ಜನಸ್ನೇಹಿ ಬಜೆಟ್, ಎಲ್ಲರಿಗೂ ಸಹಾಯವಾಗುವ ಕಾರ್ಯಕ್ರಮಗಳು: ಆರ್.ಅಶೋಕ್

Public TV
1 Min Read

ಬೆಂಗಳೂರು: ಜನಸ್ನೇಹಿ ಬಜೆಟ್, ಎಲ್ಲರಿಗೂ ಸಹಾಯವಾಗುವ ಕಾರ್ಯಕ್ರಮಗಳು ಎಂದು ಕಂದಾಯ ಸಚಿವ ಆರ್.ಅಶೋಕ್ ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಕೇಂದ್ರ ಬಜೆಟ್ ಮಂಡನೆ ಕುರಿತು ಅಶೋಕ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಕೃಷಿಕರು, ಉದ್ದಿಮೆದಾರರು, ಯುವಕರಿಗೆ ಸಹಾಯವಾಗುವ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ ಅತ್ಯಂತ ಜನಸ್ನೇಹಿ ಬಜೆಟ್. ಎಲ್ಲ ಕ್ಷೇತ್ರಗಳಲ್ಲಿ ಆತ್ಮನಿರ್ಭರ ಭಾರತವನ್ನಾಗಿ ಮಾಡುವಲ್ಲಿ ಇದು ಸಹಾಯಕವಾಗಿದೆ. ನಾನು ಪ್ರಧಾನಮಂತ್ರಿಗಳಿಗೆ ಹಾಗೂ ಹಣಕಾಸು ಸಚಿವರಿಗೆ ಇಂತಹ ದೂರದೃಷ್ಟಿಯ ಬಜೆಟ್ ಮಂಡಿಸಿದ್ದಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದರು. ಇದನ್ನೂ ಓದಿ: ದೇಶದ ಆರ್ಥಿಕತೆಗೆ ಬೂಸ್ಟರ್ ಡೋಸ್ ನೀಡುವ ಬಜೆಟ್: ಶಶಿಕಲಾ ಜೊಲ್ಲೆ

ಬಜೆಟ್ ಮಂಡನೆ ಬಗ್ಗೆ ವಿವರಿಸಿದ ಅವರು, 2025ರೊಳಗೆ ಎಲ್ಲ ಹಳ್ಳಿಯಲ್ಲಿ ಒಎಫ್‍ಸಿ ಕೇಬಲ್ ಅಳವಡಿಕೆ. ಪ್ರತೀ ಹಳ್ಳಿಗಳಲ್ಲೂ ಆಪ್ಟಿಕಲ್ ಫೈಬರ್ ಕೇಬಲ್ ಸೌಕರ್ಯ ನೀಡಲಾಗುವುದು. ಆರೋಗ್ಯ ಕ್ಷೇತ್ರಕ್ಕೆ ಡಿಜಿಟಲ್ ಸೇವೆ, 200 ಟಿವಿ ಚಾನೆಲ್ ಮೂಲಕ ಶಿಕ್ಷಣ, ಸಹಜ ಕೃಷಿಗೆ ಒತ್ತು, ಮಾನಸಿಕ ಆರೋಗ್ಯಕ್ಕೆ ನಿಮ್ಹಾನ್ಸ್ ನೇತೃತ್ವದಲ್ಲಿ ರಾಷ್ಟ್ರೀಯ ಮೆಂಟಲ್ ಟೆಲಿ ಹಬ್ ಎಂದು ತಿಳಿಸಿದರು.

50 ವರ್ಷಗಳ ಕಾಲ ರಾಜ್ಯಗಳಿಗೆ ಬಡ್ಡಿರಹಿತ ಸಾಲ, 1 ಲಕ್ಷ ಕೋಟಿ ರೂ. ಸಾಲ ನೀಡಲು ನಿರ್ಧಾರ ಮಾಡಲಾಗಿದೆ. ಒಂದು ದೇಶ ಒಂದು ನೋಂದಣಿ ಜಾರಿ, 8 ಭಾಷೆಗಳಲ್ಲಿ ಆಸ್ತಿ ನೋಂದಣಿಗೆ ಏಕರೂಪದ ವ್ಯವಸ್ಥೆ, ಎಸ್‍ಸಿ-ಎಸ್‍ಟಿ ರೈತರಿಗೆ ಆರ್ಥಿಕ ನೆರವು. ನಮ್ಮ ಮೆಟ್ರೋಗೆ ನೆರವು, ನದಿ ಜೋಡಣೆಗೆ ಸಿದ್ಧತೆ ಸೇರಿದಂತೆ ಹಲವಾರು ಕಾರ್ಯಕ್ರಮ ನೀಡಿದ್ದಾರೆ. ಇದು ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಮಂಡಿಸಿದ ಬಜೆಟ್ ಅಲ್ಲ. ಜನರನ್ನು ಮುಖ್ಯವಾಗಿಸಿಕೊಂಡು ಮಂಡಿಸಿದ ಬಜೆಟ್ ಎಂದು ಬಣ್ಣಿಸಿದರು. ಇದನ್ನೂ ಓದಿ: ಜನರಿಗೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕೊಂಡು ಮನೆಯಲ್ಲಿ ಮಲಗಿ ಎನ್ನುವಂತಿದೆ ಈ ಬಜೆಟ್: ಹೆಚ್‍ಡಿಕೆ

Share This Article
Leave a Comment

Leave a Reply

Your email address will not be published. Required fields are marked *