ಜಾತಿಗಳನ್ನು ಬಿಟ್ಟು ಒಗ್ಗಟ್ಟಾಗಿ ಹೋಗೋಣ ಅಂತಾರೆ ಇನ್ನೊಂದೆಡೆ ಎತ್ತಿಕಟ್ಟಿ ಬೆಂಕಿ ಹಚ್ಚುತ್ತಾರೆ: ನಾರಾಯಣ ಸ್ವಾಮಿ

Public TV
2 Min Read

ಬೆಂಗಳೂರು: ಸಿದ್ದರಾಮಯ್ಯ ಜಾತಿ ಗಣತಿ ಮಾಡಿಸಿದ್ರು ಆದರೆ ಅದನ್ನು ಪ್ರಕಟ ಮಾಡಲಿಲ್ಲ. ಜಾತಿಗಳನ್ನು ಬಿಟ್ಟು ಒಗ್ಗಟ್ಟಾಗಿ ಹೋಗೋಣ ಅನ್ನೋದು ಒಂದು ಕಡೆ. ಇನ್ನೊಂದು ಕಡೆ ಜಾತಿಗಳನ್ನು ಎತ್ತಿಕಟ್ಟಿ ಬೆಂಕಿ ಹಚ್ಚುವ ಕೆಲಸ ಆಗುತ್ತಿದೆ ಎರಡು ಕೆಲಸ ಅವರೇ ಮಾಡುತ್ತಾರೆ ಎಂದು ಬಿಜೆಪಿ ಎಸ್‍ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಈ ವರ್ಷದ ಬಜೆಟ್ ಮುಂದಿನ ತಿಂಗಳು ಮಂಡನೆಯಾಗಲಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಮೀಸಲಿಡುವ ಹಣದಲ್ಲಿ ಉತ್ತಮ ಕಾರ್ಯ ಮಾಡುವ ಬಗ್ಗೆ ಚರ್ಚೆ ಮಾಡಿದ್ದೆವು. ಸಮುದಾಯದ ಮುಖಂಡರ ಜೊತೆ ಚರ್ಚೆ ನಡೆಸಿದ್ದೇವೆ. ಕಳೆದ ಬಾರಿ ಬಿಎಸ್ ವೈ ಯಡಿಯೂರಪ್ಪ ಸಿಎಂ ಆಗಿದ್ದಾಗಲೂ ಸಭೆ ಮಾಡಿ ಮನವಿ ಮಾಡಿದ್ದೇವು. ಅದರಂತೆ ಕೆಲವು ಬೇಡಿಕೆ ಈಡೇರಿಸಿದ್ದಾರೆ. ಅದರಂತೆ ಈ ಬಾರಿಯೂ ಹಲವು ಬೇಡಿಕೆಗಳ ಬಗ್ಗೆ ಸಿಎಂ ಗಮನಕ್ಕೆ ತರುತ್ತೇವೆ. ಸಮುದಾಯದ ಯುವಕರಿಗೆ ಉದ್ಯೋಗದ ಬಗ್ಗೆಯೂ ಮನವಿ ಮಾಡುತ್ತೇವೆ. ಸಿ.ಟಿ.ರವಿಯವರನ್ನು ಭೇಟಿ ಮಾಡಿ ಅವರ ಗಮನಕ್ಕೂ ತಂದು ಅವರೊಂದಿಗೆ ಸಿಎಂಗೆ ಮನವಿ ನೀಡುತ್ತೇವೆ ಎಂದರು. ಇದನ್ನೂ ಓದಿ: ಕೆಲವರು ವಯಸ್ಸಾಗಿ ನಿಶಕ್ತರಾದರೆ, ಇನ್ನೂ ಕೆಲವರು ರಾಜಕೀಯ ನಿಶಕ್ತರಾಗುತ್ತಿದ್ದಾರೆ : ಸಿದ್ದರಾಮಯ್ಯಗೆ ಇಬ್ರಾಹಿಂ ಟಾಂಗ್‌

ಹಿಂದುಳಿದ ವರ್ಗಗಳ ಜಾತಿ ಸಮೀಕ್ಷೆ ವಿಚಾರವಾಗಿ ಮಾತನಾಡಿ, ಸರ್ವರನ್ನೂ ಸಮನಾಗಿ ನೋಡಬೇಕಾಗಿದೆ. ಜನಗಣತಿ ಮಾಡುವುದರಲ್ಲೇ ಎಲ್ಲವೂ ಸಿಗುತ್ತೆ. ಮತ್ಯಾಕೆ ಜಾತಿ ಗಣತಿ ಬೇಕು?. ಸರ್ಕಾರಕ್ಕೆ ಒತ್ತಾಯ ಮಾಡುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಇದ್ದಾಗ ಯಾಕೆ ರಿಲೀಸ್ ಮಾಡಲಿಲ್ಲ. ಸಿದ್ದರಾಮಯ್ಯ ಜಾತಿಗಣತಿ ಮಾಡಿದ್ದೇ ತಪ್ಪು ಅನ್ನೋ ಹಂಗಾಯ್ತಲ. ಸಿದ್ದರಾಮಯ್ಯ ಮಾಡಿಸಿದ್ದ ಜಾತಿ ಗಣತಿ ಸರಿ ಇದೆ ಅಂತ ಯಾರು ಹೇಳಿದ್ದು ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ರಾಜರ ವಂಶವನ್ನು ನಾಶ ಮಾಡಲು ಹೋದ ಟಿಪ್ಪು ಸುಲ್ತಾನ್ ಹೆಸರು ರೈಲಿಗೆ ಯಾಕೆ?: ಪ್ರತಾಪ್ ಸಿಂಹ

ಈ ವರ್ಷದ ಬಜೆಟ್‍ನಲ್ಲಿ ಪರಿಶಿಷ್ಟ ಜಾತಿ ವರ್ಗಗಳಿಗೆ ಮೀಸಲಿಟ್ಟ ಹಣದಲ್ಲಿ ಉತ್ತಮ ಕಾರ್ಯಗಳಿಗೆ ಬಳಸಬೇಕು. ಹೀಗಾಗಿ ನಮ್ಮ ಸಮುದಾಯದ ಮುಖಂಡರ ಜೊತೆ ಸಭೆ ನಡೆಸಿದ್ದೇವೆ. ಬೊಮ್ಮಾಯಿ ಅವರ ಮುಂದೆ ಹಲವು ಮನವಿ ಸಲ್ಲಿಸಿದ್ದೇವೆ. ಹರಿಯಾಣ ಮಾದರಿಯಲ್ಲಿ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ವರ್ಗಗಳ ಬೆಳವಣಿಗೆಗೆ ಸಹಕರಿಸಬೇಕಾಗಿದೆ. ಭೂಮಿ, ವಸತಿ ಕೊಡಬೇಕು ಎಂಬ ಸಲಹೆ ಬಂದಿದೆ ಈ ಬಗ್ಗೆ ಸಿಎಂ ಜೊತೆ ಚರ್ಚಿಸುತ್ತೇವೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *