ಗ್ರಾಮದೇವತೆ ಹಬ್ಬದಲ್ಲಿ ಅಶ್ಲೀಲ ನೃತ್ಯ – ಕೈ ಬೆಂಬಲಿಗರ ವಿರುದ್ಧ ಆಕ್ರೋಶ

Public TV
2 Min Read

– ವೇದಿಕೆ ಮೇಲೆ ಬಾಲಕನನ್ನು ಕರೆ ತಂದ ಡ್ಯಾನ್ಸರ್‌ಗಳು

– ಗ್ರಾಮದಲ್ಲಿ ಕಾಂಗ್ರೆಸ್, ಜೆಡಿಎಸ್‍ನಿಂದ ರಸಮಂಜರಿ ಕಾರ್ಯಕ್ರಮ

ಮಂಡ್ಯ: ಚುನಾವಣೆ ಅಖಾಡ ಹತ್ತಿರ ಆಗುತ್ತಿದ್ದ ಹಾಗೆ ಮತದಾರರನ್ನು ಸೆಳೆಯಲು ರಾಜಕೀಯ ಮುಖಂಡರು ಒಂದೆಲ್ಲಾ ಒಂದು ಗಿಮಿಕ್‍ಗಳನ್ನು ಮಾಡುತ್ತಾನೆ ಇರುತ್ತಾರೆ. ಇದೀಗ ಅಂತಹದೇ ಒಂದು ಗಿಮಿಕ್ ಮಾಡಲು ಹೋಗಿ ಕಾಂಗ್ರೆಸ್ ಮುಖಂಡನ ಬೆಂಬಲಿಗರು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ನಾಗಮಂಗಲ ತಾಲೂಕಿನ ತೊಳಸಿಕೊಂಬರಿ ಗ್ರಾಮದ ಗ್ರಾಮದೇವತೆ ಹಬ್ಬದ ಅಂಗವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್‍ನ ಎರಡು ಗುಂಪು ಪ್ರತ್ಯೇಕವಾಗಿ ವೇದಿಕೆ ನಿರ್ಮಾಣ ಮಾಡಿ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಒಂದು ಗುಂಪು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಚಲುವರಾಯಸ್ವಾಮಿ ಮತ್ತೊಂದು ಗುಂಪು ಶಾಸಕ ಸುರೇಶ್‍ಗೌಡರನ್ನು ಕರೆಸಿ ವೇದಿಕೆಯ ಮೇಲೆ ಸನ್ಮಾನ ಮಾಡಿ ವೇದಿಕೆ ಮೇಲೆ ಭಾಷಣ ಮಾಡಿಸಿದ್ದರು. ಇದನ್ನೂ ಓದಿ: ಐಷಾರಾಮಿ ಜೀವನಕ್ಕಾಗಿ ಡ್ರಗ್ಸ್ ಡೀಲ್ ಮಾಡ್ತಿದ್ದ ಬೆಂಗಳೂರಿನ ಲವರ್ಸ್ ಬಂಧನ

ಇದಾದ ಬಳಿಕ ಸುರೇಶ್‍ಗೌಡ ಬೆಂಬಲಿಗರು ವೇದಿಕೆಯ ಮೇಲೆ ಒಂದಷ್ಟು ನೃತ್ಯ ಕಾರ್ಯಕ್ರಮವನ್ನು ನಡೆಸಿದರು. ಇನ್ನೊಂದು ಕಡೆ ಇದೇ ಊರಿನಲ್ಲಿ ಚಲುವರಾಯಸ್ವಾಮಿ ಬೆಂಬಲಿಗರು ಸಹ ನೃತ್ಯ ಕಾರ್ಯಕ್ರಮ ಮಾಡಿದ್ದರು. ಆದರೆ ಚಲುವರಾಯಸ್ವಾಮಿ ಬೆಂಬಲಿಗರು ಮಾಡಿಸಿದ ಈ ನೃತ್ಯ ಕಾರ್ಯಕ್ರಮದಲ್ಲಿ ಡ್ಯಾನ್ಸರ್‍ಗಳು ಅರೆಬರೆ ಬಟ್ಟೆ ಧರಿಸಿ ನೃತ್ಯ ಮಾಡಿದ್ದರು. ಈ ವೇಳೆ ಬಾಲಕನೊಬ್ಬನನ್ನು ಡ್ಯಾನ್ಸರ್‍ಗಳು ವೇದಿಕೆಯ ಮೇಲೆ ಕರೆತಂದು ಅಶ್ಲೀಲವಾಗಿ ನಡೆದುಕೊಂಡಿದ್ದಾರೆ. ಅಲ್ಲದೇ ನೃತ್ಯಗಾರ್ತಿಯರು ಇಡೀ ಕಾರ್ಯಕ್ರಮ ಉದ್ದಕ್ಕೂ ಅಶ್ಲೀಲವಾಗಿ ನಡೆದುಕೊಂಡಿದ್ದು, ಸಭ್ಯಸ್ಥರು ತಲೆ ತಗ್ಗಿಸುವ ರೀತಿಯಲ್ಲಿ ವರ್ತನೆ ಮಾಡಿದ್ದಾರೆ. ಇದನ್ನೂ ಓದಿ : ಮಹಿಳಾ ದಿನಾಚರಣೆಗಾಗಿ ವಿಶೇಷ ಪೋಸ್ಟರ್ ರಿಲೀಸ್ ಮಾಡಿದ ಕೆಜಿಎಫ್ 2 ತಂಡ

ಚಲುವರಾಯಸ್ವಾಮಿ ಬೆಂಬಲಿಗರು ಈ ರೀತಿ ಕಾರ್ಯಕ್ರಮ ನಡೆಸಿದ್ದರಿಂದ ಮಂಡ್ಯ ಜಿಲ್ಲೆಯ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಈ ಹಿಂದೆ 2004ರಲ್ಲಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ನಾಗಮಂಗಲ ತಾಲೂಕಿನ ದೇವಾಲಪುರ ಗ್ರಾಮದಲ್ಲಿ ಚುನಾವಣೆ ಪೂರ್ವದಲ್ಲಿ ಇದೇ ರೀತಿಯ ಕಾರ್ಯಕ್ರಮ ನಡೆಸಿದ್ದರು. ಇದಾದ ಬಳಿಕ ಸಾರ್ವಜನಿಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರ ಜೊತೆಗೆ ಆ ಚುನಾವಣೆಯಲ್ಲಿ ಶಿವರಾಮೇಗೌಡ ಸೋಲು ಕಂಡಿದ್ದರು. ಇದೀಗ ಅದೇ ಹಾದಿಯನ್ನು ಚಲುವರಾಯಸ್ವಾಮಿ ಬೆಂಬಲಿಗರು ಹಿಡಿದಿರುವುದು ಜನರ ಆಕ್ರೋಶಕ್ಕೆ ಕಾರಣವಾಗುತ್ತಿದೆ.

ಒಟ್ಟಾರೆ ಗ್ರಾಮದೇವತೆ ಹಬ್ಬದ ನೆಪದಲ್ಲಿ ಈ ರೀತಿಯ ಅಶ್ಲೀಲ ಕಾರ್ಯಕ್ರಮವನ್ನು ಆಯೋಜಿಸಿರುವುದು ಸಕ್ಕರೆ ನಾಡಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಚಲುವರಾಯಸ್ವಾಮಿ ಬೆಂಬಲಿಗರ ಈ ವರ್ತನೆ ವಿರುದ್ಧ ಹಾಗೂ ಚಲುವರಾಯಸ್ವಾಮಿ ವಿರುದ್ಧ ಸದ್ಯ ನಾಗಮಂಗಲದ ಜನರು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *