ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತರು ಬಂಜಾರ ಜನಾಂಗದವರು: ಆರ್ ಅಶೋಕ್

Public TV
1 Min Read

ಬೆಂಗಳೂರು: ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತರು ಬಂಜಾರ ಜನಾಂಗದವರು ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.

ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘ ಆಯೋಜಿಸಿದ್ದ ಸಂತ ಸೇವಾಲಾಲ್‍ರ 283 ನೇ ಜಯಂತಿ ಪ್ರಯುಕ್ತ ಬಂಜಾರ ದೀವಿಗೆ ಸ್ಮರಣ ಸಂಚಿಕೆ ಬಿಡುಗಡೆ, ಬಂಜಾರ ಕಲಾಮೇಳವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ರಾಜ್ಯದ ಅತ್ಯಂತ ಸೌಮ್ಯ ಸ್ವಭಾವದ ಜನಾಂಗಗಳಲ್ಲಿ ಬಂಜಾರ ಜನಾಂಗ ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ. ಸಾಂಸ್ಕೃತಿಕವಾಗಿ ಎಂದು ಹೇಳಿದರು.  ಇದನ್ನೂ ಓದಿ:  ಮಾಲೀಕ ಯುದ್ಧಕ್ಕೆ ಹೋಗಿದ್ದಾರೆ, ಅವರ ಮಕ್ಕಳನ್ನು ಬಿಟ್ಟು ನಾನು ಬರಲ್ಲ ಎಂದ ವಿದ್ಯಾರ್ಥಿನಿ!

ಆ ನೆಲೆಯಲ್ಲಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಮಾಡಿ, ಸರ್ಕಾರದ ಎಲ್ಲ ಸೌಲಭ್ಯಗಳನ್ನು ನೀಡಲು ಕಂದಾಯ ಸಚಿವನಾಗಿ ಕಾರ್ಯಾದೇಶ ಮಾಡಿದ್ದೇನೆ. ಸುಮಾರು ಸಾವಿರಾರು ತಾಂಡಾಗಳು ಕಂದಾಯ ಗ್ರಾಮಗಳಾಗಿ ಪರಿವರ್ತನೆ ಸದ್ಯದಲ್ಲೇ ಆಗಲಿದೆ. ಬಂಜಾರ ಜನಾಂಗವು ಶೈಕ್ಷಣಿಕವಾಗಿ ಮುಂದೆ ಬರಬೇಕು ಅನ್ನುವುದೇ ನನ್ನ ಆಶಯ. ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಮೂಲಕ ಲಂಬಾಣಿ ತಾಂಡಾದಲ್ಲಿ ವಾಸ್ತವ್ಯ ಮಾಡಿ, ಅವರ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇನೆ ಎಂದರು. ಇದನ್ನೂ ಓದಿ: ಮತ್ತೊಬ್ಬ ರಾಜಕಾರಣಿ ಪುತ್ರ ಚಂದನವನದಲ್ಲಿ ‘ಗತವೈಭವ’ ಮಾಡಲು ಎಂಟ್ರಿ!

ಬಂಜಾರ ಸೇವಾ ಸಂಘದ ಪದಾಧಿಕಾರಿಗಳು ಸಚಿವರಿಗೆ ಲಂಬಾಣಿ ಸಮುದಾಯದ ಪೇಟ ತೊಡಿಸಿ, ಸಾಂಪ್ರದಾಯಿಕ ವಾದ್ಯ, ನೃತ್ಯದೊಂದಿಗೆ ಸ್ವಾಗತ ನೀಡಿದರು. ಈ ಸಂದರ್ಭದಲ್ಲಿ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಸಂಸದ ಉಮೇಶ್ ಜಾಧವ್, ಮಾಜಿ ಸಚಿವೆ ಬಿ ಟಿ ಲಲಿತಾ ನಾಯಕ್, ಶಾಸಕ ರಾಜಕುಮಾರ ತೆಲ್ಕೂರ, ಮಿಂಟೋ ನಿರ್ದೇಶಕಿ ಸುಜಾತಾ ರಾಥೋಡ್ ಇತರರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *