ದೇಶದಲ್ಲಿ ಪ್ರಾಕೃತಿಕವಾಗಿ ರೋಗ ಮುಕ್ತರನ್ನಾಗಿ ಮಾಡಬಹುದಾದ ಔಷಧ ಸಂಪತ್ತು ಹೇರಳವಾಗಿದೆ: ಎಸ್.ಗಣೇಶ್ ರಾವ್

Public TV
2 Min Read

ಮಂಗಳೂರು: ಸಾಗರದ ಆಪ್ಯಂ ಆಯುರ್ವೇದ ಫೌಂಡೇಶನ್ ಮತ್ತು ಬೆಂಗಳೂರಿನ ಆಪ್ಯಂ ಸಂಶೋಧನಾ ಸಂಸ್ಥೆಯ ಸಹಕಾರದಲ್ಲಿ ಡಾ. ದಿವ್ಯಜ್ಯೋತಿ ಮತ್ತು ಡಾ.ದೀಪಾ ಕೆ.ಕೆ ಅವರು ಸಂಸ್ಕೃತದಿಂದ ಇಂಗ್ಲೀಷ್‍ಗೆ ತರ್ಜುಮೆ ಮಾಡಿ ಬರೆದ ಸಂಜೀವಿನಿ ಸಾಮ್ರಾಜ್ಯ ಮತ್ತು ಪದಾರ್ಥ ಪ್ರಶ್ನೋತ್ತರ ಶತಕ ಅಯುರ್ವೇದ ಸಂಬಂಧಿ ಪುಸ್ತಕದ ಬಿಡುಗಡೆ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆಯಿತು.

ಜಿ.ಆರ್ ಮೆಡಿಕಲ್ ಕಾಲೇಜ್, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಹಾಗೂ ಕರಾವಳಿ ಸಮೂಹ ಸಂಸ್ಥೆಯ ಸ್ಥಾಪಕರಾದ ಎಸ್. ಗಣೇಶ್ ರಾವ್ ಪುಸ್ತಕ ಬಿಡುಗಡೆಗೊಳಿಸಿದರು. ನಮ್ಮ ದೇಶದಲ್ಲಿ ಪ್ರಾಕೃತಿಕವಾಗಿ ರೋಗ ಮುಕ್ತರನ್ನಾಗಿ ಮಾಡಬಹುದಾದ ಔಷಧ ಸಂಪತ್ತು ಹೇರಳವಾಗಿದೆ. ಇದನ್ನು ಗುರುತಿಸಿ ಸದ್ಬಳಕೆ ಮಾಡುವ ಕಾರ್ಯ ನಡೆಯಬೇಕಿದೆ. ಭಾರತದ ಪುರಾತನ ಚಿಕಿತ್ಸಾ ವಿಧಾನವೇ ಆಯುರ್ವೇದವಾಗಿತ್ತು. ಬದಲಾದ ಸನ್ನಿವೇಶಕ್ಕೆ ಒಳಗಾಗಿ ಈ ಚಿಕಿತ್ಸಾ ಪದ್ಧತಿ ದಾಳಿಗೆ ಒಳಗಾದರೂ, ಇದೀಗ ಸರ್ಕಾರಗಳು ಮತ್ತೆ ಮಹತ್ವ ನೀಡಿ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ಇದಕ್ಕೆ ಪೂರಕವಾಗಿ ಇಬ್ಬರು ವೈದ್ಯರು ಪುಸ್ತಕದ ಮೂಲಕ ಪುರಾತನ ಪದ್ಧತಿಯ ಆಹಾರ ಪದ್ಧತಿ, ಚಿಕಿತ್ಸೆ ಕುರಿತ ಪುಸ್ತಕ ಮುದ್ರಿಸಿ ಹೊರ ತಂದಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಿಜಬ್ ವಿವಾದ – ಇಂದು ಹೈಕೋರ್ಟ್‌ನಲ್ಲಿ ಏನಾಯ್ತು..?

ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅವರು ಮಾತನಾಡಿ, ಕೊರೊನಾ ಸಂದರ್ಭ ಆಯುರ್ವೇದದ ಮಹತ್ವ ಅರಿತು ಹೆಚ್ಚಿನ ಜನತೆ ಮನೆ ಮದ್ದಿನಲ್ಲಿಯೇ ರೋಗ ನಿರೋಧಕ ಶಕ್ತಿ ವೃದ್ಧಿಕೊಂಡು ಸುರಕ್ಷಿತವಾಗಿದ್ದುದನ್ನು ಗಮನಿಸಬಹುದಾಗಿದೆ. ಇದರಿಂದ ಜಗತ್ತಿನಲ್ಲಿ ಈ ಪದ್ಧತಿಯ ಗೌರವ, ನಂಬಿಕೆ ಮತ್ತಷ್ಟು ಹೆಚ್ಚಿದೆ ಎಂದರು. ಇದನ್ನೂ ಓದಿ: ಕೋಮುವಾದ ರಾಜಕಾರಣದ ವಿರುದ್ಧ ಕೆಸಿಆರ್ ಹೋರಾಟ – ಬೆಂಬಲ ವ್ಯಕ್ತಪಡಿಸಿದ ಹೆಚ್‍ಡಿಡಿ

ಸಾಗರದ ಆಪ್ಯಂ ಫೌಂಡೇಷನ್ ಆಯುರ್ವೇದ ಪದ್ಧತಿಯ ಬೆಳವಣಿಗೆಗೆ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಆಪ್ಯಂ ಫೌಂಡೇಶನ್ ಉಪಾಧ್ಯಕ್ಷ ಹೇಮಚಂದ್ರ ಶೆಟ್ಟಿ ಮಾಹಿತಿ ನೀಡಿದರು. ಒಂದು ವಿಶಿಷ್ಟವಾದ ಆಯುರ್ವೇದ ಪುಸ್ತಕ ಇದರಲ್ಲಿ 400ಕ್ಕೂ ಅಧಿಕ ಔಷಧ ಸೇವನೆಯ ವಿಧಿಗಳನ್ನು ವಿವರಿಸಲಾಗಿದೆ. ಒಂದೇ ಸಂಜೀವಿನಿ ಮಾತ್ರೆಯನ್ನು ಬೇರೆ ಬೇರೆ ಔಷಧಗಳ ಜೊತೆ ಬೇರೆ ಅನೇಕ ರೋಗಗಳಲ್ಲಿ ಉಪಯೋಗಿಸುವ ಬಗ್ಗೆ ಮಾಹಿತಿಯನ್ನು ಒದಗಿಸಲಾಗಿದೆ ಎಂದು ಡಾ.ದೀಪಾ ಕೆ.ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ದಿವ್ಯಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.

Share This Article
Leave a Comment

Leave a Reply

Your email address will not be published. Required fields are marked *