ಅಂದಕಷ್ಟೇ ಅಲ್ಲ ಉತ್ತಮ ಆರೋಗ್ಯಕ್ಕೂ ಧರಿಸಿ ಕಾಲ್ಗೆಜ್ಜೆ

Public TV
2 Min Read

ಇಂದು ಮಹಿಳೆಯರು ತಮ್ಮ ಅಂದವನ್ನು ಹೆಚ್ಚಿಸಿಕೊಳ್ಳಲು ವಿಭಿನ್ನ ರೀತಿಯ ಕಾಲ್ಗೆಜ್ಜೆಯನ್ನು ಧರಿಸುತ್ತಾರೆ. ಆದರೆ ಬೆಳ್ಳಿಯ ಕಾಲ್ಗೆಜ್ಜೆಯನ್ನು ಧರಿಸುವುದರಿಂದ ಅಂದ ಹೆಚ್ಚಾಗುವುದರ ಜೊತೆಗೆ ಆರೋಗ್ಯದ ಮೇಲೂ ಪರಿಣಾಮ ಬೀಳುತ್ತದೆ. ಬೆಳ್ಳಿಯು ನಿಮ್ಮ ದೇಹವನ್ನು ರೋಗಗಳಿಂದ ದೂರ ಇರುವಂತೆ ನೋಡಿಕೊಳ್ಳುತ್ತದೆ. ಜೊತೆಗೆ ಕಾಲ್ಗೆಜ್ಜೆಯನ್ನು ಧರಿಸುವುದರಿಂದ ಅನೇಕ ವೈಜ್ಞಾನಿಕ ಉಪಯೋಗವಿದೆ.

ಬ್ಯಾಕ್ಟೀರಿಯಾ ನಾಶ: ಬೆಳ್ಳಿಯಲ್ಲಿ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವ ಗುಣವಿದೆ. ಸಾವಿರ ವರ್ಷಗಳ ಹಿಂದೆ ನಾವಿಕರು ದೂರದ ಪ್ರಯಾಣ ಬೆಳೆಸುವಾಗ ಬೆಳ್ಳಿಯ ನಾಣ್ಯಗಳನ್ನು ನೀರಿನ ಬಾಟಲಿಯಲ್ಲಿ ಹಾಕಿರುತ್ತಿದ್ದರಂತೆ. ಇದರಿಂದಾಗಿ, ಬ್ಯಾಕ್ಟೀರಿಯಾಗಳು ನಾಶ ಹೊಂದುತ್ತವೆ ಎಂಬ ಉದ್ದೇಶ ಹೊಂದಿದ್ದರು. ಇದೇ ಕಾರಣದಿಂದಾಗಿ ಮಹಿಳೆಯರಿಗೆ ಬೆಳ್ಳಿಯ ಕಾಲ್ಗೆಜ್ಜೆಗಳನ್ನು ಧರಿಸುವುದು ಉತ್ತಮವಾಗಿದೆ. ಇದನ್ನೂ ಓದಿ: ಮಜ್ಜಿಗೆಯಲ್ಲಿದೆ ಮದ್ದಿನ ಗುಣ- ಪ್ರತಿನಿತ್ಯ ಒಂದು ಲೋಟ ಮಜ್ಜಿಗೆ ಕುಡಿದು ನೋಡಿ

ಕಾಲು ನೋವು ಶಮನ: ಮಹಿಳೆಯರು ಹೆಚ್ಚಿನ ಸಮಯ ಅಡುಗೆ ಮನೆ, ಮನೆ ಸ್ವಚ್ಛಗೊಳಿಸುವುದು ಸೇರಿದಂತೆ ಅನೇಕ ಕೆಲಸಗಳನ್ನು ಮಾಡುವುದರಲ್ಲೇ ಕಳೆಯುತ್ತಾರೆ. ಬೆಳಗ್ಗಿನಿಂದ ಸಂಜೆಯ ತನಕ ನಿಂತುಕೊಂಡು ಹೆಚ್ಚಿನ ಕೆಲಸ ಮಾಡುವುದರಿಂದ ಪಾದಗಳಲ್ಲಿ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಪಾದಗಳಲ್ಲಿ ಪ್ರಾರಂಭವಾಗುವ ಈ ನೋವುಗಳು ಕ್ರಮೇಣ ಬೆನ್ನು ಹಾಗೂ ಸೊಂಟಗಳಿಗೂ ಹಬ್ಬಿಕೊಳ್ಳುವ ಸಂಭವ ಇರುತ್ತದೆ. ಆದರೆ, ಬೆಳ್ಳಿಯ ಕಾಲ್ಗೆಜ್ಜೆಯನ್ನು ಧರಿಸುವುದರಿಂದ ಪಾದಗಳಲ್ಲಿ ಉಂಟಾಗುವ ನೋವನ್ನು ಅಲ್ಲಿಯೇ ತಡೆಗಟ್ಟಬಹುದು. ಜೊತೆಗೆ ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ. ಇದನ್ನೂ ಓದಿ: ಬಾಯಿ ದುರ್ವಾಸನೆ ಬರುತ್ತಿದ್ಯಾ? ಹಾಗಿದ್ರೆ ಈ ಮನೆ ಮದ್ದು ಬಳಕೆ ಮಾಡಿ

ರೋಗ ನಿರೋಧಕ ಶಕ್ತಿ ಹೆಚ್ಚಳ: ಬೆಳ್ಳಿಯ ಆಭರಣಗಳನ್ನು ಧರಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದಾಗಿ ಪದೇ ಪದೇ ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಗಳು ಕಡಿಮೆ ಇರುತ್ತದೆ. ಮಹಿಳೆಯರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಕೂಡ ಬೆಳ್ಳಿಯ ಕಾಲ್ಗೆಜ್ಜೆಗಳನ್ನು ಧರಿಸಬೇಕು. ಇದನ್ನೂ ಓದಿ: ದೇಹದ ತೂಕ ಮುಜುಗರ ಉಂಟುಮಾಡುತ್ತಿದೆಯಾ? ರಾಮಬಾಣದಂತಿವೆ ಈ ಮನೆಮದ್ದುಗಳು

ಮುಟ್ಟಿನ ಸಮಸ್ಯೆ ನಿವಾರಣೆ: ದೇಹದ ಹಾರ್ಮೋನ್‍ಗಳನ್ನು ಸಮತೋಲನದಲ್ಲಿ ಇಡಲು ಸಹಾಯ ಮಾಡುತ್ತದೆ. ಇದರಿಂದಾಗಿ ಮಹಿಳೆಯರು ಮುಟ್ಟಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಜೊತೆಗೆ ಆರೋಗ್ಯಕರ ಗರ್ಭಾಶಯವನ್ನು ಕಾಪಾಡಿಕೊಳ್ಳುತ್ತದೆ. ಇದನ್ನೂ ಓದಿ: ಹೊಟ್ಟೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆಮದ್ದು

Share This Article
Leave a Comment

Leave a Reply

Your email address will not be published. Required fields are marked *