ಪಿಸ್ತೂಲ್ ಕಸಿದುಕೊಂಡು ಪೊಲೀಸರ ಮೇಲೆ ದಾಳಿ ಮಾಡಿದ ಆರೋಪಿ..!

By
2 Min Read

ನವದೆಹಲಿ: ಕಸ್ಟಡಿಯಲ್ಲಿದ್ದ ದುಷ್ಕರ್ಮಿ ಪೊಲೀಸರ ಬಳಿ ಇದ್ದ ಪಿಸ್ತೂಲ್ ಕಸಿದುಕೊಂಡಿದ್ದು, ಅವರ ಮೇಲೆಯೇ ಗುಂಡು ಹಾರಿಸಿ ಪರಾರಿಯಾಗಲೂ ಯತ್ನಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಪೊಲೀಸ್ ಕಸ್ಟಡಿಯಲ್ಲಿದ್ದ ಕುಖ್ಯಾತ ಸ್ನ್ಯಾಚರ್, ಕಾನ್‍ಸ್ಟೆಬಲ್‍ನ ಪಿಸ್ತೂಲ್ ಕಸಿದುಕೊಂಡು ಅಲ್ಲಿದ್ದ ಪೊಲೀಸರ ಮೇಲೆಯೇ ಗುಂಡು ಹಾರಿಸಿದ್ದಾನೆ. ಈ ವೇಳೆ ಒಬ್ಬ ಪೊಲೀಸ್ ಪೇದೆಗೆ ಗುಂಡು ತಗುಲಿದೆ. ಗುಂಡು ಹಾರಿಸಿದ ತಕ್ಷಣ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಪೊಲೀಸರು ಕೂಡ ಆರೋಪಿ ವಿರುದ್ಧ ಪ್ರತಿದಾಳಿ ನಡೆಸಿ ಗುಂಡು ಹಾರಿಸಿದ್ದಾರೆ. ಬಳಿಕ ಆರೋಪಿಯ ಕಾಲಿಗೆ ಗುಂಡು ತಗುಲಿದ್ದು, ತಕ್ಷಣ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಹಿಜಬ್ ಬೆಂಬಲಿಸಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಪ್ರತಿಭಟನೆ!

ಗಾಯಗೊಂಡಿದ್ದ ಪೇದೆ ಹಾಗೂ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಇಬ್ಬರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಯನ್ನು ಫೈಝಲ್ ಎಂದು ಹೆಸರಿಸಲಾಗಿದ್ದು, ಈತ ಈಗಾಗಲೇ ಹಲವು ಸರಗಳ್ಳತನ ಮತ್ತು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಬಂಧಿತ ಫೈಸಲ್‍ನನ್ನು ಪೊಲೀಸರು ಉತ್ತರ ದೆಹಲಿಯ ಸೆಕ್ಟರ್ ಎ 5 ರಲ್ಲಿ ಆತನ ಇತರ ಸಹಚರರು ಮತ್ತು ಲೂಟಿ ಮಾಡಿದ ಮೊಬೈಲ್ ಫೋನ್ ಹುಡುಕಲು ಕರೆದುಕೊಂಡು ಹೋಗಿದ್ದಾರೆ.

ಅವಕಾಶ ನೋಡಿ ಪಿಸ್ತೂಲ್ ಕಿತ್ತುಕೊಂಡ!
ಅವಕಾಶ ನೋಡಿದ ಫೈಝಲ್ ಏಕಾಏಕಿ ಸಿಪತಿ ವಿಕ್ರಮ್ ಬಳಿ ಇದ್ದ ಪಿಸ್ತೂಲ್ ಕಸಿದುಕೊಂಡಿದ್ದು, ಗುಂಡು ಹಾರಿಸಿ ಓಡಿ ಹೋಗಿದ್ದಾನೆ. ಈ ಹಿನ್ನೆಲೆ ಪೇದೆ ಕೈಗೆ ಗುಂಡು ತಗುಲಿದೆ. ಈ ವೇಳೆ ಪೊಲೀಸರು ಓಡಿ ಹೋಗದೆ ನಿಲ್ಲುವಂತೆ ಎಷ್ಟೇ ಹೇಳಿದರೂ, ಆತ ಹಿಂದೆ ಗುಂಡು ಹಾರಿಸುತ್ತಾ ಓಡಿ ಹೋಗುತ್ತಿದ್ದ. ಪರಿಣಾಮ ಪೊಲೀಸರು ಆತನ ಮೇಲೆ ಪ್ರತಿದಾಳಿ ಮಾಡಿದ್ದಾರೆ.

ಫೈಝಲ್ ಕಾಲಿಗೆ ಗುಂಡು!
ಗುಂಡು ಫೈಝಲ್‍ನ ಎಡಗಾಲಿಗೆ ತಗುಲಿದ್ದು, ನಂತರ ಅವನು ಅಲ್ಲಿಯೇ ಬಿದ್ದನು. ಪೊಲೀಸರು ಆತನನ್ನು ಸದೆಬಡಿದು ಪಿಸ್ತೂಲ್ ಕಸಿದುಕೊಂಡಿದ್ದಾರೆ. ಇದಾದ ನಂತರ ಕಾನ್‍ಸ್ಟೆಬಲ್ ಮತ್ತು ಆರೋಪಿ ಇಬ್ಬರನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ. ಇದನ್ನೂ ಓದಿ: ಬಿಜೆಪಿ ಶಾಸಕನಿಂದ 25 ವರ್ಷದ ಯುವತಿ ಕಿಡ್ನಾಪ್ – ಕೇಸ್ ದಾಖಲು

POLICE

ಫೈಸಲ್ ಸ್ಪೋರ್ಟ್ಸ್ ಬೈಕ್ ಓಡಿಸುವುದರಲ್ಲಿ ಪರಿಣತಿ!
ಫೈಝಲ್ ಬಳಿ ಸ್ಪೋಟ್ರ್ಸ್ ಬೈಕ್ ಇದ್ದು, ಅದನ್ನು ಚಲಾಯಿಸುವುದರಲ್ಲಿ ಆತ ನಿಪುಣನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸರಗಳ್ಳತನದಂತಹ ಕೃತ್ಯ ನಡೆಸಿ ಬೈಕ್ ಚಲಾಯಿಸಿಕೊಂಡು ವೇಗವಾಗಿ ಓಡಿಸುತ್ತಾನೆ. ಅತಿವೇಗದಲ್ಲಿ ಟ್ರಾಫಿಕ್ ನಲ್ಲಿ ಬೈಕ್ ಓಡಿಸುವುದರಿಂದ ಆರೋಪಿ ಜನ ಮತ್ತು ಪೊಲೀಸರ ಕೈಗೆ ಸಿಕ್ಕಿಬೀಳುವುದಿಲ್ಲ. ಫೈಝಲ್ ದಿನಕ್ಕೆ 7 ರಿಂದ 8 ಸರಗಳ್ಳತನ ಅಥವಾ ದರೋಡೆ ಮಾಡುತ್ತಾನೆ ಎಂದು ಪೊಲೀಸರು ವಿವರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *