್ಮಿಕರ ಪ್ರಾಣ ಉಳಿಬೇಕಿದೆ ಈ ಬಗ್ಗೆ ಸರ್ಕಾರದ ಹಂತದಲ್ಲಿಯೂ ಮಾತನಾಡುತ್ತೇವೆ ಎಂದು ತಿಳಿಸಿದ್ದಾರೆ.

ಪೆಪ್ಪರ್ ಕೊಯ್ಲು ಸಂದರ್ಭ ಕರೆಂಟ್ ವೈರ್‌ಗೆ ಅಲ್ಯೂಮಿನಿಯಂ ಏಣಿ ತಾಗಿ ಕಾರ್ಮಿಕರು ದುರ್ಮರಣಕ್ಕೀಡಾದ್ರೆ ಅದಕ್ಕೆ ಪರಿಹಾರ ಕೊಡೋಕಾಗಲ್ಲ. ವಿದ್ಯುತ್ ಇಲಾಖೆ ಆಗ್ಲೀ, ಸರ್ಕಾರವಾಗ್ಲಿ ಅದಕ್ಕೆ ಪರಿಹಾರ ಕೊಡೋಕೆ ಬರಲ್ಲ. ತೋಟದ ಮಾಲೀಕರು ಕಾರ್ಮಿಕ ಕುಟುಂಬಗಳಿಗೆ ಪರಿಹಾರ ಕೊಟ್ರೆ ಆಯ್ತು ಇಲ್ಲಾಂದ್ರೆ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೊಡಗು ಜಿಲ್ಲಾಡಳಿತ ಕೂಡ ಅಲ್ಯೂಮೀನಿಯಂ ಏಣಿಗಳನ್ನ ಬ್ಯಾನ್ ಮಾಡೋ ಹಕ್ಕು ಸಹ ಇಲ್ಲದಂತೆ ಆಗಿದೆ. ಇಲ್ಲಿ ಕಾರ್ಮಿಕರ ಪ್ರಣವನ್ನುಳಿಸೋಕೆ ಆಗ್ದೇ ಹೆಣಗಾಡ್ತಿದೆ. ಇದನ್ನೂ ಓದಿ:  ತಪ್ಪಿಸಿಕೊಂಡು ಹೋದ ಪೆಂಗ್ವಿನ್ – ಕೊನೆಗೂ ಅಧಿಕಾರಿಗಳ ಕೈಗೆ

ಪೆಪ್ಪರ್ ಪ್ಲಾಂಟೇಷನ್ ಮಾಲೀಕರು ಕಾರ್ಮಿಕರ ಹಿತದೃಷ್ಟಿಯಿಂದ ಅಲ್ಯೂಮಿನಿಯಂ ಏಣಿ ಬದಲಿಗೆ ಫೈಬರ್ ಹಾಗೂ ಬ್ಯಾಂಬೂ ಏಣಿಗಳನ್ನ ಬಳಸಿದ್ರೆ ಕಾರ್ಮಿಕರ ಪ್ರಾಣ ಉಳಿಸಬಹುದು ಎಂಬುದು ಕೊಡಗು ಜಿಲ್ಲಾಡಳಿತ ಸಲಹೆ ಕೊಟ್ಟಿದೆ.

Share This Article
Leave a Comment

Leave a Reply

Your email address will not be published. Required fields are marked *