ತಿರುಪತಿ ತಿರುಮಲ ದೇವಸ್ಥಾನದ ಜಿಲೇಬಿ ಪ್ರಸಾದದ ಬೆಲೆ ಏರಿಕೆ

By
2 Min Read

ಅಮರಾವತಿ: ತಿರುಪತಿ ತಿರುಮಲ ದೇವಸ್ಥಾನದಲ್ಲಿ ನೀಡಿತ್ತಿರುವ ಜಿಲೇಬಿ ಪ್ರಸಾದದ ಬೆಲೆಯನ್ನು 100 ರಿಂದ 500 ರೂ.ಗೆ ಏರಿಕೆ ಮಾಡಲಾಗಿದೆ. ದೇವಸ್ಥಾನದಲ್ಲಿ ಆರ್ಜಿತ ಸೇವೆ ಸಂದರ್ಭದಲ್ಲಿ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

ಈ ಗುರುವಾರ ವಿಶೇಷ ಪ್ರಸಾದವನ್ನು ತೆರೆದ ಕೌಂಟರ್‌ಗಳಿಂದ ಭಕ್ತರಿಗೆ ವಿತರಿಸಲಾಗುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಪ್ರಸಾದವನ್ನು ತಯಾರಿಸುವ ಸ್ಥಳವನ್ನು ತಿರುಮಲ ದೇವಾಲಯದ ಒಳಗಿನ ಪಾಡಿ ಪೋಟುನಿಂದ ದೇವಾಲಯದ ಹೊರಗೆ ಹೊಸದಾಗಿ ನಿರ್ಮಿಸಲಾದ ಬೂಂದಿ ಕಿಚನ್‍ಗೆ ಬದಲಾಯಿಸಲಾಗುತ್ತದೆ ಎಂದು ದೇವಸ್ಥಾನ ಟ್ರಸ್ಟ್ ಹೇಳಿದೆ.

ಟಿಟಿಡಿ ವಿಶ್ವದ ಅತ್ಯಂತ ಗೌರವಾನ್ವಿತ ಹಿಂದೂ ಧಾರ್ಮಿಕ ಸಂಸ್ಥೆಗಳಲ್ಲಿ ಒಂದಾಗಿದೆ. ಇದು ಸಬ್ಸಿಡಿ ದರದಲ್ಲಿ ಅಥವಾ ಕನಿಷ್ಠ ವೆಚ್ಚದ ಆಧಾರದ ಮೇಲೆ ಪ್ರಸಾದವನ್ನು ನೀಡಬೇಕು. ಆದರೆ ಇಲ್ಲಿ ಜಿಲೇಬಿಯನ್ನು ಮಾರಾಟ ಮಾಡುವ ಮೂಲಕ ಶೇ.239 ಲಾಭ ಗಳಿಸಲು ಪ್ರಯತ್ನಿಸುತ್ತಿದೆ. ಪ್ರಸಾದವು ಅದರ ತಯಾರಿಕೆಯ ವೆಚ್ಚಕ್ಕಿಂತ ಹೆಚ್ಚು, ಇದು ಅತ್ಯಂತ ಆಕ್ಷೇಪಾರ್ಹವಾಗಿದೆ ಎಂದು ಟಿಡಿಪಿ ಶಾಸಕ ತಿಳಿಸಿದ್ದಾರೆ. ಇದನ್ನೂ ಓದಿ:  ತಮಿಳುನಾಡು ನಗರ ಸ್ಥಳೀಯ ಸಂಸ್ಥೆ ಚುನಾವಣೆ- ವೆಲ್ಲೂರಿನಲ್ಲಿ ತೃತೀಯಲಿಂಗಿಗೆ ಗೆಲುವು

ಮಧ್ಯವರ್ತಿಗಳು ಕಾಳ ದಂಧೆಯಲ್ಲಿ ಒಂದು ಸೆಟ್‍ಗೆ 2,000 ರೂ.ನಂತೆ ಮಾರುವುದನ್ನು ತಡೆಯಲು ಜೂನ್ 2021 ರಲ್ಲಿ, ಟಿಟಿಡಿ ಆಡಳಿತದ ಉನ್ನತಾಧಿಕಾರಿಗಳು ಟ್ರಸ್ಟ್ ಬೋರ್ಡ್‍ಗೆ ಪ್ರಸ್ತುತ 100 ಕ್ಕೆ ಮಾರಾಟವಾಗುತ್ತಿರುವ ಜಿಲೇಬಿ ಮತ್ತು ಥೆಂಥೋಲ ಸೆಟ್ ಅನ್ನು 2,000ಕ್ಕೆ ಮಾರುವಂತೆ ಪ್ರಸ್ತಾಪವಿರಿಸಿದ್ದರು. ಜಿಲೇಬಿ ಮತ್ತು ಥೆಂಥೋಲ ಸೆಟ್ ತಯಾರಿಸಲು ಟಿಟಿಡಿ ಮಾಡುವ ವೆಚ್ಚ 147.50 ಆಗಿದೆ. ಇದನ್ನೂ ಓದಿ: ಮೆಲಾನಿಯಾ ಟ್ರಂಪ್, ಕೇಜ್ರಿವಾಲ್ ಶಾಲೆಯನ್ನು ಮಾತ್ರ ನೋಡಬೇಕೆಂದಿದ್ದರು: ದೆಹಲಿ ಸಿಎಂ

ಟ್ರಸ್ಟ್ ಬೋರ್ಡ್ ಈ ಸಂಬಂಧ ವಿವರವಾದ ಚರ್ಚೆಯನ್ನು ನಡೆಸಿದೆ. ಬೆಲೆಯನ್ನು 500 ರೂ.ಗೆ ಹೆಚ್ಚಿಸಲು ನಿರ್ಧರಿಸಿತು. ಬೆಲೆ ಏರಿಕೆಯಿಂದಾಗಿ ಟಿಟಿಡಿ ಶೇ.239 ರಷ್ಟು ಹೆಚ್ಚುವರಿ ಲಾಭವನ್ನು ಪಡೆಯುತ್ತದೆ. ಟಿಟಿಡಿ ಟ್ರಸ್ಟ್ ಬೋರ್ಡ್ ಕಾಳದಂಧೆ ನಿಲ್ಲಿಸುವ ಉದ್ದೇಶದಿಂದ ಐದು ಪಟ್ಟು ಹೆಚ್ಚಿಸಿದ್ದಾರೆ ಎಂದು ಆಂಧ್ರಪ್ರದೇಶದ ಸಾರ್ವಜನಿಕ ಖಾತೆಗಳ ಸಮಿತಿಯ ಅಧ್ಯಕ್ಷ ಪಯ್ಯವುಲ ಕೇಶವ್ ಹೇಳಿದ್ದಾರೆ.

ಟಿಟಿಡಿ ಟ್ರಸ್ಟ್‍ನ ಮಾಜಿ ಸದಸ್ಯ ಜಿ.ಭಾನುಪ್ರಕಾಶ್ ರೆಡ್ಡಿ ಕೂಡ ಬೆಲೆ ಏರಿಕೆ ತಪ್ಪು ಎಂದಿದ್ದಾರೆ. ಭಕ್ತರಿಗೆ ಸಬ್ಸಿಡಿ ದರದಲ್ಲಿ ಪ್ರಸಾದವನ್ನು ಯಾವಾಗಲೂ ನೀಡಬೇಕು. ಆದರೆ ಇಲ್ಲಿ ಟಿಟಿಡಿ ಹೆಚ್ಚಿನ ಬೇಡಿಕೆ ಇದೆ ಎಂಬ ಕಾರಣಕ್ಕೆ ಭಕ್ತರನ್ನು ಸುಲಿಗೆ ಮಾಡುತ್ತಿದೆ. ಇದು ಆಕ್ಷೇಪಾರ್ಹವಾಗಿದೆ ಎಂದು ವಿರೋಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *