ಹಿಜಬ್-ಕೇಸರಿ ವಿವಾದ – ನಿಮ್ಮ ಮಕ್ಕಳನ್ನು ದುರುಪಯೋಗಪಡಿಸಿಕೊಂಡು ಅಂತಿಮವಾಗಿ ದಾರಿ ತಪ್ಪಿಸುತ್ತಾರೆ: ಹೆಚ್‍ಡಿಕೆ

By
1 Min Read

ಹಾಸನ: ಹಿಜಬ್-ಕೇಸರಿ ವಿವಾದದ ಬಗ್ಗೆ ನಿಮ್ಮ ಮಕ್ಕಳನ್ನು ದುರುಪಯೋಗಪಡಿಸಿಕೊಂಡು ಅಂತಿಮವಾಗಿ ದಾರಿ ತಪ್ಪಿಸುತ್ತಾರೆ. ಇದರ ಬಗ್ಗೆ ನಿಮ್ಮ ಮಕ್ಕಳಿಗೆ ತಿಳುವಳಿಕೆ ಹೇಳಿ ಎಂದು ಪೋಷಕರಿಗೆ ಮಾಜಿ ಸಿಎಂ ಹೆಚ್‍ಡಿ.ಕುಮಾರಸ್ವಾಮಿ ತಿಳುವಳಿಕೆ ಹೇಳಿದ್ದಾರೆ.

ಹಿಜಾಬ್ ಮತ್ತು ಕೇಸರಿ ವಿವಾದದ ಬಗ್ಗೆ ಹಾಸನದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗೆ ಕಳುಹಿಸುವ ಪೋಷಕರಿಗೆ ವಿಶೇಷವಾಗಿ ಹೇಳುತ್ತೇನೆ. ನಿಮ್ಮ ಮಕ್ಕಳನ್ನು ದುರುಪಯೋಗಪಡಿಸಿಕೊಂಡು ಅಂತಿಮವಾಗಿ ದಾರಿ ತಪ್ಪಿಸುತ್ತಾರೆ. ಆ ಮಕ್ಕಳ ಭವಿಷ್ಯ ಹಾಳು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆ ಸಂಘಟನೆ ಈ ಸಂಘಟನೆ ಅಂತಾ ಹೇಳಲ್ಲ. ಆದರೆ ಇದರ ಬಗ್ಗೆ ಮಕ್ಕಳಿಗೆ ತಿಳುವಳಿಕೆ ಹೇಳಿ. ಚಿಕ್ಕ ವಯಸ್ಸಿನಲ್ಲೇ ದ್ವೇಷದ ಮನೋಭಾವನೆ ಬೆಳೆಸುವಂತದ್ದು, ಸಮಾಜವನ್ನು ದಾರಿ ತಪ್ಪಿಸುವದಕ್ಕೆ ಯಾರೂ ಬಲಿಯಾಗುವುದು ಬೇಡ ಪ್ರೋತ್ಸಾಹ ಕೊಡುವುದು ಬೇಡ. ಸರ್ಕಾರ ಆರಂಭಿಕ ಹಂತದಲ್ಲಿ ವಿವಾದವನ್ನು ಮೊಟುಕುಗೊಳಿಸಬಹುದಿತ್ತು. ಉಡುಪಿ ಭಾಗದ ಒಂದು ಶಾಲೆಯಲ್ಲಿ ಆರಂಭವಾದಾಗಲೇ ಮೊಟುಕುಗೊಳಿಸಿದ್ದರೆ ಈ ಸಮಸ್ಯೆಗಳು ಉದ್ಬವ ಆಗುತ್ತಿರಲಿಲ್ಲಾ ಎಂದು ಕಳವಳ ವ್ಯಕ್ತಪಡಿಸಿದರು. ಇದನ್ನೂ ಓದಿ: ಮುಗಿಯದ ಸಮವಸ್ತ್ರ ಸಮರ – ವಿವಿಧ ಜಿಲ್ಲೆಗಳಲ್ಲಿ ಹಿಜಬ್ ಧರಿಸಿ ಶಾಲೆಗೆ ಬಂದ ವಿದ್ಯಾರ್ಥಿನಿಯರು

ಹಿಜಾಬ್ ವಿವಾದ ಎಂಟರಿಂದ ಹತ್ತು ಜಿಲ್ಲೆಗಳಲ್ಲಿ ವ್ಯವಸ್ಥಿತವಾಗಿ ಆರಂಭವಾಗಿದೆ. ಒಂದು ಸಮಾಜದ ಮೇಲೆ ಬೊಟ್ಟು ಮಾಡಲ್ಲ. ಎಲ್ಲಾ ಸಮಾಜದ ಹಲವಾರು ಸಂಘಟನೆಗಳ ಪಾತ್ರ ಇದರಲ್ಲಿದೆ. ಇದರ ಹಿಂದೆ ರಾಷ್ಟ್ರೀಯ ಪಕ್ಷಗಳ ಕುತಂತ್ರವಿದೆ. ಇದಕ್ಕೆ ಜನ ಬಲಿಯಾಗಬಾರದು, ನಮಗೆ ಬೇಕಿರುವುದು ಬದುಕು. ಆ ಬದುಕನ್ನು ಕಟ್ಟುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬೇಕು. ಪ್ರತಿಯೊಂದು ಕುಟುಂಬಗಳು ನೆಮ್ಮದಿಯಿಂದ ಬದುಕಬೇಕು. ಈ ನಿಟ್ಟಿನಲ್ಲಿ ಸರ್ಕಾರಗಳು ಕೆಲಸ ಮಾಡಬೇಕೆ ಹೊರತು ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡುವಂತಹ ಕೆಲಸ ಮಾಡಬಾರದು. ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲು ಕೇಂದ್ರ, ರಾಜ್ಯ ಸರ್ಕಾರಗಳಿಗೆ ವಿಷಯಗಳಿಲ್ಲ ಎಂದು ಕಿಡಿಕಾರಿದ್ದಾರೆ.  ಇದನ್ನೂ ಓದಿ: ಹೆಲ್ಮೆಟ್ ಹಾಕಿದ್ರೆ ಸೇಫ್ಟಿ ಅಲ್ವಾ ಅದ್ಕೆ ಹಿಜಬ್ ಹಾಕಿದ್ರೆ ಸೇಫ್ಟಿ ಅಂದಿದ್ದು: ಜಮೀರ್ ಸಮರ್ಥನೆ

Share This Article
Leave a Comment

Leave a Reply

Your email address will not be published. Required fields are marked *