ಹಿಜಬ್ ವಿವಾದದ ಹಿಂದೆ ಇರುವುದು ಕಾಂಗ್ರೆಸ್ ಪಕ್ಷ ಎನ್ನುವುದಕ್ಕೆ ಈಗ ಇನ್ನೊಂದು ಸಾಕ್ಷ್ಯ ಲಭಿಸಿದೆ: ಬಿಜೆಪಿ

Public TV
2 Min Read

ಬೆಂಗಳೂರು: ಹಿಜಬ್ ವಿವಾದದ ಹಿಂದೆ ಇರುವುದು ಕಾಂಗ್ರೆಸ್ ಪಕ್ಷ ಎನ್ನುವುದಕ್ಕೆ ಈಗ ಇನ್ನೊಂದು ಸಾಕ್ಷ್ಯ ಲಭಿಸಿದೆ. ಹಿಜಬ್ ಧರಿಸುವುದನ್ನು ಮೂಲಭೂತ ಹಕ್ಕು ಎಂದು ಗುರುತಿಸಬೇಕೆಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ರಿಂದ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಕೆಯಾಗಿರುವುದಕ್ಕೆ ಬಿಜೆಪಿ ಟ್ವಿಟ್ಟರ್ ಮೂಲಕ ವಾಗ್ದಾಳಿ ನಡೆಸಿದೆ.

BJP - CONGRESS

ಟ್ವೀಟ್‍ನಲ್ಲಿ ಏನಿದೆ?
ಆರಂಭದಿಂದಲೂ ಹಿಜಾಬ್ ಪರವಾಗಿ ಹೋರಾಡಲು ಕಾಂಗ್ರೆಸ್ ತನ್ನ ಕಾರ್ಯಕರ್ತರಿಗೆ ಕರೆ ನೀಡಿತ್ತು ಮತ್ತು ಪಕ್ಷದ ಪ್ರಮುಖ ವಕೀಲನನ್ನೇ ನೇಮಿಸಿತ್ತು.  ಸಿದ್ದರಾಮಯ್ಯ ಅವರ ವಾದ ಸರಣಿಯ ಮುಂದುವರಿದ ಭಾಗ ಇದು ಎಂದು ಕಿಡಿಕಾರಿದೆ. ಇದನ್ನೂ ಓದಿ: ಹಿಜಬ್ ಧರಿಸಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳು – ಪ್ರವೇಶ ನಿರಾಕರಿಸಿದ ಕಾಲೇಜ್

ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತು ಆತನ ಸಾಧನೆಗಳು. IPC section 307 (ಕೊಲೆ ಯತ್ನ), IPC 341 (ಸಂಯಮ ಮೀರಿದ ವರ್ತನೆ), IPC 506 (ಕ್ರಿಮಿನಲ್ ಬೆದರಿಕೆ), IPC 143 & 144 (ಅಕ್ರಮ ಗುಂಪುಗೂಡುವುದು), IPC 146 & 147 (ಗಲಭೆ), IPC 326 (ಮಾರಕಾಯುಧಗಳಿಂದ ದಾಳಿ), IPC 504 (ಶಾಂತಿಭಂಗಕ್ಕೆ ಪ್ರಚೋದನೆ) ಇದು ಯುವ ಕಾಂಗ್ರೆಸ್ಸೋ ಅಥವಾ ರೌಡಿ ಕಾಂಗ್ರೆಸ್ಸೋ!?. ಇದನ್ನೂ ಓದಿ: ಹಿಜಬ್- ಕೇಸರಿ ಶಾಲು ವಿವಾದ- ಹೋರಾಟಕ್ಕಾಗಿಯೇ ವಿದ್ಯಾರ್ಥಿಗಳು ಟ್ವಿಟ್ಟರ್ ಖಾತೆ ಓಪನ್..!

ಮಹಮ್ಮದ್ ನಲಪಾಡ್ ಅವರನ್ನು ರೌಡಿ ಚಟುವಟಿಕೆಯ ಕಾರಣಕ್ಕಾಗಿ 2018ರಲ್ಲಿ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲಕ್ಕೆ ಕೆಪಿಸಿಸಿ ಅಧ್ಯಕ್ಷರು ಉಚ್ಚಾಟನೆ ಮಾಡಿದ್ದರು. ಅದೇ ನಲಪಾಡ್ ಕೇವಲ 4 ವರ್ಷಗಳಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರಾಗುತ್ತಾರೆ. ಎಂತಹ ವೈಚಿತ್ರ್ಯವಿದು!?. ಒಮ್ಮೆ ತಲೆ ಕಡಿಯುತ್ತೇನೆ ಎನ್ನುತ್ತಾರೆ, ಮತ್ತೊಬ್ಬರ ಕಾಲು ಮುರಿಯುತ್ತಾರೆ, ಮಗದೊಮ್ಮೆ ಅಮಾಯಕರ ಗುರುತು ಸಿಗದಂತೆ ಮುಖ ಜಜ್ಜುತ್ತಾರೆ. ಅದೇ ವ್ಯಕ್ತಿ ಈಗ ಯುವ ಕಾಂಗ್ರೆಸ್ ಅಧ್ಯಕ್ಷ!!!. ದೇಶಕ್ಕೆ ಕಾಂಗ್ರೆಸ್ ಪಕ್ಷ ಯಾವ ಸಂದೇಶ ನೀಡುತ್ತಿದೆ?. ಗುರುವಿಗೆ ತಕ್ಕ ಶಿಷ್ಯ. ಕೆಪಿಸಿಸಿ ಅಧ್ಯಕ್ಷರಿಗೆ ಕೊತ್ವಾಲ್ ಗ್ಯಾಂಗ್ ಶ್ರೀರಕ್ಷೆಯಿತ್ತು. ಯುವ ಕಾಂಗ್ರೆಸ್ ನೂತನ ಅಧ್ಯಕ್ಷರಿಗೆ ಬಿಟ್ ಕಾಯಿನ್ ಗ್ಯಾಂಗ್ ನಂಟು. ಇದನ್ನೂ ಓದಿ: ಕೇಸರಿ ಶಾಲು, ಹಿಜಬ್ ಧರಿಸುವಂತಿಲ್ಲ : ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಏನಿದೆ?

Share This Article
Leave a Comment

Leave a Reply

Your email address will not be published. Required fields are marked *