ನಕಲಿ ದಾಖಲಿ ಸೃಷ್ಟಿಸಿ ಸೇನೆಗೆ ಸೇರ್ಪಡೆ – 9 ಮಂದಿ ಅರೆಸ್ಟ್

Public TV
1 Min Read

ವಿಜಯನಗರ: ನೂರಕ್ಕೂ ಹೆಚ್ಚು ಮಹಾರಾಷ್ಟ್ರ ನಿವಾಸಿಗಳು ಸೇನೆಗೆ ಸೇರಲು ನಕಲಿ ದಾಖಲೆ ಸೃಷ್ಟಿ ಮಾಡಿದ್ದು, ನಗರದ ಪೊಲೀಸರು ಅಕ್ರಮವನ್ನು ಪತ್ತೆ ಮಾಡಿದ್ದಾರೆ.

ವೈಭವ್, ನೇತಾಜಿ ರಾಮ್ ಸಾವಂತ್, ಜಂಬಣ್ಣ, ಅಜಿತ್ ಕೊಂಡೆ, ವೆಂಕಟೇಶ್, ಪರಶುರಾಮ್, ಮನೋಜ್ ಇದರ ಜೊತೆಗೆ ಬಳ್ಳಾರಿ ಜಂಬಣ್ಣ ಮನೋಜ್, ಹನುಮಂತ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ಸೇನೆಯಿಂದ ದಾಖಲಾತಿ ಪರಿಶೀಲಿಸುವಂತೆ ಮಾಹಿತಿ ಬಂದ ಹಿನ್ನೆಲೆ ಪ್ರಕರಣ ಬೆಳಕಿಗೆ ಬಂದಿದೆ. ಸೇನೆಯಲ್ಲಿ ಇನ್ನೂ ಹಲವು ಜನ ಇದೇ ರೀತಿ ಕೆಲಸಕ್ಕೆ ಸೇರಿರುವ ಅನುಮಾನವಿದೆ. ಇದನ್ನೂ ಓದಿ: 13ರ ಬಾಲಕಿ ಮೇಲೆ 16 ಮಂದಿಯಿಂದ ಸಾಮೂಹಿಕ ಅತ್ಯಾಚಾರ – ನೋವಿನ ಕಥೆ ಬಿಚ್ಚಿಟ್ಟ ತಂದೆ!

ಸರ್ಕಾರಿ ಅಧಿಕಾರಿಗಳು ದೇಶಸೇವೆ ಮಾಡುವ ಕೆಲಸಕ್ಕಾಗಿಯೂ ಅಡ್ಡದಾರಿ ಹಿಡಿದ ಯುವಕರ ಹಣಕ್ಕಾಗಿ ದಾಖಲೆ ನೀಡಿದ್ದಾರೆ. ನೂರಕ್ಕೂ ಹೆಚ್ಚು ಮಹಾರಾಷ್ಟ್ರ ನಿವಾಸಿಗಳು ರಾಜ್ಯದ ವಿವಿಧ ಭಾಗದಿಂದ ನಕಲಿ ಸರ್ಟಿಫಿಕೇಟ್ ನೀಡಿ ಆಯ್ಕೆ ಆಗಿದ್ದಾರೆ. ಇದನ್ನೂ ಓದಿ: 7 ರಾಜ್ಯಗಳಲ್ಲಿ 14 ಮಹಿಳೆಯರನ್ನು ಮದುವೆಯಾಗಿದ್ದ ಭೂಪ ಅರೆಸ್ಟ್

ಈ ಕುರಿತು ವಿಜಯನಗರ ಜಿಲ್ಲೆಯಲ್ಲಿ 9 ಮತ್ತು ಬಳ್ಳಾರಿ ಜಿಲ್ಲೆಯಲ್ಲಿ 11 ಜನರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ವಿಜಯನಗರದ ಹೊಳಲು ಠಾಣೆ, ಬಳ್ಳಾರಿ ನಗರದ ಬ್ರೂಸ್ ಪೇಟ್, ಗಾಂಧಿನಗರ, ಕೌಲ ಬಜಾರ್ ಮತ್ತು ಎಪಿಎಂಸಿ ಠಾಣೆಗಳಲ್ಲಿ ದೂರು ದಾಖಲಾಗಿದೆ.

BRIBE

ಇನ್ನೂ ಇದರಲ್ಲಿ ಇಬ್ಬರು ಪೊಲೀಸರು ಸಹಕಾರ ನೀಡಿದ ಆರೋಪವಿರುವ ಹಿನ್ನೆಲೆ ಪೊಲೀಸರನ್ನು ಅಮಾನತು ಮಾಡಲಾಗಿದೆ. ಸೇನೆಯಲ್ಲಿ ಕೆಲಸಕ್ಕೆ ಸೇರಲು ದಾಖಲಾತಿಗಳು ತಿದ್ದುಪಡಿ ಮಾಡಿ, ನಕಲಿ ದಾಖಲೆ ಕೊಟ್ಟ ಆರೋಪ ವ್ಯಕ್ತವಾಗಿದೆ.

ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಸೇರಿದಂತೆ ಹಲವು ನಕಲಿ ದಾಖಲೆಗಳ ಸೃಷ್ಟಿ ಮಾಡಿದ್ದರು. ಮಹಾರಾಷ್ಟ್ರದ ವಿವಿಧ ಊರಿನವರನ್ನು ಸ್ಥಳೀಯರು ಎನ್ನುವಂತೆ ದಾಖಲೆಗಳ ಫೋರ್ಜರಿ ಮಾಡಲಾಗಿದ್ದು, ನಕಲಿ ದಾಖಲೆಗಾಗಿ ಲಕ್ಷಾಂತರ ಹಣದ ವ್ಯವಹಾರ ನಡೆದಿರುವ ಕುರಿತು ಮಾಹಿತಿ ಲಭ್ಯವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *