ಬಿಜೆಪಿ ತಾಲೂಕು ಯುವ ಮೋರ್ಚಾ ಅಧ್ಯಕ್ಷನಿಂದ ಭಾಮೈದನ ಕೊಲೆ – ರಾಜಕೀಯ ತಿರುವು

Public TV
2 Min Read

ಕೋಲಾರ: ಆತ ಬಿಜೆಪಿ ಮುಖಂಡನಾಗಿದ್ದು, ಒಬ್ಬ ಮಗಳನ್ನು ಕೊಂದು ತಪ್ಪು ಮಾಡಿದ್ರೂ, ಮೊಮ್ಮಕ್ಕಳ ಮುಖ ನೋಡಿ ಮತ್ತೊಬ್ಬ ಮಗಳನ್ನು ಕೊಟ್ಟು ಮದುವೆ ಮಾಡಿದ್ರು. ಆದರೆ ಆ ಭೂಪ ಇನ್ನೊಬ್ಬ ಮಗಳ ಮೇಲೂ ಕಣ್ಣಾಕಿದ್ದ. ಇದನ್ನು ಕುಟುಂಬ ಪ್ರಶ್ನಿಸಿದ್ದು, ರಕ್ತದ ಕೋಡಿ ಹರಿಸಿಬಿಟ್ಟ. ಭಾವ-ಭಾಮೈದನ ಕೊಲೆ ಪ್ರಕರಣ ಈಗ ಬಿಜೆಪಿ-ಕಾಂಗ್ರೆಸ್ ರಾಜಕೀಯ ಬಣ್ಣ ಪಡೆದಿದೆ.

ಸುದ್ದಿ ತಿಳಿದು ಮುಗಿಲು ಮುಟ್ಟುವಂತೆ ಕುಟುಂಬಸ್ಥರು ರೋಧಿಸುತ್ತಿದ್ದಾರೆ. ಮತ್ತೊಂದು ಕಡೆ ಕೊಲೆಗೆ ಬಿಜೆಪಿ ಮುಖಂಡರೆ ಕಾರಣ ಎನ್ನುತ್ತಿರುವ ಶಾಸಕ ಹಾಗೂ ಸಂಬಂಧಿಕರು, ಮತ್ತೊಂದೆಡೆ ಆರೋಪಿ ಬಾಬು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಜೊತೆಗೆ ಫೋಸ್ ಕೊಡುತ್ತಿದ್ದಾನೆ. ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದ ಗೌತಮ ನಗರದಲ್ಲಿ ಈ ದೃಶ್ಯಗಳು ಕಂಡುಬಂದಿದೆ. ಇದನ್ನೂ ಓದಿ: ಸಾವಿರಕ್ಕೂ ಕಡಿಮೆ ಸಂಖ್ಯೆಯಲ್ಲಿ ಕೊರೊನಾ ದಾಖಲು – 21 ಸಾವು

ತನ್ನಿಬ್ಬರು ಹೆಣ್ಣು ಮಕ್ಕಳನ್ನು ಕೊಟ್ಟು ಮದುವೆ ಮಾಡಿ ಕೊಟ್ಟ ತಪ್ಪಿಗೆ, ಬಿಜೆಪಿ ತಾಲೂಕು ಎಸ್.ಸಿ.ಮೋರ್ಚಾ, ತಾಲೂಕು ಅಧ್ಯಕ್ಷರ ಇಡೀ ಮೆನಯನ್ನೇ ಸ್ಮಶಾನ ಮಾಡಿಬಿಟ್ಟಿದ್ದಾನೆ. ಬಾಬು ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ಭಾನುವಾರ ಸಂಜೆ ತನಗೆ ಹೆಣ್ಣುಕೊಟ್ಟ ಮಾವನ ಮನೆಯಲ್ಲಿ ಹಣಕಾಸಿನ ವಿಚಾರವಾಗಿ ಗಲಾಟೆ ಶುರುಮಾಡಿದ್ದ.

ಈ ವೇಳೆ ತನ್ನ ಪತ್ನಿ ಸುನಿತಾಗೆ ಹೊಡೆದಿದ್ದಾರೆ. ಇದನ್ನ ಪ್ರಶ್ನೆ ಮಾಡಿದ್ದ ವೇಳೆ ಅದನ್ನು ಕೇಳಲು ಬಂದ ತನ್ನಿಬ್ಬರು ಬಾಮೈದನರ ಪೈಕಿ ಸುರೇಶ್‍ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಮತ್ತೊಬ್ಬ ಬಾಮೈದ ಹರೀಶ್‍ಗೆ ಗಂಭೀರವಾಗಿ ಗಾಯವಾಗಿದೆ. ನೋಡು ನೋಡುತ್ತಿದ್ದಂತೆ ಗೌತಮ ನಗರದ ಮನೆಯ ಬಳಿ ರಕ್ತ ಚೆಲ್ಲಾಡಿದ್ದು, ಮಾತಿಗೆ ಮಾತು ಬೆಳೆದು ಗಲಾಟೆ ಕೇಳಿಸುತ್ತಿದ್ದ ಸ್ಥಳದಲ್ಲಿ ನೋಡು ನೋಡುತ್ತಲೇ ಅಲ್ಲೊಂದು ಹೆಣ ಉರುಳಿ ಬಿದ್ದಿತ್ತು.

ಬಿಜೆಪಿ ಮುಖಂಡ ಬಾಬು ಬಂಗಾರಪೇಟೆ ತಾಲೂಕು ಗುಟ್ಟಹಳ್ಳಿ ನಿವಾಸಿ. ಈತ ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮುಖಂಡರೊಂದಿಗೆ ಗುರುತಿಸಿಕೊಂಡಿದ್ದಾನೆ. ಈತ 18 ವರ್ಷಗಳ ಹಿಂದೆ ಗೌತಮ ನಗರದ ಪ್ರಕಾಶ್ ಮೊದಲ ಮಗಳು ಅರುಣನನ್ನು ಮದುವೆ ಮಾಡಿಕೊಂಡಿದ್ದ. ಅವರಿಗೆ ಮೂರು ಜನ ಮಕ್ಕಳು ಇದ್ದರು. ಮಕ್ಕಳಿಂದಾಗಿ ಎರಡನೇ ಮಗಳು ಸುನಿತಾಳನ್ನು ಕೊಟ್ಟು ಮದುವೆ ಮಾಡಿ ಮಕ್ಕಳನ್ನು ನೋಡಿಕೊಂಡು ಇನ್ನಾದ್ರು ಚೆನ್ನಾಗಿ ಬದುಕಲಿ ಎಂದು ಹೇಳಿದ್ರು. ಆದರೆ ಬಾಬು ಅಲ್ಲೂ ತನ್ನ ಬುದ್ದಿ ಕಲಿಯಲಿಲ್ಲ. ಮತ್ತೆ ಸುನಿತಾಳಿಗೂ ಹೊಡೆದು ಬಡಿದು ಹಿಂಸೆ ಮಾಡಲು ಶುರುಮಾಡಿದ್ದ.

ಅದು ಸಾಲದ್ದಕ್ಕೆ ಪ್ರಕಾಶ್ ಅವರ ಮೂರನೇ ಮಗಳ ಮೇಲೂ ಕಣ್ಣಾಕಿ ಅವಳನ್ನು ಮದುವೆಯಾಗುವುದಾಗಿ ಹಟ ಹಿಡಿದಿದ್ದನಂತೆ. ಹಾಗಾಗಿ ಆರು ತಿಂಗಳಿಂದ ಮನೆಯಲ್ಲಿ ಗಲಾಟೆ ನಡೆದಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಈ ವಿವಾದ ತಾಲೂಕು ಬಿಜೆಪಿ ಮುಖಂಡರ ಸಮ್ಮುಖದಲ್ಲೆ ಇತ್ಯರ್ಥವಾಗಿತ್ತು. ಆದರೆ ಇದೆಕ್ಕೆಲ್ಲಾ ಕಾರಣ ಬಿಜೆಪಿ ಮುಖಂಡರು, ಯುವಕರನ್ನ ಪ್ರೇರೇಪಿಸಿ ಕಾಂಗ್ರೆಸ್ ಕಾರ್ಯಕರ್ತನನ್ನ ಕೊಲೆ ಮಾಡಿದ್ದಾರೆ. ಇದು ಬಿಜೆಪಿ ಬೆಂಬಲಿತ ಕೊಲೆ ಎಂದು ಶಾಸಕ ನಾರಾಯಣಸ್ವಾಮಿ ಇಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಟ್ರೆಕ್ಕಿಂಗ್ ಹೋಗಿ ಅಪಾಯಕ್ಕೆ ಸಿಲುಕಿದ್ದ ಯುವಕನ ವಿರುದ್ಧ ಕೇಸ್ ದಾಖಲು!

ಸದ್ಯ ಉಂಡು ಹೋದ ಕೊಂದು ಹೋದ ಅನ್ನೋ ಪರಿಸ್ಥಿತಿ ಬಂದಿದ್ದು, ಆರೋಪಿ ಬಾಬುನನ್ನು ಬಂಧಿಸಿರುವ ಬಂಗಾರಪೇಟೆ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ. ಪೊಲೀಸರು ಬಿಜೆಪಿ ಮುಖಂಡರುಗಳ ಮುಲಾಜಿಗೆ ಒಳಗಾಗದೆ ಆತನಿಗೆ ತಕ್ಕ ಶಿಕ್ಷೆಕೊಡಿಸಬೇಕು ಎಂದು ಕುಟುಂಬಸ್ಥರು ಪೊಲೀಸರನ್ನು ಆಗ್ರಹಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *