ಕೆಲವರು ವಯಸ್ಸಾಗಿ ನಿಶಕ್ತರಾದರೆ, ಇನ್ನೂ ಕೆಲವರು ರಾಜಕೀಯ ನಿಶಕ್ತರಾಗುತ್ತಿದ್ದಾರೆ : ಸಿದ್ದರಾಮಯ್ಯಗೆ ಇಬ್ರಾಹಿಂ ಟಾಂಗ್‌

Public TV
2 Min Read

ದಾವಣಗೆರೆ: ಸಿದ್ದರಾಮಯ್ಯ ಅವರು ನಿಸ್ಸಹಾಯಕರಾಗಿದ್ದಾರೆ. ಸಿದ್ದರಾಮಯ್ಯ ಈ ರೀತಿ ಆಗಿದ್ದಕ್ಕೆ ಸಾಕಷ್ಟು ನೋವು ಇದೆ ಎಂದು ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಪ್ರತಿಕ್ರಿಯೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ವಯಸ್ಸಾಗಿ ನಿಶಕ್ತರಾದರೆ, ಇನ್ನೂ ಕೆಲವರು ರಾಜಕೀಯ ನಿಶಕ್ತರಾಗುತ್ತಿದ್ದಾರೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ರಾಜಕೀಯವಾಗಿ ನಿಶಕ್ತರಾಗುತ್ತಿದ್ದಾರೆ ಎಂದು ಹೇಳಿದ ಅವರು ಡಿಕೆಶಿಗೆ ಕೇಳಿದರೆ ಮೇಲಿನವರ ಕಡೆ ತೋರಿಸುತ್ತಾರೆ ಎಂದರು.

ಸೆಷನ್ ಆದ ನಂತರ ರಾಜೀನಾಮೆ: ನಮ್ಮದು ಲವ್ ಮ್ಯಾರೇಜ್ ಅಲ್ಲ ಅರೆಂಜ್ ಮ್ಯಾರೇಜ್ ಎಂದ ಅವರು, ಮನವೊಲಿಸುವುದರಿಂದ ಏನು ಇಲ್ಲ, ಹೈಕಮಾಂಡ್ ಸೂಕ್ತ ಪರಿಹಾರ ಕಂಡುಕೊಳ್ಳಬೇಕಿದೆ. ಇಂದು ಮಧ್ಯಾಹ್ನ ಮೂರು ಗಂಟೆಗೆ ಹುಬ್ಬಳ್ಳಿಯಲ್ಲಿ ಸಭೆ ನಡೆಸುತ್ತೇವೆ. ಬೆಳಗಾವಿಯಲ್ಲಿ ಸಭೆ ಮಾಡಿ ನಂತರ ನನ್ನ ಮುಂದಿನ ನಿರ್ಧಾರ ಮಾಡುತ್ತೇವೆ. ಗೋ ಹತ್ಯೆ ಬಿಲ್ ಮಂಡನೆ ಇದೆ ನಾನು ರಾಜಿನಾಮೆ ನೀಡಿದರೆ ನನ್ನ ಮೇಲೆ ಗೂಬೆ ಕೂರಿಸುತ್ತಾರೆ. ಆದ್ದರಿಂದ ಸೆಷನ್ ಆದ ನಂತರ ರಾಜೀನಾಮೆ ಕೊಡಲು ನಿರ್ಧಾರ ಮಾಡಿದ್ದೇನೆ ಎಂದು ಹೇಳಿದರು.

ನನಗೆ ಮಮತಾ ಬ್ಯಾನರ್ಜಿ, ಆಖಿಲೇಶ್ ಯಾದವ್ ಸೇರಿದಂತೆ ಹಲವರು ಕರೆ ಮಾಡಿದ್ದಾರೆ. ಮುಂದೆ ಸಮ್ಮಿಶ್ರ ಸರ್ಕಾರ ಬರುತ್ತದೆ ಹೊರೆತು ಯಾವ ಪಕ್ಷಕ್ಕೂ ಪೂರ್ತಿ ಮೆಜಾರ್ಟಿ ಬರುವುದಿಲ್ಲ ಎಂದ ಅವರು, ನನ್ನನ್ನು ರಾಜಕೀಯ ಪ್ರಚಾರಕ್ಕಾಗಿ ಮಾತ್ರ ಬಳಸಿಕೊಂಡಿದ್ದಾರೆ. ಕೌನ್ಸಿಲ್‍ನಲ್ಲಿ 21 ಜನ ಇದ್ದರೂ 19 ಜನ ನನ್ನ ಪರ ಇದ್ದರು. ಆದರೆ ವಿರೋಧ ಪಕ್ಷ ಸ್ಥಾನ ನೀಡದಿದ್ದಾಗ ಯಾವುದಕ್ಕೂ ಬಳಸಿಕೊಳ್ಳುತ್ತಾರೆ ಎನ್ನುವುದು ನಿಮಗೆ ಗೊತ್ತಾಗುತ್ತದೆ. ನಮ್ಮ ಶಕ್ತಿ ನಮ್ಮ ಶತ್ರು ಆಗಿದೆ. ಕಾಂಗ್ರೆಸ್‍ನಿಂದ ಬಹಳಷ್ಟು ಜನರು ಬರುವವರಿದ್ದಾರೆ. ಡ್ಯಾಂ ಒಡೆದಾಗ ಹೇಗೆ ನೀರು ಬರುತ್ತದೆಯೋ ಅದೇ ರೀತಿ ಕಾಂಗ್ರೆಸ್‍ನಲ್ಲಿದ್ದವರು ಬರುತ್ತಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ರಾಜರ ವಂಶವನ್ನು ನಾಶ ಮಾಡಲು ಹೋದ ಟಿಪ್ಪು ಸುಲ್ತಾನ್ ಹೆಸರು ರೈಲಿಗೆ ಯಾಕೆ?: ಪ್ರತಾಪ್ ಸಿಂಹ

ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ: ರಾಜ್ಯದಲ್ಲಿ ಬಿಜೆಪಿ ಕಥೆ ಮುಗಿದಿದೆ. ಸುಡಬೇಕೋ ಉಳಬೇಕೋ ಎನ್ನುವುದೇ ಸದ್ಯ ಇರುವ ಪ್ರಶ್ನೆಯಾಗಿದೆ. ಬಸವಕೃಪಾ (ಲಿಂಗಾಯತ) ಆದರೆ ಉಳಬೇಕು. ಕೇಶವ ಕೃಪಾ (ಆರ್‌ಎಸ್‍ಎಸ್)ಆದರೆ ಸುಡಬೇಕು ಎಂಬ ಸ್ಥಿತಿ ಇದೆ. ಸಿಎಂ ಬಸವರಾಜ್ ಬೊಮ್ಮಾಯಿ ಒಂದು ರೀತಿ ಪಂಚರ್ ಆದ ಬಸ್ಸಾಗಿದ್ದಾರೆ. ಯಾವಾಗ ಏನಾಗುತ್ತೋ ಗೊತ್ತಿಲ್ಲ. ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರಲಿದೆ ಎಂದು ಭವಿಷ್ಯ ನುಡಿದರು.

ಬಿಜೆಪಿ ಅವರಿಗೆ ರಾಮ್ ಮಂದಿರ ಆಯಿತು, ಗೋ ಹತ್ಯೆ ಆಯಿತು. ಈಗ ಹಿಜಬ್ ಹಿಡಿದಿದ್ದಾರೆ. ಹಿಜಬ್ ಅಂದರೆ ಅರ್ಥವೇ ಬಿಜೆಪಿಗೆ ಗೊತ್ತಿಲ್ಲ. ಮಾರವಾಡಿ ಮಹಿಳೆಯರು ಮುಖದ ತುಂಬ ಶರಗು ಹೊತ್ತುಕೊಳ್ಳುತ್ತಾರೆ. ಅದು ತಪ್ಪಾ ಸಮವಸ್ತ್ರ ಮಾಡಲಿ. ಮಕ್ಕಳು ವೇಲ್ ಹೆಗಲಮೇಲೆ ಹಾಕಿಕೊಳ್ಳುತ್ತಾರೆ. ಅದೇ ವೇಲ್ ತಲೆ ಮೇಲೆ ಹಾಕಿಕೊಂಡರೇ ಏನು ಕಷ್ಟಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ:  ಸ್ವಾತಂತ್ರ್ಯ ಪೂರ್ವದಿಂದಲೂ ಹಿಜಬ್‌ ಧರಿಸುತ್ತಿದ್ದಾರೆ: ಜಮೀರ್ ಅಹ್ಮದ್

ವಿಎಸ್ ಉಗ್ರಪ್ಪಗೆ ಗಂಡಸೇ ಆಗಿದ್ದರೇ ನನ್ನ ವಿರುದ್ಧ ವಕ್ಫ ಆಸ್ತಿ ಕಬಳಿಸಿದ್ದರ ಕುರಿತು ಆರೋಪ ಮಾಡಿರುವ ಸಾಬೀತು ಪಡಿಸಲಿ ಎಂದು ಸವಾಲೆಸೆದ ಅವರು, ರಾಜ್ಯ ಸರ್ಕಾರ ಈ ಹಿಂದೆ ಅನ್ವರ್ ಮಾನ್ಪಡೆ ಅವರ ನೇತೃತ್ವದಲ್ಲಿ ಸಿದ್ಧಪಡಿಸಿದ ವರದಿ ಸಿಬಿಐ ಕೊಡಲಿ ಎಂದು ವಾಗ್ದಾಳಿ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *