ಪಾಕ್ ಯುವತಿ ವರಿಸಿದ್ದ ಕೇರಳದ ಉಗ್ರ- ಮದುವೆ ದಿನವೇ ಬಾಂಬ್ ದಾಳಿಯಲ್ಲಿ ಹತ

Public TV
1 Min Read

ಕಾಬೂಲ್: ಪಾಕಿಸ್ತಾನದ ಯುವತಿಯನ್ನು ಮದುವೆಯಾಗಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬ, ಮದುವೆಯಾದ ದಿನವೇ ಬಾಂಬ್ ದಾಳಿಯಲ್ಲಿ ಹತ್ಯೆಯಾಗಿದ್ದಾನೆ.

ನಜೀಬ್ ಅಲ್ ಹಿಂದಿ(23) ಮೃತನಾಗಿದ್ದಾನೆ. ಈತ ಕೇರಳ ಮೂಲದವನಾಗಿದ್ದಾನೆ. ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಎಂದು ತಿಳಿದು ಬಂದಿದೆ. ಪಾಕಿಸ್ತಾನ ಮಹಿಳೆಯನ್ನು ಮದುವೆಯಾದ ಕೆಲವೇ ಗಂಟೆಯಲ್ಲಿ ನಜೀಬ್ ಸಾವನ್ನಪ್ಪಿದ್ದಾನೆ. ಈತ ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್‍ನ ಅಫ್ಘಾನಿಸ್ತಾನ ಮೂಲದ ಶಾಖೆ ಇಸ್ಲಾಮಿಕ್ ಸ್ಟೇಟ್-ಖೊರಾಸನ್ ಪ್ರಾವಿನೆನ್ಸ್‍ಗೆ ಸೇರಿದವನಾಗಿದ್ದಾನೆ.

ಇಸ್ಲಾಮಿಕ್ ಸ್ಟೇಟ್ ಲೇಖನ ಪ್ರಕಾರ, ನಜೀಬ್ ಸ್ವಯಂಪ್ರೇರಿತನಾಗಿ ಭಾರತದಿಂದ ಅಫ್ಘಾನಿಸ್ತಾನದ ಖೊರಾಸನ್ ಪ್ರದೇಶಕ್ಕೆ ಬಂದಿದ್ದನು. ಉಗ್ರರನ್ನು ಭೇಟಿ ಮಾಡಿ, ಅಲ್ಲೇ ಉಳಿದಿದ್ದ. ಅಗತ್ಯವಿದ್ದಾಗ ಮಾತ್ರ ಮಾತನಾಡುತ್ತಿದ್ದ. ಹುತಾತ್ಮನಾಗುವುದರ ಬಗ್ಗೆಯೇ ಯೋಚಿಸುತ್ತಿದ್ದನು ಎಂದು ಹೇಳಲಾಗಿದೆ. ಇದನ್ನೂ ಓದಿ: ಮಂಕಡ್‌ಗೆ ಸಮ್ಮತಿ – ಬಾಲ್‌ ಎಸೆಯುವ ಮುನ್ನ ನಾನ್‍ಸ್ಟ್ರೈಕ್‍ ಬಿಟ್ಟರೆ ಉಳಿಗಾಲವಿಲ್ಲ

ನಜೀಬ್‍ಗೆ ಮದುವೆಯಾಗುವಂತೆ ಆತನ ಸ್ನೇಹಿತರು ಒತ್ತಾಯಿಸಿದ್ದರು. ಹೀಗಾಗಿ ಪಾಕಿಸ್ತಾನಿ ಕುಟುಂಬದ ಯುವತಿಯೊಂದಿಗೆ ಮದುವೆಯಾಗಿದ್ದನು. ಅವರೂ ಕೂಡ ಐಸ್‍ಕೆಪಿಯೊಂದಿಗೆ ಸಂಬಂಧ ಹೊಂದಿದ್ದರು. ನಜೀಬ್ ಹಾಗೂ ಆ ಯುವತಿಯ ಮದುವೆಯ ದಿನವೇ ಶತ್ರುಗಳು ಅವರ ಪ್ರದೇಶದ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಆತ್ಮಹತ್ಯಾ ದಾಳಿಯ ಬಗ್ಗೆ ನಜೀಬ್ ಮಾತನಾಡಿದ್ದ. ಯುವತಿಯ ತಂದೆಯ ಒತ್ತಾಯದ ಮೇರೆಗೆ ಮದುವೆಯಾದ ನಜೀಬ್ ನಂತರ ಶತ್ರುಗಳೊಂದಿಗೆ ಹೋರಾಡಲು ತೆರಳಿ, ಅಲ್ಲಿ ಮೃತಪಟ್ಟ ಎಂದು ತಿಳಿಸಲಾಗಿದೆ.

ಆದರೆ ಈ ವಿವರಗಳಲ್ಲಿ ಶತ್ರು ಯಾರು? ಬಾಂಬ್ ದಾಳಿಯ ಕಾರಣವೇನು? ಸಮಯ ಮೊದಲಾದ ವಿವರಗಳನ್ನು ನೀಡಲಾಗಿಲ್ಲ. ದೇವರಲ್ಲಿ ನಂಬಿಕೆ ಇಲ್ಲದವರು ದಾಳಿ ಮಾಡಿದರು ಎಂದಷ್ಟೇ ಬರೆಯಲಾಗಿದೆ. ಇಸ್ಲಾಮಿಕ್ ಸ್ಟೇಟ್ ಸಂಘಟನೆಯು ಕಳೆದ ವರ್ಷ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಅದರೊಂದಿಗೆ ಹಲವು ಬಾರಿ ಹೋರಾಡಿದೆ. ಆತ್ಮಹತ್ಯಾ ದಾಳಿಗಳನ್ನೂ ಸಂಘಟನೆ ನಡೆಸಿದ್ದು, ಭಯೋತ್ಪಾದಕ ಸಂಘಟನೆಯಾಗಿ ಗುರುತಿಸಿಕೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಕೇರಳದಿಂದ ಹಲವರು ಐಸ್‍ಕೆಪಿ ಸಂಘಟನೆಗೆ ಸೇರಿದ್ದಾರೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *