ರಚ್ಚು ಮುಂದೆ ಸತೀಶ್ ನೀನಾಸಂ ಪ್ರೇಮ ನಿವೇದನೆ – ‘ಮ್ಯಾಟ್ನಿ’ ಲವ್ ಟೀಸರ್‌ಗೆ ಪ್ರೇಕ್ಷಕರು ಫಿದಾ.!

By
2 Min Read

ಯೋಗ್ಯ ಸಿನಿಮಾದ ಹಿಟ್ ಕಾಂಬಿನೇಶನ್ ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ಮತ್ತೊಮ್ಮೆ ತೆರೆ ಮೇಲೆ ಮೋಡಿ ಮಾಡಲು ಒಂದಾಗಿರುವ ಚಿತ್ರ ‘ಮ್ಯಾಟ್ನಿ’. ಸ್ಯಾಂಡಲ್‍ವುಡ್ ನಲ್ಲಿ ಹೊಸ ಅಲೆ ಸೃಷ್ಟಿಸಲು ಸಜ್ಜಾಗಿರುವ ಮನೋಹರ್ ಕಾಂಪಲಿ ಚೊಚ್ಚಲ ನಿರ್ದೇಶನದ ಚಿತ್ರವಿದು. ಸದ್ಯ ಶೂಟ್ ಮೂಡ್ ನಲ್ಲಿರುವ ಮ್ಯಾಟ್ನಿ ಸಿನಿಮಾ ತಂಡ ಪ್ರೇಮಿಗಳ ದಿನಕ್ಕೆ ಟೀಸರ್ ಉಡುಗೊರೆಯಾಗಿ ನೀಡಿದೆ.

ಇಂದು ಪ್ರೇಮಿಗಳ ದಿನ ಎಲ್ಲರೂ ತಮ್ಮ ಪ್ರೀತಿಯನ್ನು ಸೆಲೆಬ್ರೇಟ್ ಮಾಡಬೇಕಾದ್ರೆ ಗಿಫ್ಟ್ ಇಲ್ಲದಿದ್ರೆ ಹೇಗೆ ಅಲ್ವಾ..? ಅದಕ್ಕೆ ‘ಮ್ಯಾಟ್ನಿ’ ಸಿನಿಮಾ ಬ್ಯೂಟಿಫುಲ್ ಆ್ಯಂಡ್ ಕಲರ್ ಫುಲ್ ಟೀಸರ್ ಪ್ರೇಮಿಗಳಿಗೆ ಉಡುಗೊರೆ ನೀಡಿದೆ. ಕಲರ್ ಫುಲ್ ಸೆಟ್, ಮನ ಸೆಳೆಯೋ ಬ್ಯಾಗ್ರೌಂಡ್ ಮ್ಯೂಸಿಕ್, ರಚ್ಚು ಲುಕ್ ಎಲ್ಲವೂ ಕಣ್ಣಿಗೆ ಹಬ್ಬ ನೀಡುತ್ತಿದ್ರೆ, ಸತೀಶ್ ನೀನಾಸಂ ಪ್ರೇಮ ನಿವೇದನೆ, ಪ್ರೀತಿಯ ಸಾಲುಗಳು ಕಣ್ಮನ ಸೆಳೆಯುತ್ತಿವೆ. ಒಟ್ಟಿನಲ್ಲಿ ಮ್ಯಾಟ್ನಿ ಚಿತ್ರತಂಡದಿಂದ ಪ್ರೇಮಿಗಳಿಗೆ ಹೇಳಿ ಮಾಡಿಸಿದ ಕಲರ್ ಫುಲ್ ಉಡುಗೊರೆ ಅಂದ್ರೆ ತಪ್ಪಾಗೋದಿಲ್ಲ. ಟೀಸರ್ ಕಂಡು ಮೆಚ್ಚುಗೆಯ ಮಳೆಗಯ್ಯುತ್ತಿದ್ದಾರೆ ಸಿನಿರಸಿಕರು. ಇದನ್ನೂ ಓದಿ: ‘ಅದ್ದೂರಿ ಲವರ್’ ಸ್ಟೈಲಿಶ್ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿದ ನಿರ್ದೇಶಕ ಎ.ಪಿ ಅರ್ಜುನ್

ಮನೋಹರ್ ಕಾಂಪಲಿ ಇಬ್ಬರು ಸ್ಟಾರ್ ಜೋಡಿಗೆ ಸರಿ ಹೊಂದುವಂತಹ ಒಂದೊಳ್ಳೆ ಕಥೆ ಹೆಣೆದಿದ್ದು ನಿರ್ದೇಶಕನಾಗಿ ತಮ್ಮನ್ನು ಸಹ ಪ್ರೂವ್ ಮಾಡಿಕೊಳ್ಳಲು ಸಕಲ ತಯಾರಿ ಮಾಡಿಕೊಂಡಿದ್ದಾರೆ. ರೋಮ್ಯಾಂಟಿಕ್ ಲವ್ ಸ್ಟೋರಿ ಸಬ್ಜೆಕ್ಟ್ ಇರುವ ಮ್ಯಾಟ್ನಿ ಚಿತ್ರದಲ್ಲಿ ಸತೀಶ್ ನೀನಾಸಂ ಶ್ರೀಮಂತ ಮನೆತನದ ಹುಡುಗನ ಪಾತ್ರಕ್ಕೆ ಬಣ್ಣಹಚ್ಚಿದ್ದು, ಲವರ್ ಬಾಯ್ ಅವತಾರವೆತ್ತಿದ್ದಾರೆ. ಈಗಾಗಲೇ ಅಯೋಗ್ಯ ಸಿನಿಮಾದಲ್ಲಿ ಸತೀಶ್ ಹಾಗೂ ರಚ್ಚು ಜೋಡಿ ಹಿಟ್ ನೀಡಿದ್ದು, `ಮ್ಯಾಟ್ನಿ’ ಸಿನಿಮಾದಲ್ಲೂ ಈ ಜೋಡಿ ಮೋಡಿ ಮಾಡಲಿದೆ ಎನ್ನುವ ನಿರೀಕ್ಷೆಯೂ ಹೆಚ್ಚಿದೆ. ಸದ್ಯ ಇದೊಂದು ಲವ್ ಸ್ಟೋರಿ ಎಂದಿರುವ ನಿರ್ದೇಶಕರು ಸಿನಿಮಾ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಈಗಾಗಲೇ ಮೂರು ಹಂತದ ಚಿತ್ರೀಕರಣ ಯಶಸ್ವಿಯಾಗಿ ಕಂಪ್ಲೀಟ್ ಮಾಡಿ ನಾಲ್ಕನೇ ಶೆಡ್ಯೂಲ್ ಚಿತ್ರೀಕರಣವನ್ನು ಬೆಂಗಳೂರಿನ ಹೊರವಲಯದಲ್ಲಿ ಭರ್ಜರಿಯಾಗಿ ನಡೆಸುತ್ತಿದೆ ಚಿತ್ರತಂಡ. ಇದನ್ನೂ ಓದಿ: ಒಂದೇ ವೇದಿಕೆಯಲ್ಲಿ ನವರಸ ನಾಯಕ ಹಾಗೂ ವಿದೇಶಿ ಕನ್ನಡಿಗರು: ಗ್ರ್ಯಾಂಡ್ ಸಕ್ಸಸ್ ಕಂಡ ವರ್ಚ್ಯುಯಲ್ ಕಾರ್ಯಕ್ರಮ..!!

ಎಫ್ 3 ಪ್ರೊಡಕ್ಷನ್ಸ್ ಬ್ಯಾನರ್ ನಡಿ ಪಾರ್ವತಿ ಎಸ್ ಗೌಡ ಚಿತ್ರವನ್ನು ನಿರ್ಮಿಸಿದ್ದು, ಲೂಸಿಯ ಖ್ಯಾತಿಯ ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ, ಸುಧಾಕರ್ ಸಿನಿಮಾಟೋಗ್ರಫಿ. ಕೆ.ಎಂ.ಪ್ರಕಾಶ್ ಸಂಕಲನ ಚಿತ್ರಕ್ಕಿದೆ.

Share This Article
Leave a Comment

Leave a Reply

Your email address will not be published. Required fields are marked *