ಮುಂಬೈ ಸರಣಿ ಸ್ಫೋಟ ಪ್ರಕರಣದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಅರೆಸ್ಟ್

Public TV
1 Min Read

ಅಬುಧಾಬಿ: 1993ರಲ್ಲಿ ನಡೆದ ಮುಂಬೈ ಸರಣಿ ಸ್ಫೋಟಕ್ಕೆ ಸಂಬಂಧಪಟ್ಟ ಆರೋಪಿ ಅಬು ಬಕರ್‌ನನ್ನು ಭಾರತೀಯ ಏಜೆನ್ಸಿಗಳು ಸಂಯುಕ್ತ ಅರಬ್ ಸಂಸ್ಥಾನದಲ್ಲಿ(ಯುಎಇ) ಬಂಧಿಸಿದ್ದಾರೆ.

1993ರ ಸರಣಿ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಅಬು ಬಕರ್‌ನನ್ನು 29 ವರ್ಷಗಳ ಬಳಿಕ ಬಂಧಿಸುವಲ್ಲಿ ಭಾರತೀಯ ಏಜೆನ್ಸಿಗಳು ಯಶಸ್ವಿಯಾಗಿದ್ದಾರೆ. ಮುಂಬೈನ 12 ಸ್ಥಳಗಳಲ್ಲಿ ನಡೆದ ಸ್ಫೋಟದಲ್ಲಿ ಅಬು ಬಕರ್ ಭಾಗಿಯಾಗಿದ್ದ. ಈ ಸ್ಫೋಟಗಳಿಂದಾಗಿ 257 ಜನರು ಸಾವನ್ನಪ್ಪಿದ್ದರು. ಇದನ್ನೂ ಓದಿ: ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ  ಇಬ್ರಾಹಿಂ ಸುತಾರ ನಿಧನ

ಅಬು ಬಕರ್ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳ ತರಬೇತಿ, ಸ್ಫೋಟಕ್ಕೆ ಬಳಸುವ ಆರ್‌ಡಿಎಕ್ಸ್ ಲ್ಯಾಂಡಿಂಗ್ ಹಾಗೂ ದುಬೈನಲ್ಲಿರುವ ದಾವೂದ್ ಇಬ್ರಾಹಿಂ ನಿವಾಸದಲ್ಲಿ ಪಿತೂರಿಗಳಲ್ಲಿ ತೊಡಗಿದ್ದ ಎಂದು ಹೇಳಲಾಗಿದೆ. ಇದನ್ನೂ ಓದಿ: ಗೋವಾ ಚುನಾವಣೆಯಲ್ಲಿ ಬಿಜೆಪಿ – ಕಾಂಗ್ರೆಸ್ ನೇರ ಪೈಪೋಟಿ: ರಾಹುಲ್ ಗಾಂಧಿ

ಯುಎಇ ಹಾಗೂ ಪಾಕಿಸ್ತಾನದಲ್ಲಿ ನೆಲೆಸಿದ್ದ ಅಬು ಬಕರ್‌ನನ್ನು ಭಾರತೀಯ ಏಜೆನ್ಸಿಗಳು ಬಂಧಿಸಿದ್ದಾರೆ. 2019ರಲ್ಲಿ ಒಮ್ಮೆ ಬಕರ್‌ನನ್ನು ಬಂಧಿಸಲಾಗಿತ್ತು. ಆದರೆ ಕೆಲವು ದಾಖಲಾತಿ ಸಮಸ್ಯೆಗಳಿಂದ ಅವನನ್ನು ಬಂಧನದಿಂದ ಮುಕ್ತಗೊಳಿಸಬೇಕಾಯಿತು.

Share This Article
Leave a Comment

Leave a Reply

Your email address will not be published. Required fields are marked *