ಜೀ ಕನ್ನಡ ವಾಹಿನಿಗೆ ಜಿಗಿದ ರಚಿತಾ ರಾಮ್ – Exclusive

By
1 Min Read

ಲರ್ಸ್ ವಾಹಿನಿಯ ಮಜಾ ಭಾರತ ಕಾಮಿಡಿ ರಿಯಾಲಿಟಿ ಶೋ ನಲ್ಲಿ ಜಡ್ಜ್ ಆಗಿ ಹಲವು ಸೀಸನ್ ಗಳನ್ನು ನಡೆಸಿಕೊಟ್ಟ ಡಿಂಪಲ್ ಕ್ವೀನ್ ರಚಿತಾ ರಾಮ್, ಇದೀಗ ಜೀ ಕನ್ನಡ ವಾಹಿನಿಗೆ ಜಿಗಿದಿದ್ದಾರೆ. ಇನ್ನೇನು ಶುರುವಾಗಬೇಕಿರುವ ಡ್ರಾಮಾ ಜ್ಯೂನಿಯರ್ಸ್ ಸೀಸನ್ 4ರಲ್ಲಿ ರಚಿತಾ ಜಡ್ಜ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಈಗಾಗಲೇ ಸದ್ದಿಲ್ಲದೇ ರಚಿತಾ ರಾಮ್ ಅವರ ಪ್ರೋಮೋ ಶೂಟಿಂಗ್ ಕೂಡ ವಾಹಿನಿ ಮಾಡಿದೆ. ಇದನ್ನೂ ಓದಿ : ಸಾರ್ವಕಾಲಿಕ ಶ್ರೇಷ್ಠ ಸಿನಿಮಾ ಒಲವಿನ ಉಡುಗೊರೆಗೆ 35 ವರ್ಷ


ಕಳೆದ ಮೂರು ಸೀಸನ್ ಗಳಲ್ಲಿ ಹಿರಿಯ ನಟಿ ಲಕ್ಷ್ಮೀ, ಮುಖ್ಯಮಂತ್ರಿ ಚಂದ್ರು ಹಾಗೂ ವಿಜಯ ರಾಘವೇಂದ್ರ ನಿರ್ಣಾಯಕರಾಗಿದ್ದರು. ಈ ಬಾರಿ ಮೂವರು ಜಡ್ಜ್ ಆಗಿ ಇರುವುದಿಲ್ಲ ಎನ್ನುವ ಸುದ್ದಿಯಿದೆ. ರವಿಚಂದ್ರನ್, ರಚಿತಾ ರಾಮ್ ಮತ್ತು ಇನ್ನೋರ್ವ ಖ್ಯಾತ ಕಲಾವಿದರು ಈ ಸ್ಥಾನವನ್ನು ತುಂಬಲಿದ್ದಾರೆ.
ಈಗಾಗಲೇ ರವಿಚಂದ್ರನ್ ಅವರ ಪ್ರೋಮೋ ಶೂಟ್ ಕೂಡ ಆಗಿದೆ. ಮಕ್ಕಳು ರವಿಚಂದ್ರನ್ ಅವರನ್ನು ಕಿಡ್ನ್ಯಾಪ್ ಮಾಡಿದ ವಿಡಿಯೋಗಳು ಹರಿದಾಡುತ್ತಿವೆ. ಕೆಲವೇ ದಿನಗಳಲ್ಲಿ ರಚಿತಾ ರಾಮ್ ಅವರ ಪ್ರೋಮೋ ಕೂಡ ಬರಲಿದೆಯಂತೆ. ಇದನ್ನೂ ಓದಿ : ಈ ಹುಡುಗಿಗೆ ಜಿಮ್ ನಲ್ಲಿ ಸಿಕ್ತಂತೆ ನಟಿಸೋಕೆ ಅವಕಾಶ


ಹೈದರಾಬಾದ್ ವಿಮಾನ ನಿಲ್ದಾಣ, ರಾಮೋಜಿರಾವ್ ಫಿಲ್ಮಸಿಟಿಯಲ್ಲಿ ರಚಿತಾ ರಾಮ್ ಇರುವ ಪ್ರೋಮೋವನ್ನು ಚಿತ್ರೀಕರಿಸಿದ್ದಾರೆ ರೋಮೋ ಚಿತ್ರಖ್ಯಾತಿಯ ಶೇಖರ್. ಬೆಂಗಳೂರು ಮತ್ತು ಹೈದರಾಬಾದ್ ನಲ್ಲಿ ಈ ಭಾಗದ ಚಿತ್ರೀಕರಣ ನಡೆದಿದೆ. ಇದನ್ನೂ ಓದಿ : ಮುದ್ದಾದ ಹುಡುಗಿ ಅನುಶ್ರೀಗೆ ಸೈತಾನ್ ಅಂದೋರು ಯಾರು?


ರಚಿತಾ ರಾಮ್ ಜೀ ಕನ್ನಡ ವಾಹಿನಿಯ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಇದೇ ಮೊದಲೇನೂ ಅಲ್ಲ. ಹತ್ತು ವರ್ಷಗಳ ಹಿಂದೆ ಪ್ರಸಾರವಾದ ‘ಅರಸಿ’ ಧಾರಾವಾಹಿಯಲ್ಲಿ ನಟಿಸಿದ್ದರು. ಅದು ಅವರ ಮೊದಲ ಸೀರಿಯಲ್ ಕೂಡ ಆಗಿತ್ತು. ಹತ್ತು ವರ್ಷಗಳ ನಂತರ ಅವರು ಮತ್ತೆ ಜೀ ಕನ್ನಡ ವಾಹಿನಿಯ ಬಳಗಕ್ಕೆ ಸೇರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *