ಬೀದರ್: ರಾಶಿ ಯಂತ್ರದಲ್ಲಿ ಸಿಲುಕಿ ರುಂಡ, ಮುಂಡ ಬೇರ್ಪಟ್ಟು ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೀದರ್ ತಾಲೂಕಿನ ಕುರನಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಸುವರ್ಣ ಬಾಲಾಜಿ ಚಿಕಲೆ(27) ಎಂದು ಗುರುತಿಸಲಾಗಿದೆ. ಮಹಿಳೆಯ ಸಾವಿಗೆ ಟ್ರಾಕ್ಟರ್ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ – ಬಿಜೆಪಿ ಅಭ್ಯರ್ಥಿಗೆ ಸುಲಭವಾಗಿ ಸಿಗಲಿದೆ ಜಯ
ರಾಶಿ ಬಳಿಕ ಟ್ರ್ಯಾಕ್ಟರ್ ಚಾಲಕನ ನಿರ್ಲಕ್ಷ್ಯದಿಂದಾಗಿ ಒಮ್ಮೆಲೇ ಗಾಡಿ ಮುಂದಕ್ಕೆ ಚಲಿಸಿದ್ದು ಈ ವೇಳೆ ಸುವರ್ಣಗೆ ವಾಹನ ತಗುಲಿ ರಾಶಿ ಯಂತ್ರದ ಪಾಯಿಂಟ್ನಲ್ಲಿ ಸಿಲುಕಿದ್ದಾರೆ. ಇದನ್ನೂ ಓದಿ: Bulldozer is Back – ಟ್ರೆಂಡ್ ಆಯ್ತು ಬುಲ್ಡೋಜರ್, ಬುಲ್ಡೋಜರ್ ಏರಿ ಬಿಜೆಪಿಯಿಂದ ಸಂಭ್ರಮಾಚರಣೆ
ಕೂಲಿ ಕೆಲಸಕ್ಕೆ ಬಂದಿದ್ದ ಸುವರ್ಣ ಬಾಲಾಜಿ ಚಿಕಲೆ ಅವರ ಕೂದಲು ಟ್ರ್ಯಾಕ್ಟರ್ ಜಾಯಿಂಟ್ಗೆ ಸಿಲುಕಿ ಕುತ್ತಿಗೆಗೆ ಭಾಗಕ್ಕೆ ಗಾಯವಾಗಿ ದೇಹದಿಂದ ರುಂಡ ಬೇರ್ಪಟ್ಟು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇದೀಗ ಪತಿ ಬಾಲಾಜಿ ನೀಡಿದ ದೂರಿನ ಮೇಲೆ ಜನವಾಡ ಪೊಲೀಸ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

 
			
 
		 
		 
                                
                              
		