ಉಕ್ರೇನ್‍ನಲ್ಲಿರುವ ಅತೀ ದೊಡ್ಡ ಅಣುಸ್ಥಾವರದ ಮೇಲೆ ರಷ್ಯಾ ದಾಳಿ

Public TV
1 Min Read

ಕೀವ್: ರಷ್ಯಾ ಹಾಗೂ ಉಕ್ರೇನ್ ನಡುವಿನ ಸಂಘರ್ಷ 9ನೇ ದಿನಕ್ಕೆ ಕಾಲಿಟ್ಟಿದೆ. ಇದೀಗ ರಷ್ಯಾ ಸೈನಿಕರು ಉಕ್ರೇನ್ ನಲ್ಲಿರುವ ಅತೀ ದೊಡ್ಡ ಅಣುಸ್ಥಾವರದ ಮೇಲೆ ದಾಳಿ ಮಾಡಿದ್ದಾರೆ.

ಇಂದು ಮುಂಜಾನೆ 3 ಗಂಟೆ ಸುಮಾರಿಗೆ ರಷ್ಯಾ ಸೇನೆಯಿಂದ ಜಪೋರಿಝಿಯಾ ಅಣುಸ್ಥಾವರ ಮೇಲೆ ದಾಳಿ ನಡೆದಿದೆ. ಯುರೋಪಿನಲ್ಲಿಯೇ ಅತೀ ದೊಡ್ಡದಾದ ಅಣುಸ್ಥಾವರ ಇದಾಗಿದೆ. ಇದೀಗ ರಷ್ಯಾ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಅಣುಸ್ಥಾವರದಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಎನರ್‍ಗೋಡರ್‍ನ ಮೇಯರ್ ಹೇಳಿದ್ದಾರೆ. ಇದನ್ನೂ ಓದಿ: ನಾನೇನು ಕಚ್ಚುವುದಿಲ್ಲ, ಮತ್ತೇಕೆ ನಿಮಗೆ ಭಯ? – ಪುಟೀನ್‍ಗೆ ವ್ಯಂಗ್ಯ ಮಾಡಿದ ಉಕ್ರೇನ್ ಅಧ್ಯಕ್ಷ

ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರದ ಕಟ್ಟಡ ಹಾಗೂ ಘಟಕಗಳ ಶತ್ರುಗಳ ನಿರಂತರ ಶೆಲ್ ದಾಳಿಗೊಳಗಾಗಿದ್ದು, ಪರಿಣಾಮವಾಗಿ ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರವು ಧಗಧಗಿಸುತ್ತಿದೆ. ಒಂದು ವೇಳೆ ಈ ಅಣುಸ್ಥಾವರ ಸ್ಫೊಟಗೊಂಡರೆ 1986ರ ಚರ್ನೋಬೆಲ್ ದುರಂತಕ್ಕಿಂತ 10 ಪಟ್ಟು ಭೀಕರವಾಗಲಿದೆ. ಇದನ್ನೂ ಓದಿ: ಗಡಿಗಳಲ್ಲಿ ಹೆಣ್ಮಕ್ಕಳ ಮೇಲೆ ಸೈನಿಕರಿಂದ ಹಲ್ಲೆ – ಕರಾಳತೆ ಬಿಚ್ಚಿಟ್ಟ ವಿದ್ಯಾರ್ಥಿನಿಯರು

ಸ್ಥಳೀಯ ಪಡೆಗಳು ಮತ್ತು ರಷ್ಯಾದ ಪಡೆಗಳ ನಡುವೆ ಭೀಕರ ಹೋರಾಟ ನಡೆದಿದೆ. ಈ ದಾಳಿಯಲ್ಲಿ ಅಪಾರ ಸಾವು ನೋವುಗಳಾಗಿವೆ. ಇದಕ್ಕೂ ಮೊದಲು ರಷ್ಯಾ ಸೇನೆಯು, ಪರಮಾಣು ಸ್ಥಾವರ ವಶಪಡಿಸಿಕೊಳ್ಳಲು ಹವಣಿಸುತ್ತಿದೆ ಎಂದು ವರದಿಯಾಗಿತ್ತು. ಇದಕ್ಕಾಗಿ ರಷ್ಯಾ ಪಡೆಗಳು ಟ್ಯಾಂಕ್‍ಳೊಂದಿಗೆ ಜಪೋರಿಝಿಯಾ ಪ್ರವೇಶಿಸಿವೆ ಎಂದು ಹೇಳಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *